ಮಹಿಳೆ ವಿಚಾರಕ್ಕೆ ನಡೆಯಿತಾ ಮೈಸೂರಿನ ಕಾರ್ತಿಕ್​ ಕೊಲೆ? ಎಸ್​ಪಿ ಹೇಳಿದ್ದಿಷ್ಟು

Edited By: ವಿವೇಕ ಬಿರಾದಾರ

Updated on: May 06, 2025 | 3:54 PM

ಮೈಸೂರಿನ ವರುಣ ಗ್ರಾಮದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕಾರ್ತಿಕ್ ಕೊಲೆಯಾಗಿದ್ದು ಹಣಕಾಸಿನ ವಿಚಾರವಲ್ಲ, ಬದಲಾಗಿ ಮಹಿಳೆಯ ಕಾರಣಕ್ಕೆ ಎಂದು ಪೊಲೀಸರು ತಿಳಿಸಿದ್ದಾರೆ. ಏಳು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಪ್ರವೀಣ್, ಈ ಹಿಂದೆ ಕಾರ್ತಿಕ್ ಅವರ ಚಾಲಕನಾಗಿದ್ದ, ಕಾರ್ತಿಕ್ ಅವರಿಂದ ಬೆದರಿಕೆ ಎದುರಿಸಿದ್ದರಿಂದ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಕಾರ್ತಿಕ್ ಮತ್ತು ಆರೋಪಿಗಳ ನಡುವೆ ವೈಯಕ್ತಿಕ ದ್ವೇಷವಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.

ಮೈಸೂರು, ಮೇ 06: ಮೈಸೂರು (Mysuru) ಹೊರವಲಯದ ವರುಣ ಗ್ರಾಮದ ಹೋಟೆಲ್‌ ಮುಂಭಾಗ ಭಾನುವಾರ (ಮೇ.04) ದಂದು ಮೈಸೂರು ನಗರದ ಕ್ಯಾತಮಾರನಹಳ್ಳಿ ನಿವಾಸಿ ಕಾರ್ತಿಕ್‌ (33) ಎಂಬ ವ್ಯಕ್ತಿಯ ಕೊಲೆಯಾಗಿತ್ತು. ಹಣಕಾಸಿನ ವಿಚಾರಕ್ಕೆ ಕಾರ್ತಿಕ್​ನನ್ನು ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೆ, ಕೊಲೆ ಹಿಂದಿನ ಕಾರಣ ಬೇರೆಯದ್ದೇಯಾಗಿದೆ. ಕಾರ್ತಿಕ್​ನನ್ನು ಕೊಲೆ ಮಾಡಲು ಕಾರಣವೇನು? ಎಂಬುವುದನ್ನು ಮೈಸೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ವಿಷ್ಣುವರ್ಧನ್ ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಮಹಿಳೆ ಸೇರಿ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದೇವೆ. ಮೊದಲು ದುಡ್ಡಿನ ವಿಚಾರಕ್ಕೆ ಕೊಲೆ ಆಗಿದೆ ಅನ್ನೋ ಮಾಹಿತಿ ಇತ್ತು. ನಂತರ ಮಹಿಳೆ ವಿಚಾರಕ್ಕೆ ಕೊಲೆ ಆಗಿದೆ ಅಂತಾ ಗೊತ್ತಾಗಿದೆ. ಈ ಹಿಂದೆ ಆರೋಪಿ ಪ್ರವೀಣ್​ಗೆ ಕಾರ್ತಿಕ್ ಕೊಲೆ ಬೆದರಿಕೆ ಹಾಕಿದ್ದನು. ಹಾಗಾಗಿ ಪ್ರವೀಣ್ ಗುಂಪು ಕಟ್ಟಿಕೊಂಡು ಕಾರ್ತಿಕ್​ನನ್ನು ಹತ್ಯೆ ಮಾಡಿದ್ದಾನೆ ಎಂದು ತಿಳಿಸಿದರು.

ಪ್ರವೀಣ್ ಈ ಹಿಂದೆ ಕಾರ್ತಿಕ್​ನ ಕಾರಿನ ಚಾಲಕನಾಗಿದ್ದನು. ಕೊಲೆಯಾದ ಕಾರ್ತಿಕ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದನು. ಕೊಲೆಯಲ್ಲಿ ಭಾಗಿಯಾಗಿರುವ ಎಲ್ಲರಿಗೂ ಕಾರ್ತಿಕ್​ಗೆ ಪರಿಚಯವಿತ್ತು. ಕಾರ್ತಿಕ್ ಜೊತೆ ಇದ್ದವರಿಗೆಲ್ಲ ವೈಯಕ್ತಿಕ ದ್ವೇಷ ಇತ್ತು ಎಂದು ಹೇಳಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More