Daily Devotional: ಕಾರ್ತಿಕ ಮಾಸದ ಆಚರಣೆಯ ಮಹತ್ವ ಹಾಗೂ ಫಲ ತಿಳಿಯಿರಿ

Updated on: Oct 23, 2025 | 6:45 AM

ಕಾರ್ತಿಕ ಮಾಸವು ತುಲಾ ರಾಶಿಯಲ್ಲಿ ರವಿ ಸಂಚಾರ ಮಾಡುವ ಅವಧಿಯಾಗಿದ್ದು, ಧಾರ್ಮಿಕ ಆಚರಣೆಗಳಿಗೆ ಶ್ರೇಷ್ಠವಾಗಿದೆ. ಸೂರ್ಯೋದಯಕ್ಕೂ ಮುನ್ನ ಸ್ನಾನ, ದೀಪಾರಾಧನೆ, ದೀಪದಾನ, ಉಪವಾಸ ಹಾಗೂ ವನಭೋಜನ ಪ್ರಮುಖವಾಗಿದ್ದು, ಇವು ಮೋಕ್ಷ, ಸುಭಿಕ್ಷತೆ ಮತ್ತು ಉತ್ತಮ ಆರೋಗ್ಯವನ್ನು ಕರುಣಿಸುತ್ತವೆ. ಈ ಮಾಸದಲ್ಲಿ ಸುಳ್ಳು ಹೇಳುವುದನ್ನು ತ್ಯಜಿಸಿ ಶುಭಫಲ ಪಡೆಯಿರಿ.

ಬೆಂಗಳೂರು, ಅಕ್ಟೋಬರ್​ 23: ಕಾರ್ತಿಕ ಮಾಸವು ಧಾರ್ಮಿಕವಾಗಿ ಅತ್ಯಂತ ಶ್ರೇಷ್ಠ ಮಾಸಗಳಲ್ಲಿ ಒಂದಾಗಿದೆ. ತುಲಾ ರಾಶಿಯಲ್ಲಿ ಸೂರ್ಯನು ಸಂಚರಿಸುವ ಈ ಅವಧಿಯನ್ನು ತುಲಾ ಮಾಸ ಎಂದೂ ಕರೆಯಲಾಗುತ್ತದೆ. ಈ ಮಾಸದಲ್ಲಿ ನಡೆಸುವ ಆಚರಣೆಗಳು ನಮ್ಮ ಜೀವನವನ್ನು ಸುಭಿಕ್ಷಗೊಳಿಸಿ, ಉತ್ತಮ ಆರೋಗ್ಯ ಮತ್ತು ಮೋಕ್ಷವನ್ನು ನೀಡುತ್ತದೆ. ಕಾರ್ತಿಕ ಮಾಸದಲ್ಲಿ ಸೂರ್ಯೋದಯಕ್ಕೂ ಮುನ್ನ ತಣ್ಣೀರಿನ ಸ್ನಾನಕ್ಕೆ ವಿಶೇಷ ಮಹತ್ವವಿದೆ. ನದಿ, ಕ್ಷೇತ್ರ ಅಥವಾ ಮನೆಯಲ್ಲೇ ಸಪ್ತ ನದಿಗಳ ಸ್ಮರಣೆಯೊಂದಿಗೆ ಸ್ನಾನ ಮಾಡುವುದು ದೈಹಿಕ ಮತ್ತು ಮಾನಸಿಕ ಶುದ್ಧಿಗೆ ಸಹಾಯಕವಾಗಿದೆ. ಸ್ನಾನದ ನಂತರ ಸೂರ್ಯ ಭಗವಾನನಿಗೆ ಅರ್ಘ್ಯ ಅರ್ಪಿಸುವುದು ಮತ್ತು ಕುಲದೇವರು, ಇಷ್ಟದೇವರ ಪೂಜೆ ಮಾಡುವುದು ಶುಭ.