ವೀಕೆಂಡ್ನಲ್ಲಿ ಬೆಂಗಳೂರಿಗರಿಗೆ ಕಾವೇರಿ ಕಂಟಕ ; ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿಗಾಗಿಯೂ ಹಾಹಾಕಾರ
ಬೆಂಗಳೂರು ನೀರು ಸರಬರಾಜು ಮಂಡಳಿ ಮೂರು ಹಂತಗಳ ಪಂಪಿಂಗ್ ಸ್ಟೇಷನ್ ದುರಸ್ತಿ ಮಾಡ್ತಿದೆ. ಇದ್ರಿಂದಾಗಿ ಇಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ನಗರದ ವಿವಿಧ ಕಡೆ ನೀರು ಪೂರೈಕೆ ಬಂದ್ ಆಗಿದೆ.
ಬೆಂಗಳೂರು: ಹನಿ ನೀರಿಲ್ಲದೆ, ಯಾವ ಕೆಲಸವೂ ನಡೆಯಲ್ಲ. ಬೆಂಗಳೂರಂತ ಬೆಂಗಳೂರಲ್ಲಿ ಜೀವ ಜಲ ತುಂಬಾ ಮುಖ್ಯ. ನೀರು ಬರೋದು ಒಂದು ಗಂಟೆ ತಡವಾದ್ರೂ ಎಲ್ಲಾ ಕೆಲಸ ಉಲ್ಟಾ ಆಗ್ತವೆ. ಅದರಲ್ಲೂ ಇಂದು ಭಾನುವಾರ, ವಾರದ ರಜೆ. ಹೀಗಾಗಿ ಮಂದಿಯೆಲ್ಲಾ ಮನೆಯಲ್ಲಿ ಆರಾಮಾಗಿ ಕಾಲ ಕಳೆಯೋಣ, ಮನೆಯಲ್ಲಿ ಏನಾದ್ರು ಸ್ಪೆಷಲ್ ಅಡುಗೆ ಮಾಡಿ ಸವಿಯೋಣ ಅಂತ ಪ್ಲಾನ್ ಮಾಡಿಕೊಂಡಿರುತ್ತಾರೆ. ಆದ್ರೆ ಇಂದು ಇಡೀ ಅರ್ಧ ಬೆಂಗಳೂರಿನಲ್ಲಿ ನೀರು ಬಂದ್ ಆಗಿದೆ. ಸಿಲಿಕಾನ್ ಸಿಟಿ ಜನರಿಗೆ ಜಲಮಂಡಳಿ ಬಿಗ್ ಶಾಕ್ ಕೊಟ್ಟಿದೆ. ಈ ಬಿಸಿಲ ಮಧ್ಯೆ ನೀರಿಲ್ಲದೆ ಬೆಂಗಳೂರಿಗರು ಹನಿ ನೀರಿಗಾಗಿಯೂ ಇಂದು ಪರದಾಡುತ್ತಿದ್ದಾರೆ.
ಬೆಂಗಳೂರು ನೀರು ಸರಬರಾಜು ಮಂಡಳಿ ಮೂರು ಹಂತಗಳ ಪಂಪಿಂಗ್ ಸ್ಟೇಷನ್ ದುರಸ್ತಿ ಮಾಡ್ತಿದೆ. ಇದ್ರಿಂದಾಗಿ ಇಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ನಗರದ ವಿವಿಧ ಕಡೆ ನೀರು ಪೂರೈಕೆ ಬಂದ್ ಆಗಿದೆ.
Published on: Feb 26, 2023 12:10 PM