ನಿಂಜಾ 125 ಮತ್ತು ನಿಂಜಾ ಜೆಡ್ 125 ಬೈಕ್ಗಳನ್ನು ಹೊಸ ಬಣ್ಣಗಳ ಸಂಯೋಜನೆಯೊಂದಿಗೆ ಬಿಡುಗಡೆ ಮಾಡುತ್ತಿದೆ ಕವಾಸಾಕಿ
ಮೈಲೇಜ್ ಬಗ್ಗೆ ಹೇಳುವುದಾದರೆ ಪ್ರತಿ ಲೀಟರ್ ಗೆ ಇದು 40-45 ಕಿಮೀ ಓಡುತ್ತದೆ ಮತ್ತು ಫ್ಯುಯೆಲ್ ಟ್ಯಾಂಕ್ ಸಾಮರ್ಥ್ಯ 11 ಲೀಟರ್ ಆಗಿದೆ. ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್, ಲೈಮ್ ಗ್ರೀನ್ ಮತ್ತು ಬಿಸಾರ್ಡ್ ವ್ಹೈಟ್ ಬಣ್ಣಗಳಲ್ಲಿ ಬೈಕ್ಗಳು ಲಭ್ಯವಾಗಲಿವೆ.
ಕವಾಸಾಕಿ ತನ್ನ ಎರಡು ಬೈಕ್ಗಳನ್ನು-ನಿಂಜಾ 125 ಮತ್ತು ನಿಂಜಾ ಜೆಡ್ 125 ಹೊಸ ಬಣ್ಣಗಳೊಂದಿಗೆ ಮುಂದಿನ ವರ್ಷ ಲಾಂಚ್ ಮಾಡಲು ಅಣಿಯಾಗುತ್ತಿದೆ. ಕಂಪನಿಯ ಮೂಲಗಳ ಪ್ರಕಾರ ನಿಂಜಾ 250ಎಸ್ ಎಲ್ ನಿಂದ ಪ್ರೇರಣೆ ಹೊಂದಿ ಬದಲಾವಣೆಗಳನ್ನು ಮಾಡಲಾಗಿದೆಯಂತೆ. ಕವಸಾಕಿ ನಿಂಜಾ 125 ಮತ್ತು ನಿಂಜಾ ಜೆಡ್ 125 ಬೈಕ್ಗಳ ವಿಶೇಷತೆಗಳನ್ನು ನೀವು ಗಮನಿಸಿದ್ದೇಯಾದರೆ, ಇವು ಭಾರತದ 150 ಸಿಸಿ ಬೈಕ್ ಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿವೆಯಂತೆ. ಅದರರ್ಥ ನಿಂಜಾ 125 ಮತ್ತು ನಿಂಜಾ ಜೆಡ್ 125 ಎಂಜಿನ್ ಗಳು ಜಾಸ್ತಿ ಪವರ್ಫುಲ್ ಆಗಿವೆ. ಈ ಬೈಕ್ಗಳು ಸಿಂಗಲ್ ಸಿಲಿಂಡರ್ 125 ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್ ಆಗಿದ್ದು, 10,000 ಆರ್‌ಪಿಎಂನಲ್ಲಿ 15 ಎಚ್‌ಪಿ ಮತ್ತು 7,700 ಆರ್‌ಪಿಎಂನಲ್ಲಿ 11.7 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತವೆ.
ಕವಾಸಾಕಿ ನಿಂಜಾ 125 ಬೈಕ್‌ನ ಗರಿಷ್ಠ ವೇಗ ಗಂಟೆಗೆ 120 ಕಿಮೀ. ನಿಂಜಾ 125 ಬೈಕ್ನಲ್ಲಿ ರಿಚ್ ಅನಿಸುವ ವೈಶಿಷ್ಟ್ಯತೆಗಳು ಮತ್ತು ಪ್ರೀಮಿಯಂ ಘಟಕಗಳನ್ನು ನೋಡಬಹುದು. ಉಪಕರಣದಂತೆ, ಕನ್ಸೋಲ್ ಸಂಪೂರ್ಣ ಡಿಜಿಟಲ್, ಡ್ಯುಯಲ್ ಎಬಿಎಸ್ ಚಾನೆಲ್ ಮತ್ತು ಇದು ಆರು-ಸ್ಪೀಡ್ ಪ್ರಸರಣವಾಗಿದೆ.
ಮೈಲೇಜ್ ಬಗ್ಗೆ ಹೇಳುವುದಾದರೆ ಪ್ರತಿ ಲೀಟರ್ ಗೆ ಇದು 40-45 ಕಿಮೀ ಓಡುತ್ತದೆ ಮತ್ತು ಫ್ಯುಯೆಲ್ ಟ್ಯಾಂಕ್ ಸಾಮರ್ಥ್ಯ 11 ಲೀಟರ್ ಆಗಿದೆ. ಹಿಂದಿನ ಟೈರ್ ಗಾತ್ರವು 130/70-17ಎಮ್/ಸಿ 62 ಎಸ್ ಮತ್ತು ಮುಂಭಾಗ 100/80-17ಎಮ್ 53ಎಸ್ ಆಗಿದೆ.
ಕವಾಸಾಕಿ ನಿಂಜಾ 125 ಸಿಸಿಯ ಎಕ್ಸ್ ಶೋರೂಮ್ ಬೆಲೆ ರೂ. 1.30 ಲಕ್ಷಗಳಾಗಿದೆ ಮತ್ತು ಅದರ ತೂಕ 148 ಕೆಜಿ ಆಗಿರುತ್ತದೆ. ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ 2022ರಲ್ಲಿ ನಿಂಜಾ 125 ಮತ್ತು ನಿಂಜಾ ಜೆಡ್ 125 ಬೈಕ್ಗಳ ಮಾರಾಟ ಯುರೋಪ್ನಿಂದ ಆರಂಭವಾಗಲಿದೆ. ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್, ಲೈಮ್ ಗ್ರೀನ್ ಮತ್ತು ಬಿಸಾರ್ಡ್ ವ್ಹೈಟ್ ಬಣ್ಣಗಳಲ್ಲಿ ಬೈಕ್ಗಳು ಲಭ್ಯವಾಗಲಿವೆ.
ಇದನ್ನೂ ಓದಿ: ಜಾಗಿಂಗ್ ನೆಪದಲ್ಲಿ ಗರ್ಲ್ ಫ್ರೆಂಡ್ ಮೀಟ್ ಮಾಡೋಕೆ ಬಂದ ಗಂಡನನ್ನ ರೆಡ್ ಹ್ಯಾಂಡ್ಆಗಿ ಹಿಡಿದ ಪತ್ನಿ! ವಿಡಿಯೋ ನೋಡಿ