ಕೆಸಿಅರ್ ಮತ್ತು ಕೆಟಿಆರ್ ನನ್ನನ್ನು ಡೋಂಗಿ ಅಂತ ತೆಲಂಗಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ: ಸಿದ್ದರಾಮಯ್ಯ
ಪ್ರತಿಯೊಬ್ಬ ವ್ಯಕ್ತಿ ಮನುಷ್ಯತ್ವ ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದು ಭಾವೈಕ್ಯತಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ತನ್ನಂತೆ ಬೇರೆಯವರು ಸಹ ಮನುಷ್ಯರು ಎಂಬ ಧೋರಣೆ ರೂಢಿಸಿಕೊಂಡು ದ್ವೇಷ, ಅಸೂಯೆಗಳನ್ನು ಬದಿಗಿಟ್ಟು ಸೌಹಾರ್ದತೆಯಿಂದ ಬಾಳ್ವೆ ನಡೆಸಬೇಕು ಎಂದು ಅವರು ಹೇಳಿದರು.
ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯಲ್ಲಿ ನಡೆದ ಭಾವೈಕ್ಯತಾ ಸಮಾವೇಶದಲ್ಲಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಮ್ಮನ್ನು ಡೋಂಗಿ ಅಂತ ಹೇಳಿದ ತೆಲಂಗಾಣ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್ ರಾವ್ (KC Chandrashekar) ಮತ್ತು ಅವರ ಮಗ ಕೆಟಿ ರಾಮರಾವ್ (KT Rama Rao) ಅವರ ವಿರುದ್ಧ ಟೀಕಾಪ್ರಹಾರ ನಡೆಸಿದರು. ರಾಜಕೀಯ ಪಕ್ಷಗಳು ಚುನಾವಣೆ ಸಮಯದಲ್ಲಿ ಜನರಿಗೆ ಭರವಸೆಗಳನ್ನು ಅಧಿಕಾರಕ್ಕೆ ಬರುತ್ತವೆ. ಆದರೆ, ಅಧಿಕಾರ ಸಿಕ್ಕ ಬಳಿಕ ನೀಡಿದ ಭರವಸೆಗಳನ್ನು ಮರೆಯಬಾರದು, ತಾವು ಜನರಿಗೆ ನೀಡಿದ್ದ 5 ಗ್ಯಾರಂಟಿಗಳ ಪೈಕಿ ನಾಲ್ಕನ್ನು ಈಗಾಗಲೇ ಜಾರಿ ಮಾಡಿದ್ದೇವೆ ಎಂದು ಹೇಳಿದ ಸಿದ್ದರಾಮಯ್ಯ ಮಾಡಿದ್ದೇವೆಯೋ ಇಲ್ಲವೋ ಅಂತ ನೆರೆದಿದ್ದ ಜನರನ್ನು ಕೇಳಿದಾಗ ಅವರೆಲ್ಲ ಜೋರಾಗಿ ಹೌದು ಅನ್ನುತ್ತಾರೆ. ಮುಂದುವರಿದು ಮಾತಾಡಿದ ಸಿದ್ದರಾಮಯ್ಯ, ತೆಲಂಗಾಣದ ಮುಖ್ಯಮಂತ್ರಿ ಅಲ್ಲಿನ ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ಡೋಂಗಿ ಸರ್ಕಾರ, ಜನರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ ಅನ್ನುತ್ತಿದ್ದಾರೆ. ಅವರಿಗೆ ಕರ್ನಾಟಕಕ್ಕೆ ಬಂದು ತಮ್ಮ ಸರ್ಕಾರ ಏನು ಮಾಡಿದೆ ನೋಡುವಂತೆ ಅಮಂತ್ರಣ ನೀಡಿದ್ದರೂ ಬಂದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ