Yuvam-23: ಕೇರಳದ ಯುವಕರು ರಾಜ್ಯದ ಎಲ್ಲ ಮಹಾನ್ ವ್ಯಕ್ತಿಗಳಿಂದ ಪ್ರೇರಣೆ ಪಡೆಯಬೇಕು: ಪ್ರಧಾನ ಮಂತ್ರಿ ನರೇಂದ್ರ ಮೋದಿ
ಇಂದು ಅಯೋಜಿಸಲಾದ ಯುವಂ-23 ಕಾರ್ಯ್ರಮದಲ್ಲಿ ಭಾಗವಹಿಸಿ ಮಾತಾಡಿದ ಪ್ರಧಾನಿ ಮೋದಿಯವರು ನೆರೆದಿದ್ದ ಯುವಕರನ್ನು ಮೊದಲಿಗೆ ಮಲೆಯಾಳಂ ಭಾಷೆಯಲ್ಲಿ ಸಂಬೋಧಿಸಿದರು.
ಕೊಚ್ಚಿ (ಕೇರಳ): ಪ್ರಧಾನ ಮಂತ್ರಿ ನರೇಂದ್ರ ಮೋದಿ ಯಾವುದೇ ರಾಜ್ಯಕ್ಕೆ ಹೋದರೂ ಅಲ್ಲಿನ ಜನರನ್ನು ಅವರ ಭಾಷೆಯಲ್ಲಿ ನಮಸ್ಕರಿಸುತ್ತಾರೆ. ನಗರದಲ್ಲಿ ಇಂದು ಅಯೋಜಿಸಲಾದ ಯುವಂ-23 ಕಾರ್ಯ್ರಮದಲ್ಲಿ ಭಾಗವಹಿಸಿ ಮಾತಾಡಿದ ಪ್ರಧಾನಿ ಮೋದಿಯವರು ನೆರೆದಿದ್ದ ಯುವಕರನ್ನು ಮೊದಲಿಗೆ ಮಲೆಯಾಳಂ ಭಾಷೆಯಲ್ಲಿ ಸಂಬೋಧಿಸಿದರು. ಯುವಕರನ್ನು ಉದ್ದೇಶಿಸಿ ಮಾತಾಡುವಾಗ ಅವರು ಕೇರಳದ ಎಲ್ಲ ಮಹಾನ್ ನಾಯಕರು, ವಿದ್ವಾಂಸರು, ದಾರ್ಶನಿಕರು ಮಲೆಯಾಳಿ ಯುವಕರಿಗೆ ಸ್ಫೂರ್ತಿಯಾಗಬೇಕು ಎಂದು ಹೇಳಿದರು. ಕೇರಳದಲ್ಲಿ ಬದಲಾವಣೆಯ ಗಾಳಿ ಬೀಸಲು ಕಾರಣವಾಗುತ್ತಿರುವ ಯುವಜನತೆಯನ್ನು ಪ್ರಧಾನಿ ಮೋದಿ ಅಭಿನಂದಿಸಿದರು. ಇತ್ತೀಚಿಗೆ ಪದ್ಮಶ್ರೀ ಪ್ರಶಸ್ತಿಯಿಂದ ಸನ್ಮಾನಿತರಾದ ಕೇರಳದ 99-ವರ್ಷ ವಯಸ್ಸಿನ ಗಾಂಧಿವಾದಿ ವಿಪಿ ಅಪ್ಪುಕುಟ್ಟನ್ ಪೊದುವಾಳ್ ಅವರನ್ನು 99ರ ಯುವಕ ಎಂದು ಉಲ್ಲೇಖಿಸಿದ ಪ್ರಧಾನಿಯವರು, ವಯಸ್ಸಿನ ತಾರತಮ್ಯ ಮಾಡದೆ ಕೇಂದ್ರದ ಬಿಜೆಪಿ ಸರ್ಕಾರ ಪ್ರತಿಭೆಯನ್ನು ಗುರುತಿಸುತ್ತದೆ ಎಂದು ಹೇಳಿದರು. ಆದಿ ಶಂಕರನ್, ಶ್ರೀನಾರಾಯಣ ಮೊದಲಾದವರು ಸೇರಿದಂತೆ ಕೇರಳದ ಎಲ್ಲ ಮಹಾನ್ ವ್ಯಕ್ತಿಗಳನ್ನು ಪ್ರಧಾನಿ ಈ ಸಂದರ್ಭದಲ್ಲಿ ಸ್ಮರಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ