Video: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ, ಪ್ರಮುಖ ಸೇತುವೆ ಧ್ವಂಸ
ಇಸ್ರೇಲ್-ಅಮೆರಿಕವು ಇರಾನ್ ಮೇಲಿನ ದಾಳಿಯನ್ನು ಮುಂದುವರೆಸಿದೆ. ಮಧ್ಯಪ್ರಾಚ್ಯದಲ್ಲಿನ ಯುದ್ಧವು ಎರಡನೇ ತಿಂಗಳಿಗೆ ಕಾಲಿಟ್ಟಿದೆ. ಇರಾನ್ನ ಅಲ್ಬೋರ್ಜ್ ಪ್ರಾಂತ್ಯದಲ್ಲಿ ಅಮೆಡರಿಕ-ಇಸ್ರೇಲಿ ಕ್ಷಿಪಣಿ ದಾಳಿಯಿಂದಾಗಿ ಕರಾಜ್ನಲ್ಲಿರುವ ಬಿ1 ಸೇತುವೆ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಈ ದಾಳಿಯಿಂದ ಗಣನೀಯ ಹಾನಿಯಾಗಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಗುರುವಾರ ಟ್ರಂಪ್ ಸುದ್ದಿಗೋಷ್ಠಿ ನಡೆಸಿ ಪ್ರಸ್ತುತ ಯುದ್ಧ ಸ್ಥಿತಿ ಬಗ್ಗೆ ಮಾತನಾಡಿದ್ದರು.
ಟೆಹ್ರಾನ್, ಏಪ್ರಿಲ್ 3: ಇಸ್ರೇಲ್-ಅಮೆರಿಕವು ಇರಾನ್ ಮೇಲಿನ ದಾಳಿಯನ್ನು ಮುಂದುವರೆಸಿದೆ. ಮಧ್ಯಪ್ರಾಚ್ಯದಲ್ಲಿನ ಯುದ್ಧವು ಎರಡನೇ ತಿಂಗಳಿಗೆ ಕಾಲಿಟ್ಟಿದೆ. ಇರಾನ್ನ ಅಲ್ಬೋರ್ಜ್ ಪ್ರಾಂತ್ಯದಲ್ಲಿ ಅಮೆಡರಿಕ-ಇಸ್ರೇಲಿ ಕ್ಷಿಪಣಿ ದಾಳಿಯಿಂದಾಗಿ ಕರಾಜ್ನಲ್ಲಿರುವ ಬಿ1 ಸೇತುವೆ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಈ ದಾಳಿಯಿಂದ ಗಣನೀಯ ಹಾನಿಯಾಗಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಗುರುವಾರ ಟ್ರಂಪ್ ಸುದ್ದಿಗೋಷ್ಠಿ ನಡೆಸಿ ಪ್ರಸ್ತುತ ಯುದ್ಧ ಸ್ಥಿತಿ ಬಗ್ಗೆ ಮಾತನಾಡಿದ್ದರು.
ಇರಾನ್ ಮೇಲಿನ ದಾಳಿ ಮುಂದುವರೆಸುವುದಾಗಿ ಹೇಳಿದ್ದರು. ಅಷ್ಟೇ ಅಲ್ಲದೆ ಹಾರ್ಮುಜ್ ಜಲಸಂಧಿಯಿಂದ ತಮಗೇನು ಉಪಯೋಗವಿಲ್ಲ, ನಮ್ಮ ಹಡಗುಗಳೇನು ಅಲ್ಲಿಂದ ಬರುವುದಿಲ್ಲ, ನಮ್ಮಲ್ಲೇ ಬೇಕಾದಷ್ಟು ತೈಲ ಇದೆ, ನೀವೇ ಬೇಕಿದ್ದರೆ ನಮ್ಮಿಂದ ತೈಲ ಖರೀದಿಸಿ ಎಂದು ಬೇರೆ ದೇಶಗಳಿಗೆ ಸಲಹೆ ನೀಡಿದ್ದರು. ಇದಾದ ಬಳಿಕ ಅಮೆರಿಕ-ಇಸ್ರೇಲ್ ಜಂಟಿಯಾಗಿ ತಮ್ಮ ದಾಳಿಯನ್ನು ಮುಂದುವರೆಸಿವೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

