ಬಾಲ್ಯ ಸ್ನೇಹಿತನ ಮದುವೆಗೆ ಪತ್ನಿ ಸಮೇತ ಬಂದು ಹರಸಿದ ಯಶ್; ಸಲಾಂ ರಾಕಿ ಭಾಯ್ ಎಂದ ಫ್ಯಾನ್ಸ್
Yash Friend Marriage: ಮೈಸೂರಿನ ಸಾ ರಾ ಕಲ್ಯಾಣ ಮಂಟಪದಲ್ಲಿ ಯಶ್ ಸ್ನೇಹಿತ ಚೇತನ್ ಅವರ ವಿವಾಹ ಸಮಾರಂಭ ನಡೆದಿದೆ. ರಾಧಿಕಾ ಪಂಡಿತ್ ಜೊತೆ ‘ರಾಕಿಂಗ್ ಸ್ಟಾರ್’ ಯಶ್ ಅವರು ಬಂದು ಬಾಲ್ಯ ಸ್ನೇಹಿತನಿಗೆ ವಿಶ್ ಮಾಡಿದ್ದಾರೆ.
ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಯಶ್ ಮಿಂಚುತ್ತಿದ್ದಾರೆ. ಸದ್ಯ ಅವರು ‘ಕೆಜಿಎಫ್: ಚಾಪ್ಟರ್ 2’ (KGF 2) ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಹೊಸ ಸಿನಿಮಾ ಕೈಗೆತ್ತಿಕೊಳ್ಳುವುದಕ್ಕೂ ಮುನ್ನ ಫ್ಯಾಮಿಲಿ ಜೊತೆ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಈಗ ಅವರು ತಮ್ಮ ಬಾಲ್ಯದ ಸ್ನೇಹಿತ ಚೇತನ್ ಮದುವೆಗೆ ಹಾಜರಿ ಹಾಕಿದ್ದಾರೆ. ಪಟಾಕಿ ಸಿಡಿಸಿ ಅವರನ್ನು ಸ್ವಾಗತಿಸಲಾಯಿತು. ಮೈಸೂರಿನಲ್ಲಿ ನಡೆದ ಈ ವಿವಾಹ ಸಮಾರಂಭಕ್ಕೆ ಪತ್ನಿ ರಾಧಿಕಾ ಪಂಡಿತ್ ಜೊತೆ ಆಗಮಿಸಿದ ಯಶ್ (Yash) ಅವರನ್ನು ಕಂಡು ಫ್ಯಾನ್ಸ್ ಕೇಕೆ ಹಾಕಿದರು. ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ನವಜೋಡಿಗೆ ಶುಭ ಹಾರೈಸಿದ ಬಳಿಕ ಯಶ್ ಹಾಗೂ ರಾಧಿಕಾ (Radhika Pandit) ಅವರು ಅಭಿಮಾನಿಗಳತ್ತ ಕೈ ಬೀಸಿದರು. ಈ ಮದುವೆಗೆ ಅಭಿಷೇಕ್ ಅಂಬರೀಷ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.