Karnataka Assembly Polls: ಇಬ್ಬರು ಹೆಂಡತಿಯರ ತಲೆಮೇಲೆ ಕೈಯಿಟ್ಟು ಚಿಕ್ಕಪೇಟೆ ಜನರಿಗೆ ಮೋಸ ಮಾಡಲ್ಲವೆಂದ ಕೆಜಿಎಫ್ ಬಾಬು

|

Updated on: Apr 24, 2023 | 5:26 PM

ಸುರ್ಜೆವಾಲಾ ಮತ್ತು ವೇಣುಗೋಪಾಲ್ ತನಗೆ ಪೋನ್ ಮಾಡಿ ನಾಪಪತ್ರ ಹಿಂಪಡೆಯುವಂತೆ ಹೇಳಿ; ರಾಜ್ಯಸಭಾ ಇಲ್ಲವೇ ವಿಧಾನ ಪರಿಷತ್ ಸದಸ್ಯ ಮಾಡುವ ಭರವಸೆ ನೀಡಿದರು ಅಂತ ಬಾಬು ಹೇಳಿದರು

ಬೆಂಗಳೂರು: ಕೆಲ ದಿನಗಳ ಹಿಂದೆ ಕುಬೇರ ಕೆಜಿಎಫ್ ಬಾಬು (KGF Babu) ಜೆಡಿಎಸ್ ಪಕ್ಷ ಸೇರಿ ಆ ಪಕ್ಷದ ಟಿಕೆಟ್ ನಿಂದ ಚಿಕ್ಕಪೇಟೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಅಂತ ಗುಲ್ಲೆದ್ದಿತ್ತು. ಅದರೆ ಪ್ರಾಯಶಃ ಹೆಚ್ ಡಿ ಕುಮಾರಸ್ವಾಮಿಗೆ (HD Kumaraswamy) ಅವರ ಅಗತ್ಯವಿರಲಿಲ್ಲ. ಎರಡೂ ಪಕ್ಷಗಳು ಕೈಬಿಟ್ಟಿದ್ದರಿಂದ ರೊಚ್ಚಿಗೆದ್ದ ಬಾಬು ಪಕ್ಷೇತರ ಅಬ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಚಿಕ್ಕಪೇಟೆಯಲ್ಲಿ ಇಂದು ಟಿವಿ9 ಕನ್ನಡ ವಾಹಿನಿಯ ವರದಿಗಾರನೊಂದಿಗೆ ಮಾತಾಡಿದ ಬಾಬು, ಕಾಂಗ್ರೆಸ್ ಪಕ್ಷದ ಕರ್ನಾಟಕ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ (Randeep Singh Surjewala) ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ (KC Venugopal) ತನಗೆ ಪೋನ್ ಮಾಡಿ ನಾಪಪತ್ರ ಹಿಂಪಡೆಯುವಂತೆ ಹೇಳಿ, ರಾಜ್ಯಸಭಾ ಇಲ್ಲವೇ ವಿಧಾನ ಪರಿಷತ್ ಸದಸ್ಯ ಮಾಡುವ ಭರವಸೆ ನೀಡಿದರು ಅಂತ ಹೇಳಿದರು. ಅದರೆ, ಚಿಕ್ಕಪೇಟೆ ಕ್ಷೇತ್ರದ ಜನರಿಗೆ ಹಲವಾರು ಭರವಸೆಗಳನ್ನು ನೀಡಿರುವುದರಿಂದ ಕಾಂಗ್ರೆಸ್ ನಾಯಕರ ಆಫರ್ ತಿರಸ್ಕರಿಸಿದೆ, ಕ್ಷೇತ್ರದ ಜನರಿಗೆ ಯಾವಕಾರಣಕ್ಕೂ ಮೋಸ ಮಾಡಲ್ಲ ಎಂದು ಬಾಬು ತಮ್ಮ ಇಬ್ಬರು ಪತ್ನಿಯರ ತಲೆಮೇಲೆ ಕೈಯಿಟ್ಟು ಪ್ರಮಾಣ ಮಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 24, 2023 05:25 PM