ಲೈವ್ನಲ್ಲೇ ಕಣ್ಣೀರು ಹಾಕಿದ ಕಿಯಾರಾ ಅಡ್ವಾಣಿ
ತಮ್ಮ ಬದುಕಿನ ಹೊಸ ಪಯಣದ ಬಗ್ಗೆ ಮಾತನಾಡಿದ ಕಿಯಾರಾ ಅಡ್ವಾಣಿ, ಮಗುವಿನ ಜನನದ ನಂತರ ಇತರರ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ಸ್ವತಃ ತಮ್ಮನ್ನು ತಾವು ಪ್ರೀತಿಸುವುದು ಹಾಗೂ ಅರಿತುಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಭಾವುಕರಾಗಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.
ತಾಯಿಯಾದ ನಂತರದ ಜರ್ನಿ ಬಗ್ಗೆ ಕಿಯಾರಾ ರಾಜ್ ಶಮಾನಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ‘ನಾವು ಜೀವನಪೂರ್ತಿ ಇತರರಿಗಾಗಿ ಬದುಕುತ್ತೇವೆ, ಆದರೆ ನಮ್ಮೊಂದಿಗೆ ನಾವು ಹೊಂದಿರಬೇಕಾದ ಸಂಬಂಧವನ್ನು ಮರೆತುಬಿಡುತ್ತೇವೆ. ಈಗ ನಾನು ಅಂತಿಮವಾಗಿ ನನಗಾಗಿ ಸಮಯ ಮೀಸಲಿಡುವುದನ್ನು ಕಲಿಯುತ್ತಿದ್ದೇನೆ’ ಎಂದು ಕಿಯಾರಾ ಕಣ್ಣೀರು ಹಾಕಿದ್ದಾರೆ. ಈ ಬದಲಾವಣೆಯು ಅವರ ಜೀವನದ ಅತ್ಯುತ್ತಮ ಅನುಭವಗಳಲ್ಲಿ ಒಂದೆಂದು ಅವರು ಹೇಳಿಕೊಂಡಿದ್ದಾರೆ. 2025ರ ಜುಲೈ 15ರಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದರು. ಸರಾಯ ಎಂದು ಮಗುವಿಗೆ ಹೆಸರು ಇಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos

