ಮುನಿರತ್ನ ಹೇಳಿದ ಜೋಕ್​ಗೆ ಹೊಟ್ಟೆ ಹುಣ್ಣಾಗುವಂತೆ ನಕ್ಕ ಸುದೀಪ್

Updated on: Oct 23, 2025 | 2:58 PM

ಸುದೀಪ್ ಅವರು ಫನ್ ವ್ಯಕ್ತಿತ್ವ. ಹಾಸ್ಯ ಹೇಳಿದರೆ ಅವರು ನಗುತ್ತಾರೆ. ಇದಕ್ಕೆ ಹೊಸ ಉದಾಹರಣೆ ಸಿಕ್ಕಿದೆ. ಇಂದು ರಾಜೇಂದ್ರ ಸಿಂಗ್ ಬಾಬು ಅವರ 50ನೇ ವರ್ಷದ ಚಿತ್ರರಂಗದ ಸೆಲೆಬ್ರೇಷನ್ ವೇಳೆ ಸುದೀಪ್ ಹಾಗೂ ಮುನಿರತ್ನ ಅವರ ಫನ್ ಕನ್ವರ್ಸೇಷನ್ ವೈರಲ್ ಆಗಿ ಗಮನ ಸೆಳೆದಿದೆ.

ಹಿರಿಯ ನಿರ್ದೇಶಕ ಎಸ್​ವಿ ರಾಜೇಂದ್ರಸಿಂಗ್ ಬಾಬು ಚಿತ್ರರಂಗದಲ್ಲಿ 50 ವರ್ಷ ಕಳೆದಿದ್ದಾರೆ. ಹೀಗಾಗಿ, ‘ಎಸ್.ವಿ.ಆರ್ 50’ ಸಮಾರಂಭದ ಉದ್ಘಾಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ನಡೆದಿದೆ. ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ, ನಟ ಕಿಚ್ಚ ಸುದೀಪ್, ಬೆಂಗಳೂರಿನ ಆರ್​ಆರ್​ ನಗರ ಶಾಸಕ ಮುನಿರತ್ನ ಮೊದಲಾದವರು ಹಾಜರಿದ್ದರು. ಮುನಿರತ್ನ ಹೇಳಿದ ಹಾಸ್ಯಕ್ಕೆ ಸುದೀಪ್ ನಕ್ಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.