‘ಇದನ್ನು ಅವರು ಧೈರ್ಯ ಇದ್ದರೆ ಮನೆಯಲ್ಲಿ ಮಾಡಲಿ’; ಡಾರ್ಲಿಂಗ್ ಕೃಷ್ಣಗೆ ಸುದೀಪ್ ಸವಾಲ್

Updated on: Jul 15, 2023 | 10:00 AM

‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಸುದೀಪ್ ಆಗಮಿಸಿದ್ದರು. ಈ ವೇಳೆ ಅವರು ಒಂದು ಸವಾಲು ಹಾಕಿದ್ದಾರೆ.

ಸುದೀಪ್ ಅವರು ಅನೇಕ ಸಿನಿಮಾಗಳಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಅದೇ ರೀತಿ ಡಾರ್ಲಿಂಗ್ ಕೃಷ್ಣ (Darling Krishna) ನಟನೆಯ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಸುದೀಪ್ ಆಗಮಿಸಿದ್ದರು. ಈ ಸಿನಿಮಾದ ಕಥೆ ಪುರುಷರ ಅಹಂಕಾರದ ಸುತ್ತ ನಡೆಯುತ್ತದೆ. ಟ್ರೇಲರ್​ನಲ್ಲಿ ಈ ಬಗ್ಗೆ ಹಿಂಟ್ ಸಿಕ್ಕಿದೆ. ‘ಹೆಣ್ಣುಮಕ್ಕಳು ತಲೆಮೇಲೆ ಕೂರೋಕೆ ಬಂದರೆ ಅವರ ಕಾಲೆಳೆದು ಕೂರಿಸಬೇಕು’ ಎನ್ನುವ ಡೈಲಾಗ್ ಸಿನಿಮಾದ ಟ್ರೇಲರ್​ನಲ್ಲಿದೆ. ಈ ವಿಚಾರ ಇಟ್ಟುಕೊಂಡು ಸುದೀಪ್ ಕಾಲೆಳೆದಿದ್ದಾರೆ. ‘ಧೈರ್ಯ ಇದ್ದರೆ ಇದನ್ನು ಅವರು ಮನೆಯಲ್ಲಿ ಮಾಡಲಿ’ ಎಂದು ಕೃಷ್ಣಗೆ ಸುದೀಪ್ ಸವಾಲು ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Jul 15, 2023 09:45 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More