‘ಸಲಾಂ ಸೋಲ್ಜರ್’​ ಹಾಡು ರಿಲೀಸ್​ ಮಾಡಿ, ಪುನೀತ್​ಗೆ ಸರಿಸಾಟಿ ಯಾರೂ ಇಲ್ಲ ಎಂದ ಕಿಚ್ಚ​ ಸುದೀಪ್​

| Updated By: ಮದನ್​ ಕುಮಾರ್​

Updated on: Mar 11, 2022 | 3:25 PM

‘ಜೇಮ್ಸ್​’ ಸಿನಿಮಾದ ‘ಸಲಾಂ ಸೋಲ್ಜರ್​..’ ಹಾಡನ್ನು ಕಿಚ್ಚ ಸುದೀಪ್​ ಬಿಡುಗಡೆ ಮಾಡಿದ್ದಾರೆ. ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳಿಗೆ ಅವರು ವಿಶೇಷ ಮಾತುಗಳನ್ನು ಹೇಳಿದ್ದಾರೆ.

ಪುನೀತ್​ ರಾಜ್​ಕುಮಾರ್ (Puneeth Rajkumar)​ ಮತ್ತು ಕಿಚ್ಚ ಸುದೀಪ್​ ನಡುವೆ ಬಾಲ್ಯದಿಂದಲೂ ಸ್ನೇಹ ಮನೆ ಮಾಡಿತ್ತು. ಅಪ್ಪು ಎಂದರೆ ಕಿಚ್ಚನಿಗೆ ಅಚ್ಚುಮೆಚ್ಚು. ಅದೇ ರೀತಿ ಸುದೀಪ್​ ಬಗ್ಗೆ ಪುನೀತ್​ ಅಭಿಮಾನ ಹೊಂದಿದ್ದರು. ಆದರೆ ಇಂದು ‘ಪವರ್​ ಸ್ಟಾರ್​’ ಇಲ್ಲ ಎಂಬ ಕೊರಗು ಎಲ್ಲರನ್ನೂ ಕಾಡುತ್ತಿದೆ. ಅವರ ಅನುಪಸ್ಥಿತಿಯಲ್ಲೇ ‘ಜೇಮ್ಸ್​’ ಸಿನಿಮಾ ಬಿಡುಗಡೆ ಆಗಲು ಸಜ್ಜಾಗಿದೆ. ಮಾ.17ರಂದು ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ದೇಶಾದ್ಯಂತ ಈ ಚಿತ್ರ ತೆರೆ ಕಾಣಲಿದೆ. ಅದಕ್ಕೂ ಮುನ್ನ ಹಾಡುಗಳು ಧೂಳೆಬ್ಬಿಸುತ್ತಿವೆ. ಇಂದು (ಮಾ.11) ಈ ಚಿತ್ರದ ಎರಡನೇ ಲಿರಿಕಲ್​ ವಿಡಿಯೋವನ್ನು (Salaam Soldier Song) ಕಿಚ್ಚ ಸುದೀಪ್​ ಅವರಿಂದ ಬಿಡುಗಡೆ ಮಾಡಿಸಲಾಗಿದೆ. ಹಾಡು ನೋಡಿ ಸುದೀಪ್​  (Kichcha Sudeep) ಖುಷಿಪಟ್ಟಿದ್ದಾರೆ. ಇಡೀ ತಂಡಕ್ಕೆ ಆಲ್ ದಿ ಬೆಸ್ಟ್​ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ‘ದೊಡ್ಡ ಪರದೆಯಲ್ಲಿ ಪುನೀತ್​ ಅವರ ಇರುವಿಕೆಯನ್ನು ಸಂಭ್ರಮಿಸುವ ಕಾಲ ಇದು. ಮುತ್ತಿನಂಥ ವ್ಯಕ್ತಿತ್ವದ ಅವರಿಗೆ ಬೇರೆ ಯಾರೂ ಸರಿಸಾಟಿ ಇಲ್ಲ. ಜೇಮ್ಸ್​ ಸಿನಿಮಾದ ಪ್ರತಿ ಕ್ಷಣವನ್ನು ಎಂಜಾಯ್​ ಮಾಡಿ’ ಎಂದು​ ಟ್ವೀಟ್​ ಮಾಡಿದ್ದಾರೆ. ಕನ್ನಡದ ಜೊತೆಗೆ ತೆಲುಗು, ಮಲಯಾಳಂ, ತೆಲುಗು ಹಾಗೂ ಹಿಂದಿಯಲ್ಲಿ ಈ ಲಿರಿಕಲ್​ ವಿಡಿಯೋ ಬಿಡುಗಡೆ ಆಗಿದ್ದು, ಅದರ ಲಿಂಕ್​ಗಳನ್ನು ಸುದೀಪ್​ ಶೇರ್​ ಮಾಡಿದ್ದಾರೆ. ಆ ಮೂಲಕ ಚಿತ್ರತಂಡಕ್ಕೆ ಸಾಥ್​ ನೀಡಿದ್ದಾರೆ. ಸಂಜಿತ್​ ಹೆಗಡೆ ಮತ್ತು ಚರಣ್​ ರಾಜ್​ ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ. ನಿರ್ದೇಶಕ ಚೇತನ್​ ಕುಮಾರ್​ ಸಾಹಿತ್ಯ ಬರೆದಿದ್ದಾರೆ. ಕಿಶೋರ್​ ಪತ್ತಿಕೊಂಡ ಈ ಚಿತ್ರ ನಿರ್ಮಾಪಕರು. ಪುನೀತ್​ಗೆ ಜೋಡಿಯಾಗಿ ಪ್ರಿಯಾ ಆನಂದ್​ ನಟಿಸಿದ್ದಾರೆ.

ಇದನ್ನೂ ಓದಿ:

Salaam Soldier: ‘ಜೇಮ್ಸ್​’ ಹೊಸ ಹಾಡು ‘ಸಲಾಂ ಸೋಲ್ಜರ್​’ ರಿಲೀಸ್​; ಸಲಾಂ​ ಪುನೀತ್​ ಎಂದ ಅಪ್ಪು ಫ್ಯಾನ್ಸ್​​

ಯೋಗಿ ಕಿವಿಗೆ ಏಟು ಬಿದ್ದಾಗ ಪುನೀತ್​ ಏನು ಮಾಡಿದ್ರು? ‘ಹುಡುಗರು’ ಘಟನೆ ನೆನೆದ ರವಿ ವರ್ಮಾ

Follow us on