ಭಾರವಾದ ಹೃದಯ ಹೊತ್ತು ಬಿಗ್​ಬಾಸ್​ಗೆ ಮರಳಿದ ಸುದೀಪ್, ತಾಯಿಗೆ ಶ್ರದ್ಧಾಂಜಲಿ

Updated on: Nov 02, 2024 | 2:55 PM

ಬಿಗ್​ಬಾಸ್ ವೇದಿಕೆ ಮೇಲಿದ್ದಾಗಲೇ ಸುದೀಪ್​ರ ತಾಯಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು, ಆ ನಂತರ ಅವರು ಮರಳಲಿಲ್ಲ. ತಾಯಿ ನಿಧನವಾದ ನೋವಿನಲ್ಲಿಯೇ ಸುದೀಪ್ ಬಿಗ್​ಬಾಸ್​ ವೇದಿಕೆಗೆ ಮರಳಿದ್ದಾರೆ. ಬಿಗ್​ಬಾಸ್​ ಕಡೆಯಿಂದ ಸುದೀಪ್ ತಾಯಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.

ಕಿಚ್ಚ ಸುದೀಪ್​ ಬಿಗ್​ಬಾಸ್ ವೇದಿಕೆ ಮೇಲಿದ್ದಾಗಲೇ ಅವರ ತಾಯಿ ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಅಕ್ಟೋಬರ್ 20 ರಂದು ಸುದೀಪ್ ಅವರ ತಾಯಿ ಸರೋಜಮ್ಮನವರು ನಿಧನ ಹೊಂದಿದರು. ನೋವಿನಲ್ಲಿದ್ದ ಸುದೀಪ್ ಅಂದಿನ ವೀಕೆಂಡ್ ಪಂಚಾಯಿತಿ ನಡೆಸಿಕೊಡಲಿಲ್ಲ. ಅದಾದ ಮುಂದಿನ ವಾರದ ವೀಕೆಂಡ್ ಪಂಚಾಯ್ತಿಯನ್ನೂ ಸಹ ನಡೆಸಿಕೊಡಲು ಅವರಿಗೆ ಸಾಧ್ಯವಾಗಿರಲಿಲ್ಲ. ಆದರೆ ಈಗ ಸುದೀಪ್ ತಮ್ಮ ಜವಾಬ್ದಾರಿ ನಿರ್ವಹಿಸಲು ಬಿಗ್​ಬಾಸ್ ಮನೆಗೆ ಮರಳಿದ್ದಾರೆ. ತಾಯಿ ಅಗಲಿದ ನೋವನ್ನು ಎದೆಯಲ್ಲಿಟ್ಟುಕೊಂಡು ಬಿಗ್​ಬಾಸ್ ವೇದಿಕೆಗೆ ಸುದೀಪ್ ಮರಳಿದ್ದು, ಬಿಗ್​ ಬಾಸ್​ ವತಿಯಿಂದ ಸುದೀಪ್ ಅವರ ತಾಯಿಗೆ ಭಾವನಾತ್ಮಕ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us