‘ಕಿತ್ತೋಗಿರೋ ನನ್ಮಕ್ಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ’; ಫ್ಯಾನ್ಸ್​ಗೆ ಸುದೀಪ್ ಕಿವಿಮಾತು

Updated on: Sep 02, 2025 | 9:53 AM

ಕಿಚ್ಚ ಸುದೀಪ್ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಗಳನ್ನು ಹಬ್ಬಿಸಿದ ಉದಾಹರಣೆ ಇದೆ. ಇದಕ್ಕೆ ಫ್ಯಾನ್ಸ್ ತಿರುಗೇಟು ನೀಡಲು ಹೋಗಿ ಹಂಗಾಮ ಸೃಷ್ಟಿ ಆದ ಉದಾಹರಣೆ ಇದೆ. ಈ ಬಗ್ಗೆ ಸುದೀಪ್ ಅವರು ತಮ್ಮ ಬರ್ತ್​ಡೇ ದಿನ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ.

ಕಿಚ್ಚ ಸುದೀಪ್ ಬರ್ತ್​ಡೇ ಪ್ರಯುಕ್ತ ಅವರು ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್​ನಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ವೇಳೆ ಅವರು ಫ್ಯಾನ್ಸ್ ಉದ್ದೇಶಿಸಿ ಮಾತನಾಡಿದ್ದಾರೆ. ಸುದೀಪ್ ಬಗ್ಗೆ ಕೆಟ್ಟದಾಗಿ ಮಾತನಾಡಿದರು ಎಂಬ ಕಾರಣಕ್ಕೆ ತಿರುಗೇಟು ನೀಡಲು ಹೋಗುತ್ತಾರೆ. ಇದರಿಂದ ಫ್ಯಾನ್ಸ್ ವಾರ್ ಆರಂಭ ಆಗುತ್ತದೆ. ಹೀಗಾಗಿ, ‘ಕಿತ್ತೋಗಿರೋ ನನ್ ಮಕ್ಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ’ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.