ಮೊದಲು ಸಂಗೀತಾ, ನಂತರ ನಮ್ರತಾ ಜತೆ ಕ್ಲೋಸ್​ ಆದ ಕಾರ್ತಿಕ್​ಗೆ ಸುದೀಪ್​ ಹೇಳಿದ್ದೇನು?

Updated on: Jan 07, 2024 | 9:54 AM

‘ನಮ್ರತಾ ಅವರಿಗೆ ಹೊಸ ಸ್ನೇಹಿತ ಸಿಕ್ಕಿದ್ದಾನೆ. ಹೌದೋ ಅಲ್ಲವೋ’ ಎಂದು ಸುದೀಪ್​ ಕೇಳಿದ್ದಕ್ಕೆ ಬಹುತೇಕರು ‘ಹೌದು’ ಎಂದು ಉತ್ತರಿಸಿದ್ದಾರೆ. ‘ಫಸ್ಟ್​ ಹಾಫ್​ ನನ್ನ ಜೊತೆ ಸ್ನೇಹ ಇತ್ತು. ಆಮೇಲೆ ನಮ್ರತಾ ಅವರ ಜೊತೆ ಸ್ನೇಹ ಶುರುವಾಯಿತು’ ಎಂದು ಸಂಗೀತಾ ಶೃಂಗೇರಿ ಹೇಳಿದ್ದಾರೆ. ವೀಕೆಂಡ್​ನಲ್ಲಿ ಈ ವಿಚಾರ ಚರ್ಚೆ ಆಗಿದೆ.

ಕಿರುತೆರೆ ಪ್ರೇಕ್ಷಕರ ಮೆಚ್ಚಿನ ಶೋ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada) ಈಗ ಕೊನೇ ಹಂತವನ್ನು ತಲುಪುತ್ತಿದೆ. ಈ ಶೋನ ಆರಂಭದಲ್ಲಿ ಕಾರ್ತಿಕ್​ ಮಹೇಶ್​ (Karthik Mahesh) ಅವರು ಸಂಗೀತಾ ಶೃಂಗೇರಿ ಜೊತೆ ಕ್ಲೋಸ್​ ಆಗಿದ್ದರು. ನಂತರ ಅವರ ಜೊತೆ ಮನಸ್ತಾಪ ಮಾಡಿಕೊಂಡರು. ಬಳಿಕ ಅವರು ನಮ್ರತಾ ಗೌಡ ಜೊತೆ ಫ್ಲರ್ಟ್​ ಮಾಡಲು ಆರಂಭಿಸಿದರು. ಈ ವಿಚಾರ ವೀಕೆಂಡ್​ ಎಪಿಸೋಡ್​ನಲ್ಲಿ ಚರ್ಚೆ ಆಗಿದೆ. ಅದರ ಪ್ರೋಮೋವನ್ನು ‘ಕಲರ್ಸ್​ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಈ ಸಂಚಿಕೆ ಜನವರಿ 7ರಂದು ಟಿವಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಲೈವ್​ ನೋಡಬಹುದು. ‘ನಮ್ರತಾ ಅವರಿಗೆ ಹೊಸ ಸ್ನೇಹಿತ ಸಿಕ್ಕಿದ್ದಾನೆ. ಹೌದೋ ಅಲ್ಲವೋ’ ಎಂದು ಸುದೀಪ್​ ಕೇಳಿದ್ದಕ್ಕೆ ಬಹುತೇಕರು ‘ಹೌದು’ ಎಂದು ಉತ್ತರಿಸಿದ್ದಾರೆ. ‘ಫಸ್ಟ್​ ಹಾಫ್​ ನನ್ನ ಜೊತೆ ಸ್ನೇಹ ಇತ್ತು. ಆಮೇಲೆ ನಮ್ರತಾ ಅವರ ಜೊತೆ ಸ್ನೇಹ ಶುರುವಾಯಿತು’ ಎಂದು ಸಂಗೀತಾ ಶೃಂಗೇರಿ (Sangeetha Sringeri) ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Jan 07, 2024 09:42 AM
Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More