ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
Kichcha Sudeep: ಬಿಗ್ಬಾಸ್ ವೀಕೆಂಡ್ ಎಪಿಸೋಡ್ಗೆ ಒಂದು ದಿನ ಬಾಕಿ ಇದೆ. ಸುದೀಪ್, ಹನುಮಂತುಗೆ ಉಡುಗೊರೆಯೊಂದನ್ನು ಕಳಿಸಿದ್ದಾರೆ. ಸುದೀಪ್ ಕಳಿಸಿದ ಉಡುಗೊರೆ ಕಂಡು ಹನುಮಂತು ಭಾವುಕಗೊಂಡಿದ್ದಾರೆ.
ವಾರದ ದಿನವೆಲ್ಲ ತಮ್ಮಿಷ್ಟದಂತೆ ಟಿ-ಶರ್ಟ್, ಪ್ಯಾಂಟ್ ಧರಿಸಿ ಅಡ್ಡಾಡುವ ಬಿಗ್ಬಾಸ್ ಸ್ಪರ್ಧಿಗಳು, ವಾರಾಂತ್ಯದ ವೀಕೆಂಡ್ ಪಂಚಾಯಿತಿಗೆ ಅದ್ಧೂರಿಯಾಗಿ ರೆಡಿ ಆಗಿರುತ್ತಾರೆ. ಆದರೆ ಹನುಮಂತ ಮಾತ್ರ ಅದೇ ಪಂಚೆ-ಶರ್ಟ್ ಧರಿಸಿ ವಾರದ ಪಂಚಾಯ್ತಿಗೆ ಹಾಜರಾಗುತ್ತಿದ್ದರು. ಇದನ್ನು ಗಮನಿಸಿದ ಕಿಚ್ಚ ಸುದೀಪ್, ಯಾಕೆ ಅವರಂತೆ ಒಳ್ಳೆ ಬಟ್ಟೆ ಧರಿಸಿಲ್ಲ ಎಂದು ಕೇಳಿದರು. ಅದಕ್ಕೆ ಹನುಮಂತ, ‘ನನ್ನ ಬಳಿ ಛಲೊ ಬಟ್ಟಿ ಇಲ್ರಿ’ ಎಂದು ಬೇಸರದಿಂದ ಹೇಳಿದ್ದ, ಅದಕ್ಕೆ ಸುದೀಪ್, ‘ನಾನು ನನ್ನ ಡಿಸೈನರ್ಗೆ ಹೇಳಿ ಬಟ್ಟೆ ಕಳಿಸುತ್ತೀನಿ ಹಾಕಿಕೊಳ್ತೀರಾ?’ ಎಂದು ಕೇಳಿದ್ದರು. ಅದಕ್ಕೆ ಖುಷಿಯಿಂದ ಒಪ್ಪಿಕೊಂಡಿದ್ದ ಹನುಮಂತು. ಇದೀಗ ಸುದೀಪ್, ಹನುಮಂತನಿಗಾಗಿ ಹಲವು ಡಿಸೈನರ್ ಬಟ್ಟೆಗಳನ್ನು ಕಳಿಸಿಕೊಟ್ಟಿದ್ದಾರೆ. ಅಂಡರ್ವೇರ್ ಸಮೇತ. ಅದೂ ಜನಪ್ರಿಯ ಬ್ರ್ಯಾಂಡ್ನ ದುಬಾರಿ ಬಟ್ಟೆಗಳನ್ನೇ ಕಳಿಸಿದ್ದಾರೆ. ಉಡುಗೊರೆ ಸ್ವೀಕರಿಸಿದ ಹನುಮಂತು ಕ್ಷಣ ಕಾಲ ಭಾವುಕರಾದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us