ಸ್ಪರ್ಧಿಗಳ ಕೈಗೆ ರೆಡ್ ಕಾರ್ಡ್ ಕೊಟ್ಟು ರಿಷಾಗೆ ಮನೆ ದಾರಿ ತೋರಿಸಿದ ಕಿಚ್ಚ ಸುದೀಪ್

Updated on: Nov 09, 2025 | 8:55 AM

ವೈಲ್ಡ್ ಕಾರ್ಡ್ ಮೂಲಕ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋಗೆ ಬಂದಿದ್ದ ರಿಷಾ ಅವರು ಈಗ ಮನೆ ದಾರಿ ನೋಡುವಂತಾಗಿದೆ. ಗಿಲ್ಲಿ ನಟ ಜೊತೆ ಕಳೆದ ವಾರ ಅವರು ಕಿರಿಕ್ ಮಾಡಿಕೊಂಡಿದ್ದರು. ಆಗ ಗಿಲ್ಲಿ ಮೇಲೆ ರಿಷಾ ಕೈ ಮಾಡಿದ್ದರು. ಬಿಗ್ ಬಾಸ್ ಮನೆಯ ಮೂಲ ನಿಯಮಕ್ಕೆ ವಿರುದ್ಧವಾದ ವರ್ತನೆ ಇದು.

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದ ರಿಷಾ ಅವರು ಈಗ ಮನೆ ದಾರಿ ನೋಡುವಂತಾಗಿದೆ. ಕಳೆದ ವಾರ ಅವರು ಗಿಲ್ಲಿ ನಟ ಜೊತೆ ಕಿರಿಕ್ ಮಾಡಿಕೊಂಡಿದ್ದರು. ಆಗ ಗಿಲ್ಲಿ ಮೇಲೆ ರಿಷಾ ಕೈ ಮಾಡಿದ್ದರು. ಅದು ಬಿಗ್ ಬಾಸ್ ಮನೆಯ ಮೂಲ ನಿಯಮಕ್ಕೆ ವಿರುದ್ಧವಾದ ವರ್ತನೆ. ಹಾಗಾಗಿ ಬಿಗ್ ಬಾಸ್ ಆಟದಿಂದ ರಿಷಾ ಅವರನ್ನು ಎಲಿಮಿನೇಟ್ ಮಾಡಬೇಕು ಎಂಬುದು ವೀಕ್ಷಕರ ಒತ್ತಾಯ ಆಗಿತ್ತು. ಭಾನುವಾರದ (ನವೆಂಬರ್ 9) ಸಂಚಿಕೆಯಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ಈ ಬಗ್ಗೆ ಒಂದು ತೀರ್ಮಾನ ತೆಗೆದುಕೊಂಡಿದ್ದಾರೆ. ‘ಒಬ್ಬರ ಮೇಲೆ ಕೈ ಎತ್ತಿದರೆ ಅದು ಬಿಗ್ ಬಾಸ್ ಮನೆಯಲ್ಲಿ ಓಕೆ ಇಲ್ಲ. ದೇವರ ಕೊಟ್ಟ ಕೈಗಳನ್ನು ಒಳ್ಳೆಯದಕ್ಕೆ ಅಥವಾ ಗೆಲ್ಲೋದಕ್ಕೆ ಉಪಯೋಗಿಸಿಕೊಳ್ಳಿ. ಹುಡುಗಿಗೆ ಒಬ್ಬ ಹುಡುಗ ಈ ರೀತಿ ಹೊಡೆದಿದ್ದರೆ ಏನೆಲ್ಲ ಆಗಿರುತ್ತಿತ್ತು. ಇನ್ಮುಂದೆ ಇದೆಲ್ಲ ಬಿಗ್ ಬಾಸ್ ಮನೆಯಲ್ಲಿ ನಡೆಯಬಾರದು’ ಎಂದು ಸುದೀಪ್ ಹೇಳಿದ್ದಾರೆ. ರಿಷಾ (Risha) ಅವರನ್ನು ಮನೆಯಿಂದ ಹೊರಗೆ ಹಾಕಬೇಕೋ ಅಥವಾ ಬೇಡವೋ ಎಂಬ ಆಯ್ಕೆಯನ್ನು ಸ್ಪರ್ಧಿಗಳಿಗೆ ಸುದೀಪ್ ನೀಡಿದ್ದಾರೆ. ಎಲ್ಲ ಸ್ಪರ್ಧಿಗಳ ಕೈಗೆ ರೆಡ್ ಕಾರ್ಡ್ ಮತ್ತು ಎಲ್ಲೋ ಕಾರ್ಡ್ ನೀಡಲಾಗಿದೆ. ಎಲ್ಲೋ ಕಾರ್ಡ್ ಬಳಸಿ ರಿಷಾಗೆ ಎಚ್ಚರಿಕೆ ನೀಡಿ ಮನೆಯಲ್ಲೇ ಉಳಿಸಿಕೊಳ್ಳಬಹುದು. ರೆಡ್ ಕಾರ್ಡ್ ನೀಡಿ ಎಲಿಮಿನೇಟ್ ಮಾಡಬಹುದು. ಯಾರೆಲ್ಲ ರಿಷಾಗೆ ಮನೆ ದಾರಿ ತೋರಿಸಿದ್ದಾರೆ ಎಂಬುದು ತಿಳಿಯಲು ನ.9 ಸಂಚಿಕೆ ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.