ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್ ವಿಡಿಯೋ

|

Updated on: Dec 22, 2024 | 7:40 PM

‘ಮ್ಯಾಕ್ಸ್’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್​ ಚಿತ್ರದುರ್ಗದಲ್ಲಿ ನಡೆಯುತ್ತಿದೆ. ಇದೇ ವೇದಿಕೆಯಲ್ಲಿ ಅಭಿಮಾನಿಗಳಿಂದ ಟ್ರೇಲರ್​ ರಿಲೀಸ್​ ಕೂಡ ಆಗಲಿದೆ. ಅಪಾರ ಸಂಖ್ಯೆಯ ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿ ಕಾರ್ಯಕ್ರಮ ಮಾಡಲಾಗುತ್ತಿದೆ. ಕಾರ್ಯಕ್ರಮದ ಲೈವ್ ವಿಡಿಯೋ ಇಲ್ಲಿದೆ. ಸುದೀಪ್ ಅಭಿನಯದ ಈ ಸಿನಿಮಾಗೆ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ.

ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಡಿಸೆಂಬರ್​ 25ರಂದು ಬಿಡುಗಡೆ ಆಗಲಿದ್ದು, ಇಂದು (ಡಿ.22) ಚಿತ್ರದುರ್ಗದಲ್ಲಿ ಗ್ರ್ಯಾಂಡ್​ ಆಗಿ ಟ್ರೇಲರ್​ ಬಿಡುಗಡೆ ಹಾಗೂ ಪ್ರೀ-ರಿಲೀಸ್​ ಇವೆಂಟ್​ ಮಾಡಲಾಗುತ್ತಿದೆ. ಅಭಿಮಾನಿಗಳ ಕೈಯಿಂದ ಟ್ರೇಲರ್​ ಅನಾವರಣ ಮಾಡಿಸಲಾಗುತ್ತಿದೆ. ಈ ಇವೆಂಟ್​ನ ಲೈವ್ ವಿಡಿಯೋ ಇಲ್ಲಿದೆ. ಸಖತ್ ಮಾಸ್ ಆಗಿ ಮೂಡಿಬಂದಿರುವ ಈ ಸಿನಿಮಾ ಮೇಲೆ ಜನರಿಗೆ ನಿರೀಕ್ಷೆ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.