‘ಭುರ್ಜ್ ಖಲಿಫಾ ಮೇಲೆ ಹಾರಿಸಿದ್ವಿ’; ತಮಿಳುನಾಡಲ್ಲಿ ಕರ್ನಾಟಕ ಧ್ವಜ ಎತ್ತಿ ಹಿಡಿದ ಬಗ್ಗೆ ಸುದೀಪ್ ಮಾತು

Updated on: Feb 09, 2026 | 9:59 AM

ಸುದೀಪ್ ಅವರು ಸಿಸಿಎಲ್ ಗೆದ್ದಿದ್ದಾರೆ. ಅವರ ತಂಡ ದೊಡ್ಡ ಮೊತ್ತದ ಅಂತರದಲ್ಲಿ ಗೆಲುವು ಕಂಡಿದೆ. ಈಗ ಸುದೀಪ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ತಮಿಳು ನಾಡಲ್ಲಿ ಕನ್ನಡದ ಧ್ವಜ ಹಾರಿಸಿದ ಬಗ್ಗೆಯೂ ಅವರು ಮಾತುಕತೆ ನಡೆಸಿದ್ದಾರೆ. ಕನ್ನಡದ ಧ್ವಜ ಹಾರಿಸಿದ ಬಗ್ಗೆ ಅವರಿಗೆ ತುಂಬಾನೇ ಖುಷಿ ಇದೆ.

ಕಿಚ್ಚ ಸುದೀಪ್ ಅವರು ಕೆಸಿಎಲ್ ಮ್ಯಾಚ್​​​ಗಳನ್ನು ಗೆದ್ದಾಗ ಕನ್ನಡದ ಬಾವುಟ ಹಾರಿಸಿದ ಉದಾಹರಣೆ ಇದೆ. ತಮಿಳುನಾಡಲ್ಲಿ ಸುದೀಪ್ ಬಾವುಟ ಹಾರಿಸಿದ ವಿಷಯ ಕನ್ನಡಿಗರಿಗೆ ಸಾಕಷ್ಟು ಖುಷಿ ಕೊಟ್ಟಿತ್ತು. ಸಿಸಿಎಲ್ ಗೆದ್ದ ಬಳಿಕ ತಂಡ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೆಲೆಬ್ರೇಷನ್ ಹಮ್ಮಿಕೊಂಡಿತ್ತು. ಈ ವಿಷಯದ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ‘ಭುರ್ಜ್​ ಖಲಿಫಾ ಮೇಲೆ ನಮ್ಮ ಧ್ವಜ ಹಾರಿಸಿದ್ವಿ. ಇನ್ನು ನಮ್ಮ ನಾಡಲ್ಲಿ ಹಾರಿಸೋಕೆ ಏನು’ ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ.

 

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More