ನಾನೇ CM.. ಟಿಕೆಟ್ ಸಿಗದವರು ನಮ್ಮ ಪ್ರಜಾಶಾಂತಿ ಪಕ್ಷ ಸೇರಬಹುದು - ವಿವಾದಿತ ಕೆಎ ಪಾಲ್ ಬಂಪರ್ ಆಫರ್

ನಾನೇ CM.. ಟಿಕೆಟ್ ಸಿಗದವರು ನಮ್ಮ ಪ್ರಜಾಶಾಂತಿ ಪಕ್ಷ ಸೇರಬಹುದು – ವಿವಾದಿತ ಕೆಎ ಪಾಲ್ ಬಂಪರ್ ಆಫರ್

ಸಾಧು ಶ್ರೀನಾಥ್​
|

Updated on: Nov 08, 2023 | 2:34 PM

ಸದ್ಯದಲ್ಲೇ ತಾನು ತೆಲಂಗಾಣ ಸಿಎಂ ಆಗಲಿರುವ ಕಾರಣ, ರಾಜಕೀಯ ಆಕಾಂಕ್ಷಿಗಳು ಪ್ರಸ್ತುತ ಅಸೆಂಬ್ಲಿ ಚುನಾವಣೆಯಲ್ಲಿ ತಮ್ಮ ಪ್ರಜಾಶಾಂತಿ ಪಕ್ಷದಿಂದ ಸ್ಪರ್ಧಿಸಬಹುದು ಎಂದು ಕೆಎ ಪೌಲ್ ಅವರು ಜನರನ್ನು ಕೇಳಿಕೊಂಡಿದ್ದಾರೆ.

ತೆಲಂಗಾಣ ರಾಜ್ಯದೆಲ್ಲೆಡೆ ಚುನಾವಣಾ ಬಿಸಿ ಜೋರಾಗಿದೆ.. ಪ್ರಮುಖ ಪಕ್ಷಗಳೆಲ್ಲ ಭರ್ಜರಿ ಪ್ರಚಾರ ನಡೆಸುತ್ತಿವೆ. ನಾಯಕರು ಸಿಡಿದೆದ್ದಿದ್ದಾರೆ.. ದಿನದಿಂದ ದಿನಕ್ಕೆ ರಾಜಕೀಯ ಬಿಸಿಯೇರುತ್ತಿದೆ. ಮುಂದಿನ ಚುನಾವಣೆಯಲ್ಲಿ (Telangana Assembly Elections) ಯಾರು ಗೆಲ್ಲುತ್ತಾರೆ? ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಟೆನ್ಷನ್ ಇದೆ. ಈ ವೇಳೆ ವಿವಾದಿತ ಧರ್ಮಗುರು ಕೆಎ ಪಾಲ್ ತೆಲಂಗಾಣ ಅಸೆಂಬ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತೆಲಂಗಾಣದಲ್ಲಿ ಪಾಲ್​ ಬ್ರದರ್​ ಆಡಳಿತ ಬರಲಿದೆ. ಪ್ರಜಾಶಾಂತಿ ಪಕ್ಷ 79 ಸ್ಥಾನ ಗೆಲ್ಲಲಿದೆ ಎಂದು ಕೆಎ ಪಾಲ್ (Kilari Anand Paul, Christian evangelist ) ಟಿವಿ9 ಗೆ ಹೇಳಿದ್ದಾರೆ.

ತಮಗೆ ಶೇ. 60ರಷ್ಟು ಜನರ ಬೆಂಬಲವಿದೆ ಎಂದು ಅವರು ಹೇಳಿಕೊಂಡಿದ್ದಾರೆ. ನಾವು ಈಗಾಗಲೇ 18 ಅಭ್ಯರ್ಥಿಗಳನ್ನು ಘೋಷಿಸಿದ್ದು, ನಾಳೆ ಉಳಿದ 101 ಅಭ್ಯರ್ಥಿಗಳನ್ನು ಘೋಷಿಸುತ್ತೇವೆ. ನಾನು ತೆಲಂಗಾಣ ಮುಖ್ಯಮಂತ್ರಿಯಾಗಲಿದ್ದೇನೆ. 6 ಸಾವಿರ ರೂ ಪಿಂಚಣಿ, ರೈತ ಬಂಧು ಯೋಜನೆಯಲ್ಲಿ 20 ಸಾವಿರ ರೂಪಾಯಿ ನೀಡುವುದಾಗಿ ಅವರು ಪ್ರಕಟಿಸಿದ್ದಾರೆ. ತೆಲಂಗಾಣದಲ್ಲಿ ಪ್ರಜಾಶಾಂತಿ ಪಕ್ಷ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲಿದೆ. ಬಿಆರ್‌ಎಸ್ ಕಾಂಗ್ರೆಸ್ ಅಲ್ಲ. ಪ್ರಜಾಶಾಂತಿ ಪಕ್ಷವೇ ಮೊದಲ ಶಕ್ತಿ. ಬೇರೆ ಪಕ್ಷಗಳಲ್ಲಿ ಟಿಕೆಟ್ ಸಿಗದವರು ಪ್ರಜಾಶಾಂತಿ ಪಕ್ಷಕ್ಕೆ ಸೇರಲಿ… ಅವರನ್ನು ಶಾಸಕರನ್ನಾಗಿ ಮಾಡುತ್ತೇನೆ…ಎಂದು ಅವರು ಕರೆ ನೀಡಿದರು.

ವಿಶಾಖಪಟ್ಟಣಂನ ವಿಶಾಖ ಸ್ಟೀಲ್ ಪ್ಲಾಂಟ್ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದ ಕೆಎ ಪಾಲ್, ಹಲವು ಪ್ರಮುಖ ಟೀಕೆಗಳನ್ನು ಮಾಡಿದರು. ಚುನಾವಣೆ ಮುಗಿದ ನಂತರ ಸ್ಟೀಲ್ ಪ್ಲಾಂಟ್ ಮಾರಾಟವಾಗಲಿದೆ ಎನ್ನಲಾಗಿದೆ. ತಮ್ಮನ್ನು ಸಂಸದರಾಗಿ ಗೆಲ್ಲಿಸಿದರೆ ಖಾಸಗೀಕರಣ ನಿಲ್ಲಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಬಹುದು ಎಂದು ಭವಿಷ್ಯ ನುಡಿದರು. ಚಂದ್ರಬಾಬು ಜೊತೆಯಲ್ಲಿ ಹೋಗುತ್ತೇವೆ ಎಂದು ಕೆಎ ಪಾಲ್ ಇದೇ ವೇಳೆ ಸ್ಪಷ್ಟಪಡಿಸಿದರು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ