ಹಾಸನಾಂಬೆ ಸಮ್ಮುಖದಲ್ಲಿ ತಮ್ಮ ಶಾಸಕರೊಂದಿಗೆ ಒಗ್ಗಟ್ಟಿನ ಮಂತ್ರ ಜಪಿಸಿದ ಜೆಡಿಎಸ್ ಅಧ್ಯಕ್ಷ ಕುಮಾರಸ್ವಾಮಿ
ನಿನ್ನೆ ಕುಮಾರಸ್ವಾಮಿ ಅದೇ ರೆಸಾರ್ಟ್ ನಲ್ಲಿ ಒಂದು ಸುತ್ತಿನ ಸಭೆ ನಡೆಸಿದರು ಮತ್ತು ಇವತ್ತು ಎರಡನೇ ಸುತ್ತು ನಡೆಯಲಿದೆ. ರಾಜ್ಯದ ರಾಜಕೀಯ ವಲಯಗಳಲ್ಲಿ ಆಗಾಗ್ಗೆ ಚರ್ಚೆ ನಡೆಯುತ್ತಿರುವ ಹಾಗೆ ಜೆಡಿಎಸ್ ಶಾಸಕರಿಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದು ಬೇಕಿರಲಿಲ್ಲ. ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಚರ್ಚೆ ನಡೆಸದೆ ಕುಮಾರಸ್ವಾಮಿ ದುಡುಕಿದ್ದಾರೆ ಅಂತ ಶಾಸಕರು ಅಸಮಾಧಾನಗೊಂಡಿದ್ದಾರೆ.
ಹಾಸನ: ಲೋಕ ಸಭಾ ಚುನಾವಣೆ (Lok Sabha polls) ಬಹಳ ದೂರವೇನೂ ಇಲ್ಲ ಹಾಗಾಗಿ ತಮ್ಮ 19 ಶಾಸಕರನ್ನು ಹಿಡಿದಿಡ್ಡಿಕೊಳ್ಳುವ ಭಗೀರಥ ಪ್ರಯತ್ನ ಪಕ್ಷದ ಅಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮಾಡುತ್ತಿದ್ದಾರೆ. ಅಂದಹಾಗೆ, ಪಕ್ಷದ ಎಲ್ಲ ಶಾಸಕರು ಈ ಗ್ರೂಪ್ ಪೋಟೋನಲ್ಲಿದ್ದಾರೆಯೇ? ಇಲ್ಲ ಮಾರಾಯ್ರೇ, ಗುರುಮಠಕಲ್ ಶಾಸಕ ಶರಣಗೌಡ ಕಂದ್ಕೂರ್ (Sharangouda Kandkur) ಮಿಸ್ಸಿಂಗ್. ನಿನ್ನೆ ಹಾಸನದಲ್ಲಿ ಮಾತಾಡಿದ್ದ ಪಕ್ಷದ ಹಿರಿಯ ನಾಯಕ ಜಿಟಿ ದೇವೇಗೌಡ ಶಾಸಕರಲ್ಲಿ ಹಲವಾರು ಜನಕ್ಕೆ ಹಾಸನಾಂಬೆಯ ದರ್ಶನ ಮಾಡಬೇಕಿತ್ತು ಹಾಗಾಗಿ ಹಾಸನದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಆಯೋಜಿಸಲಾಗಿದೆ ಅಂತ ಹೇಳಿದ್ದರು. ಶಾಸಕರೆಲ್ಲ ರೆಸಾರ್ಟ್ ವೊಂದರಲ್ಲಿ ತಂಗಿದ್ದಾರೆ. ನಿನ್ನೆ ಕುಮಾರಸ್ವಾಮಿ ಅದೇ ರೆಸಾರ್ಟ್ ನಲ್ಲಿ ಒಂದು ಸುತ್ತಿನ ಸಭೆ ನಡೆಸಿದರು ಮತ್ತು ಇವತ್ತು ಎರಡನೇ ಸುತ್ತು ನಡೆಯಲಿದೆ. ರಾಜ್ಯದ ರಾಜಕೀಯ ವಲಯಗಳಲ್ಲಿ ಆಗಾಗ್ಗೆ ಚರ್ಚೆ ನಡೆಯುತ್ತಿರುವ ಹಾಗೆ ಜೆಡಿಎಸ್ ಶಾಸಕರಿಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದು ಬೇಕಿರಲಿಲ್ಲ. ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಚರ್ಚೆ ನಡೆಸದೆ ಕುಮಾರಸ್ವಾಮಿ ದುಡುಕಿದ್ದಾರೆ ಅಂತ ಶಾಸಕರು ಅಸಮಾಧಾನಗೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ