ಉಡುಪಿ – ಕಾಡು ಬಿಟ್ಟು ನಾಡಿಗೆ ಬಂದು ಚರಂಡಿಯಲ್ಲಿ ಒದ್ಲಾಡುತ್ತಿದ್ದ ಕಾಡುಕೋಣ ರಕ್ಷಣೆ
ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಬಳಿ ನಿನ್ನೆ ಮಂಗಳವಾರ ರಾತ್ರಿ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆಯು ಜೆಸಿಬಿ ಬಳಸಿ ಹೊಂಡದ ಸುತ್ತಲಿನ ಮಣ್ಣು ಸರಿಸಿ ಕಾಡುಕೋಣವನ್ನು ಮೇಲಕ್ಕೆತ್ತವಲ್ಲಿ ಯಶಸ್ವಿಯಾಯಿತು. ಕಾರ್ಯಾಚರಣೆ ಮೂಲಕ ಸುಮಾರು ಆರು ವರ್ಷ ಪ್ರಾಯದ ಕಾಡುಕೋಣವನ್ನು ರಕ್ಷಣೆ ಮಾಡಲಾಗಿದೆ.
ಉಡುಪಿ, ನವೆಂಬರ್ 8: ಚರಂಡಿಗೆ ಬಿದ್ದು ಒದ್ದಾಡಿದ ಕಾಡುಕೋಣವನ್ನು ರಕ್ಷಣೆ ಮಾಡಲಾಗಿದೆ. ಕಾಡುಬಿಟ್ಟು ನಾಡಿಗೆ ಬಂದಿದ್ದ ಕಾಡುಕೋಣವು (wild bullock) ಉಡುಪಿ ಜಿಲ್ಲೆಯ (Udupi) ಕಾಪು ತಾಲೂಕಿನ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಬಳಿಯ ಚರಂಡಿಗೆ ಬಿದ್ದಿತ್ತು. ಚರಂಡಿಗೆ ಬಿದ್ದಿದ್ದ ಕಾಡುಕೋಣ ಗಮನಿಸಿದ ದೇವಸ್ಥಾನ ಸಿಬ್ಬಂದಿ ಅರಣ್ಯ ಇಲಾಖೆಗೆ ಮಾಹಿತಿ ನಿಡಿದ್ದರು. ಸ್ಥಳಕ್ಕೆ ಬಂದು ಸ್ಥಳೀಯರ ನೆರವಿನಿಂದ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಾಡುಕೋಣವನ್ನು ಪಾರು ಮಾಡಿದ್ದಾರೆ (Rescue).
ನಿನ್ನೆ ಮಂಗಳವಾರ ರಾತ್ರಿ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆಯು ಜೆಸಿಬಿ ಬಳಸಿ ಹೊಂಡದ ಸುತ್ತಲಿನ ಮಣ್ಣು ಸರಿಸಿ ಕಾಡುಕೋಣವನ್ನು ಮೇಲಕ್ಕೆತ್ತವಲ್ಲಿ ಯಶಸ್ವಿಯಾಯಿತು. ಕಾರ್ಯಾಚರಣೆ ಮೂಲಕ ಸುಮಾರು ಆರು ವರ್ಷ ಪ್ರಾಯದ ಕಾಡುಕೋಣವನ್ನು ರಕ್ಷಣೆ ಮಾಡಲಾಗಿದೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published On - 12:39 pm, Wed, 8 November 23
Latest Videos