ಹುಬ್ಬಳ್ಳಿ: ಕಮೀಷನರ್ ಆದೇಶಕ್ಕೂ ಡೋಂಟ್ ಕೇರ್, ಕಿಮ್ಸ್​ ಆವರಣದಲ್ಲೇ ಡಿಜೆ ಹಾಡಿಗೆ ಕುಣಿದ ವಿದ್ಯಾರ್ಥಿಗಳು

| Updated By: ವಿವೇಕ ಬಿರಾದಾರ

Updated on: Sep 24, 2023 | 1:23 PM

ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಗಣೇಶ ಕೋಡಿಸಿದ್ದರು. ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಅಬ್ಬರ ಜೋರಾಗಿದ್ದು, ಕಿಮ್ಸ್ ವಿದ್ಯಾರ್ಥಿಗಳು ಭರ್ಜರಿ ಡ್ಯಾನ್ಸ್ ಮಾಡಿದರು.

ಹುಬ್ಬಳ್ಳಿ ಸೆ.23: ಉತ್ತರ ಕರ್ನಾಟಕದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆ ಕಿಮ್ಸ್ (KIMS) ವಿದ್ಯಾರ್ಥಿಗಳ ವಿಡಿಯೋವೊಂದು ಇತ್ತೀಚಿಗೆ ವೈರಲ್​ ಆಗಿತ್ತು. ಇದ್ದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದಾದ ನಂತರ ವಿದ್ಯಾರ್ಥಿಗಳ ಮತ್ತೊಂದು ವಿಡಿಯೋ ವೈರಲ್​ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಹೌದು ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಗಣೇಶ (Ganesha) ಕೋಡಿಸಿದ್ದರು. ಶನಿವಾರ ಐದನೇ ದಿನವಾದ ನಿಮಿತ್ತ ಗಣೇಶ ವಿಸರ್ಜನೆ ಮಾಡಿದರು. ಈ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ (DJ) ಅಬ್ಬರ ಜೋರಾಗಿದ್ದು, ಕಿಮ್ಸ್ ವಿದ್ಯಾರ್ಥಿಗಳು ಭರ್ಜರಿ ಡ್ಯಾನ್ಸ್ ಮಾಡಿದರು. ಆದರೆ ಆಸ್ಪತ್ರೆ ಆವರಣದಲ್ಲಿಯೇ ಡಿಜೆ ಹಚ್ಚಿದ್ದರಿಂದ ಪೊಲೀಸ್ ಕಮೀಷನರ್ ಇಲ್ಲಿ ಡಿಜೆ ಹಚ್ಚಬೇಡಿ ಎಂದು ವಾರ್ನ್​​ ಮಾಡಿದ್ದರು. ನೂರಾರು ರೋಗಿಗಳಿದ್ದು, ಕಮೀಷನರ್ ಆದೇಶಕ್ಕೂ ಡೋಂಟ್ ಕೇರ್ ಎಂದು ಡಿಜೆ ಹಚ್ಚಿ ಕುಣಿದು ಕುಪ್ಪಳಿಸಿದರು. ಇದಕ್ಕೆ ಸಾರ್ವಜನಿಕರಿಂದ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.

Published on: Sep 24, 2023 01:19 PM