11 ವರ್ಷಗಳ ಬಳಿಕ ಬೌಲಿಂಗ್ ಮಾಡಿದ ರಾಹುಲ್; ವಿಕೆಟ್ ಜಸ್ಟ್ ಮಿಸ್

Updated on: Feb 28, 2026 | 8:11 PM

KL Rahul Bowls in Ranji Final 2025-26: 2025-26 ರ ರಣಜಿ ಫೈನಲ್‌ನಲ್ಲಿ ಕೆಎಲ್ ರಾಹುಲ್ 11 ವರ್ಷಗಳ ಬಳಿಕ ಬೌಲಿಂಗ್ ಮಾಡಿ ಎಲ್ಲರ ಗಮನ ಸೆಳೆದರು. ಹುಬ್ಬಳ್ಳಿಯಲ್ಲಿ ಕರ್ನಾಟಕ ಮತ್ತು ಜಮ್ಮು ಕಾಶ್ಮೀರ ನಡುವಿನ ಪಂದ್ಯದಲ್ಲಿ, ರಾಹುಲ್ 2 ಓವರ್‌ಗಳಲ್ಲಿ 15 ರನ್ ನೀಡಿ ವಿಕೆಟ್ ಪಡೆಯಲಿಲ್ಲವಾದರೂ, ಅಭಿಮಾನಿಗಳಿಗೆ ಮನರಂಜನೆ ನೀಡಿದರು. ಅವರ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ಇದು ಅಪರೂಪದ ಪ್ರದರ್ಶನವಾಗಿತ್ತು.

2025-26ರ ರಣಜಿ ಟ್ರೋಫಿ ಫೈನಲ್ ಒಂದು ವಿಶಿಷ್ಟ ಮತ್ತು ಅಚ್ಚರಿಯ ದೃಶ್ಯಕ್ಕೆ ಸಾಕ್ಷಿಯಾಯಿತು. ಹುಬ್ಬಳ್ಳಿಯ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ಕರ್ನಾಟಕ ಮತ್ತು ಜಮ್ಮು ಮತ್ತು ಕಾಶ್ಮೀರ ನಡುವಿನ ಫೈನಲ್ ಪಂದ್ಯದ ಐದನೇ ಮತ್ತು ಅಂತಿಮ ದಿನದಂದು, ಭಾರತದ ಸ್ಟಾರ್ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ 11 ವರ್ಷಗಳ ಬಳಿಕ ಬೌಲಿಂಗ್ ಮಾಡಿ ಎಲ್ಲರ ಗಮನ ಸೆಳೆದರು. ಈ ಪಂದ್ಯದಲ್ಲಿ ರಾಹುಲ್ ಬ್ಯಾಟ್ಸ್‌ಮನ್ ಆಗಿ ವಿಶೇಷವಾದದ್ದೇನೂ ಮಾಡದಿದ್ದರೂ, ಬೌಲಿಂಗ್ ಮಾಡುವ ಮೂಲಕ ನೆರೆದಿದ್ದ ಅಭಿಮಾನಿಗಳಿಗೆ ಮನರಂಜನೆ ನೀಡಿದರು.

ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್‌ಗೆ ಹೆಸರುವಾಸಿಯಾಗಿರುವ ರಾಹುಲ್, ಪಂದ್ಯದ ಕೊನೆಯ ದಿನದಂದು ಬೌಲಿಂಗ್‌ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಪಂದ್ಯ ಕೈಮೀರಿ ಹೋಗಿದ್ದರಿಂದ ಕೆಎಲ್ ರಾಹುಲ್ ಬೌಲಿಂಗ್ ಮಾಡಲು ಮುಂದಾದರು. ಇನ್ನಿಂಗ್ಸ್‌ನ 81ನೇ ಮತ್ತು 83ನೇ ಓವರ್‌ಗಳನ್ನು ಬೌಲ್ ಮಾಡಿದ ರಾಹುಲ್ ಮೊದಲ ಓವರ್‌ನಲ್ಲಿ ಕೇವಲ 3 ರನ್‌ಗಳನ್ನು ಬಿಟ್ಟುಕೊಟ್ಟರೆ ಎರಡನೇ ಓವರ್‌ನಲ್ಲಿ ಕೊಂಚ ದುಬಾರಿಯಾದರು. ಒಟ್ಟಾರೆಯಾಗಿ ಎರಡು ಓವರ್‌ಗಳಲ್ಲಿ 15 ರನ್‌ಗಳನ್ನು ನೀಡಿದ ರಾಹುಲ್ ಯಾವುದೇ ವಿಕೆಟ್‌ ಪಡೆಯಲಿಲ್ಲ.

ವಾಸ್ತವವಾಗಿ ರಾಹುಲ್​ಗೆ ವಿಕೆಟ್ ಪಡೆಯುವ ಅವಕಾಶವಿತ್ತು. ಸಾಹಿಲ್ ಲೋಟ್ರಾ ನೀಡಿದ ಸುಲಭ ಕ್ಯಾಚ್ ಅನ್ನು ಮಾಯಾಂಕ್ ಅಗರ್ವಾಲ್ ಸ್ಲಿಪ್‌ನಲ್ಲಿ ಕೈಬಿಟ್ಟರು. ಆದಾಗ್ಯೂ 11 ವರ್ಷಗಳ ನಂತರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡಿದ ರಾಹುಲ್ ಈ ಹಿಂದೆ 2015 ರಲ್ಲಿ ಬೌಲಿಂಗ್ ಮಾಡಿದ್ದರು. ರಾಹುಲ್ ತಮ್ಮ ವೃತ್ತಿಜೀವನದಲ್ಲಿ ಒಂದೇ ಒಂದು ಪ್ರಥಮ ದರ್ಜೆ ವಿಕೆಟ್ ಪಡೆದಿಲ್ಲ ಎಂಬುದನ್ನು ಗಮನಿಸಬೇಕಾದ ಸಂಗತಿಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Feb 28, 2026 08:11 PM
Follow Us