‘ನಿನ್ ತಲೆ ಓಡಿಸ್ಬೇಡ, ಹೇಳಿದ್ ಹಾಕು’; ಪ್ರಸಿದ್ಧ್ ಮೇಲೆ ಕೋಪಗೊಂಡ ರಾಹುಲ್! ವಿಡಿಯೋ
KL Rahul Scolds Prasidh Krishna: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಸೋತ ಬಳಿಕ, ಕೆ.ಎಲ್. ರಾಹುಲ್ ವೇಗಿ ಪ್ರಸಿದ್ಧ್ ಕೃಷ್ಣ ಅವರ ಕಳಪೆ ಬೌಲಿಂಗ್ ಬಗ್ಗೆ ಕನ್ನಡದಲ್ಲಿ ಗದರಿದರು. ಈ ಘಟನೆ ಸ್ಟಂಪ್ ಮೈಕ್ನಲ್ಲಿ ಸೆರೆಯಾಗಿ ವೈರಲ್ ಆಗಿದೆ. ಪ್ರಸಿದ್ಧ್ ಕೃಷ್ಣ ದುಬಾರಿ ಬೌಲಿಂಗ್ ಪ್ರದರ್ಶನದಿಂದ ರಾಹುಲ್ ತಾಳ್ಮೆ ಕಳೆದುಕೊಂಡಿದ್ದರು.
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 358 ರನ್ ಕಲೆಹಾಕಿಯೂ ಸೋತಿತು. ದಕ್ಷಿಣ ಆಫ್ರಿಕಾ ತಂಡ ನಾಲ್ಕು ಎಸೆತಗಳ ಮೊದಲೇ ಈ ಗುರಿಯನ್ನು ತಲುಪಿತು. ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಈ ಸೋಲಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಮೊದಲ ಏಕದಿನದಂತೆ ಎರಡನೇ ಏಕದಿನ ಪಂದ್ಯದಲ್ಲೂ ಪ್ರಸಿದ್ಧ್ ಕಳಪೆ ಬೌಲಿಂಗ್ ಮಾಡಿದ ಸಾಕಷ್ಟು ರನ್ ಬಿಟ್ಟುಕೊಟ್ಟರು. ಇದು ನಾಯಕ ಕೆ.ಎಲ್. ರಾಹುಲ್ ಅವರನ್ನು ಕೆರಳಿಸಿತು. ಹೀಗಾಗಿ ತಾಳ್ಮೆ ಕಳೆದುಕೊಂಡ ರಾಹುಲ್, ಪ್ರಸಿದ್ಧ್ಗೆ ಕನ್ನಡದಲ್ಲಿ ಗದರಿರುವುದು ಸ್ಟಂಪ್ ಮೈಕ್ನಲ್ಲಿ ರೆಕಾರ್ಡ್ ಆಗಿದ್ದು, ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಕನ್ನಡಿಗ ಕೆ.ಎಲ್. ರಾಹುಲ್ ಸಾಮಾನ್ಯವಾಗಿ ಯಾವಾಗಲೂ ಶಾಂತವಾಗಿರುತ್ತಾರೆ. ಅವರು ತಾಳ್ಮೆ ಕಳೆದುಕೊಳ್ಳುವುದು ತೀರ ಕಡಿಮೆ. ಆದರೆ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು ಸರಗವಾಗಿ ರನ್ ಕಲೆಹಾಕುವುದಕ್ಕೆ ಟೀಂ ಇಂಡಿಯಾ ವೇಗಿಗಳು ಅನುವು ಮಾಡಿಕೊಟ್ಟಿದ್ದು, ರಾಹುಲ್ ತಾಳ್ಮೆ ಕಳೆದುಕೊಳ್ಳುವಂತೆ ಮಾಡಿತು. ಅದರಲ್ಲೂ ಸಾಕಷ್ಟು ದುಬಾರಿಯಾಗಿದ್ದ ಪ್ರಸಿದ್ಧ್ ಕೃಷ್ಣ ಮೇಲೆ ಕೋಪಗೊಂಡ ರಾಹುಲ್, ‘ಪ್ರಸಿದ್ಧ್, ನಿನ್ನ ತಲೆ ಓಡಿಸಬೇಡ, ನಾನು ಹೇಳಿದ ಸ್ಥಳದಲ್ಲಿ ಬೌಲ್ ಮಾಡು, ಹೆಡ್ ಕಡೆಗೆ ಬೌಲ್ ಮಾಡಬೇಡ ಎಂದು ಸಲಹೆ ನೀಡಿದ್ದಾರೆ. ಆದಾಗ್ಯೂ, ಪ್ರಸಿದ್ಧ್ ಕೃಷ್ಣ ಮತ್ತೆ ಬ್ಯಾಟ್ಸ್‌ಮನ್‌ನ ತಲೆಯ ಕಡೆಗೆ ಬೌಲ್ ಮಾಡಿದರು, ಇದು ಕೆ.ಎಲ್. ರಾಹುಲ್ ಅವರನ್ನು ಕೋಪಗೊಳಿಸಿತು. ನಂತರ ಕೆ.ಎಲ್. ರಾಹುಲ್, ‘ಪ್ರಸಿದ್ಧ್, ನಾನು ನಿನಗೆ ಹೇಳಿದೆ. ನೀನು ಮತ್ತೆ ತಲೆ ಕಡೆಗೆ ಬೌಲಿಂಗ್ ಮಾಡುತ್ತಿದ್ದೀಯ’ ಎಂದಿದ್ದಾರೆ.
ರಾಯ್‌ಪುರದ ಏಕದಿನ ಪಂದ್ಯದಲ್ಲಿ ಪ್ರಸಿದ್ಧ್ ಕೃಷ್ಣ 8.2 ಓವರ್‌ಗಳಲ್ಲಿ ಪ್ರತಿ ಓವರ್‌ಗೆ 10.2 ರನ್‌ಗಳ ಎಕಾನಮಿ ದರದಲ್ಲಿ 85 ರನ್‌ಗಳನ್ನು ಬಿಟ್ಟುಕೊಟ್ಟರು. ಈ ಕಳಪೆ ಬೌಲಿಂಗ್ ಪ್ರದರ್ಶನವು ಕೃಷ್ಣ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಟೆಸ್ಟ್, ಟಿ20 ಮತ್ತು ಏಕದಿನ ಎಂಬ ಮೂರು ಸ್ವರೂಪಗಳಲ್ಲಿ ಅವರು ತುಂಬಾ ದುಬಾರಿ ಎಂದು ಸಾಬೀತಾಗಿದೆ. ಪ್ರಸಿದ್ಧ್ ಕೃಷ್ಣ ಅವರ ಕೊನೆಯ ಐದು ಪಂದ್ಯಗಳನ್ನು ನೋಡಿದರೆ, ಅವರ ಎಕಾನಮಿ ದರ ಮೂರು ಬಾರಿ ಪ್ರತಿ ಓವರ್‌ಗೆ 9 ರನ್‌ಗಳನ್ನು ಮೀರಿದೆ. ಅವರು ಒಂದು ಸಂದರ್ಭದಲ್ಲಿ ಪ್ರತಿ ಓವರ್‌ಗೆ 10 ಕ್ಕಿಂತ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ಅವರಿಗೆ ಮುಂದಿನ ಪಂದ್ಯದಲ್ಲಿ ಅವಕಾಶ ಸಿಗುವುದು ಅನುಮಾನವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

