Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದರೆ ಶುಭವೋ? ಅಶುಭವೋ? ವಿಡಿಯೋ ನೋಡಿ

|

Updated on: Mar 26, 2024 | 6:53 AM

ಗಾಜು ಒಡೆದರೆ ಪ್ರೀತಿಯಿಂದ ತಂದ ವಸ್ತು ಹಾಳಾಯಿತು ಎಂಬ ಬೇಸರ ಕಾಡುತ್ತದೆ. ಆದರೆ ಇವುಗಳನ್ನು ಹಾಳಾಗದಂತೆ ಕಾಪಾಡುವುದು ತುಂಬಾ ಕಷ್ಟದ ಕೆಲಸ. ಯಾಕೆಂದರೆ ಗಾಜು ತುಂಬಾ ನಾಜುಕಾದ ವಸ್ತು. ಮನೆಯಲ್ಲಿನ ಗಾಜು ಒಡೆದರೆ ಏನು ಅರ್ಥ? ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ...

ಪ್ರಪಂಚದಾದ್ಯಂತ ಜನರು ವಿಭಿನ್ನ ವಿಷಯಗಳ ಬಗ್ಗೆ ವಿಭಿನ್ನ ನಂಬಿಕೆಗಳನ್ನು ಹೊಂದಿದ್ದಾರೆ. ಭಾರತದಲ್ಲಿಯೂ ಅನೇಕ ವಿಷಯಗಳನ್ನು ಶುಭ ಮತ್ತು ಅಶುಭಗಳ ವರ್ಗದಲ್ಲಿ ಇರಿಸಲಾಗುತ್ತದೆ. ಉದಾಹರಣೆಗೆ ನಾಯಿ ಅಳುವುದು, ಬೆಕ್ಕು ದಾರಿಯನ್ನು ದಾಟುವುದು, ರಾತ್ರಿಯಲ್ಲಿ ಉಗುರು ಕಚ್ಚುವುದು ಇತ್ಯಾದಿಗಳನ್ನು ಅನೇಕ ಜನರು ಅಶುಭವೆಂದು ಪರಿಗಣಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಮನೆಯನ್ನು ಅಲಂಕರಿಸಲು ಹೆಚ್ಚಾಗಿ ಗ್ಲಾಸ್ ಅಥವಾ ಗಾಜಿನ ವಸ್ತುಗಳನ್ನು ಬಳಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಗಾಜನ್ನು ಪಾತ್ರೆಗಳು, ಗ್ಯಾಜೆಟ್‌ಗಳು-ಎಲೆಕ್ಟ್ರಾನಿಕ್ಸ್ ಸರಕುಗಳವರೆಗೆ ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಇದರೊಂದಿಗೆ ಗಾಜು ಒಡೆದರೆ ಎಂಬ ಭಯವೂ ಇರುತ್ತದೆ. ಗಾಜು ಒಡೆದರೆ ಪ್ರೀತಿಯಿಂದ ತಂದ ವಸ್ತು ಹಾಳಾಯಿತು ಎಂಬ ಬೇಸರ ಕಾಡುತ್ತದೆ. ಆದರೆ ಇವುಗಳನ್ನು ಹಾಳಾಗದಂತೆ ಕಾಪಾಡುವುದು ತುಂಬಾ ಕಷ್ಟದ ಕೆಲಸ. ಯಾಕೆಂದರೆ ಗಾಜು ತುಂಬಾ ನಾಜುಕಾದ ವಸ್ತು. ಮನೆಯಲ್ಲಿನ ಗಾಜು ಒಡೆದರೆ ಏನು ಅರ್ಥ? ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ…

Follow us on