ಫೈನಲ್ಗೆ ಕೊಚ್ಚಿ ಬ್ಲೂ ಟೈಗರ್ಸ್ ಎಂಟ್ರಿ: ಸಂಜು ಸ್ಯಾಮ್ಸನ್ ಅಲಭ್ಯ
ಸೆಪ್ಟೆಂಬರ್ 7 ರಂದು ನಡೆಯಲಿರುವ ಕೇರಳ ಕ್ರಿಕೆಟ್ ಲೀಗ್ನ ಫೈನಲ್ ಪಂದ್ಯದಲ್ಲಿ ಕೊಲ್ಲಂ ಸೈಲರ್ಸ್ ಹಾಗೂ ಕೊಚ್ಚಿ ಬ್ಲೂ ಟೈಗರ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೆ ಕೊಚ್ಚಿ ತಂಡದ ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್ ಅಲಭ್ಯರಾಗಲಿದ್ದಾರೆ. ಏಕೆಂದರೆ ಸ್ಯಾಮ್ಸನ್ ಈಗಾಗಲೇ ಕೊಚ್ಚಿ ಬ್ಲೂ ಟೈಗರ್ಸ್ ತಂಡವನ್ನು ತೊರೆದಿದ್ದು, ಏಷ್ಯಾಕಪ್ಗಾಗಿ ದುಬೈಗೆ ಪ್ರಯಾಣಿಸಿದ್ದಾರೆ. ಹೀಗಾಗಿ ಕೇರಳ ಪ್ರೀಮಿಯರ್ ಲೀಗ್ನ ಫೈನಲ್ಗೆ ಸಂಜು ಸ್ಯಾಮ್ಸನ್ ಅಲಭ್ಯರಾಗಲಿದ್ದಾರೆ.
ಕೇರಳ ಕ್ರಿಕೆಟ್ ಲೀಗ್ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕ್ಯಾಲಿಕಟ್ ಗ್ಲೋಬ್ಸ್ಟಾರ್ ತಂಡವನ್ನು ಮಣಿಸಿ ಕೊಚ್ಚಿ ಬ್ಲೂ ಟೈಗರ್ಸ್ ತಂಡ ಫೈನಲ್ಗೇರಿದೆ. ತಿರುವನಂತಪುರದ ಗ್ರೀನ್ಫೀಲ್ಡ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಕ್ಯಾಲಿಕಟ್ ಗ್ಲೋಬ್ಸ್ಟಾರ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕೊಚ್ಚಿ ಬ್ಲೂ ಟೈಗರ್ಸ್ ಪರ ವಿಕೆಟ್ ಕೀಪರ್ ಬ್ಯಾಟರ್ ನಿಖಿಲ್ ತೋಟತ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
36 ಎಸೆತಗಳನ್ನು ಎದುರಿಸಿದ ನಿಖಿಲ್ 7 ಭರ್ಜರಿ ಸಿಕ್ಸ್ಗಳೊಂದಿಗೆ ಅಜೇಯ 64 ರನ್ ಬಾರಿಸಿದರು. ಈ ಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ಕೊಚ್ಚಿ ಬ್ಲೂ ಟೈಗರ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 186 ರನ್ ಕಲೆಹಾಕಿತು.
187 ರನ್ಗಳ ಕಠಿಣ ಗುರಿ ಬೆನ್ನತ್ತಿದ ಕ್ಯಾಲಿಕಟ್ ಗ್ಲೋಬ್ಸ್ಟಾರ್ಸ್ ಪರ ಅಖಿಲ್ ಸ್ಕೇರಿಯಾ 37 ಎಸೆತಗಳಲ್ಲಿ 72 ರನ್ ಬಾರಿಸಿದರು. ಇದಾಗ್ಯೂ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಕ್ಯಾಲಿಕಟ್ ಗ್ಲೋಬ್ಸ್ಟಾರ್ಸ್ ತಂಡವು 20 ಓವರ್ಗಳಲ್ಲಿ 171 ರನ್ಗಳಿಸಿ 15 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಕೊಚ್ಚಿ ಬ್ಲೂ ಟೈಗರ್ಸ್ ತಂಡವು ಕೇರಳ ಕ್ರಿಕೆಟ್ ಲೀಗ್ನಲ್ಲಿ ಫೈನಲ್ಗೇರಿದೆ.
ಸಂಜು ಸ್ಯಾಮ್ಸನ್ ಅಲಭ್ಯ: