ಕೊಡಗಿನಲ್ಲಿ ಭಾರೀ‌ ಮಳೆ: ಗೃಹಪ್ರವೇಶಕ್ಕೆ ಸಿದ್ಧವಾಗಿದ್ದ ಮನೆ ಭಾಗಶಃ ಕುಸಿತ

Edited By:

Updated on: Aug 01, 2026 | 3:34 PM

ಮುಖ್ಯಾಂಶಗಳು

  • ಕೊಡಗು ಜಿಲ್ಲೆಯಲ್ಲಿ ಮುಂದುವರೆದ ಭಾರೀ ಮಳೆ
  • ಮಡಿಕೇರಿ‌ಯಲ್ಲಿ ನಿರ್ಮಾಣ ಹಂತದ‌ ಮನೆ ಭಾಗಶಃ ಕುಸಿತ
  • ಇನ್ನೆರಡು ತಿಂಗಳಲ್ಲಿ ಗೃಹ ಪ್ರವೇಶಕ್ಕೆ ಸಿದ್ಧತೆ ನಡೆಸಿದ್ದ ಕುಟುಂಬ

ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಡಿಕೇರಿ ನಗರದ ಮುಳಿಯ ಲೇಔಟ್‌ನಲ್ಲಿ ನಿವೃತ್ತ ಎಎಸ್​ಐ ಬಿದ್ದಪ್ಪ ಅವರಿಗೆ ಸೇರಿದ ನಿರ್ಮಾಣ ಹಂತದ ಮನೆ ಭಾಗಶಃ ಕುಸಿದಿದೆ. ಮನೆಗೆ ನಿಗದಿಯಾಗಿದ್ದ ಗೃಹಪ್ರವೇಶ ಕಾರ್ಯಕ್ರಮಕ್ಕೆ ಇನ್ನೆರಡು ತಿಂಗಳು ಬಾಕಿ ಇರುವಾಗಲೇ, ಬೃಹತ್ ತಡೆಗೋಡೆ ಸಮೇತ ಪೋರ್ಟಿಕೊ ಕುಸಿದುಬಿದ್ದಿದ್ದು, ಸಂಪೂರ್ಣ ಮನೆ ಕುಸಿಯುವ ಭೀತಿ ಎದುರಾಗಿದೆ.

ಕೊಡಗು, ಆಗಸ್ಟ್​​ 01: ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅನಾಹುತಗಳು ಸಂಭವಿಸುತ್ತಿವೆ. ಮಡಿಕೇರಿ ನಗರದ ಎಫ್‌ಎಂಸಿ ಕಾಲೇಜಿನ ಹಿಂಭಾಗದಲ್ಲಿರುವ ಖಾಸಗಿ ಲೇಔಟ್‌ನಲ್ಲಿ ನಿವೃತ್ತ ಎಎಸ್​ಐ ಬಿದ್ದಪ್ಪ ಅವರಿಗೆ ಸೇರಿದ ನಿರ್ಮಾಣ ಹಂತದ ಮನೆಯೊಂದು ಭಾಗಶಃ ಕುಸಿದುಬಿದ್ದಿದೆ. ಮನೆಯ ತಡೆಗೋಡೆ ಕುಸಿದಿದ್ದು, ಇಡೀ ಮನೆಗೆ ಅಪಾಯ ಎದುರಾಗಿದೆ. ಗೃಹಪ್ರವೇಶಕ್ಕೆ ಇನ್ನೆರಡು ತಿಂಗಳು ಬಾಕಿ ಇರುವಾಗಲೇ ದುರಂತರ ಸಂಭವಿಸಿದ್ದು, ಕನಸಿನ ಮನೆ ಕುಸಿದು ಹೋಗಿದೆ. ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮನೆಯ ಕೆಳಭಾಗದ ಮಣ್ಣು ಕುಸಿಯಲಾರಂಭಿಸಿದೆ. ಸ್ಥಳೀಯರು ಮಣ್ಣು ಕುಸಿಯುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಸುಮಾರು ಮೂರರಿಂದ ನಾಲ್ಕು ಅಡಿಯ ಬೃಹತ್ ತಡೆಗೋಡೆ ಕೂಡ ಮಣ್ಣಿನ ಒತ್ತಡಕ್ಕೆ ಕುಸಿದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us