ಮಾಲೆಧರಿಸಿ ಇರುಮುಡಿ ತಲೆಮೇಲೆ ಹೊತ್ತು ಶಬರಿಮಲೆ ಯಾತ್ರೆಗೆ ಹೊರಟ ಸಂಸದ ಪ್ರತಾಪ್ ಸಿಂಹ

ಮಾಲೆಧರಿಸಿ ಇರುಮುಡಿ ತಲೆಮೇಲೆ ಹೊತ್ತು ಶಬರಿಮಲೆ ಯಾತ್ರೆಗೆ ಹೊರಟ ಸಂಸದ ಪ್ರತಾಪ್ ಸಿಂಹ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 19, 2023 | 11:30 AM

ಪವಿತ್ರ ಕ್ಷೇತ್ರವಾಗಿರುವ ಶಬರಿಮಲೆಗೆ ಯಾತ್ರೆ ಮಾಡಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುವ ಸಂಕಲ್ಪವನ್ನು ಪ್ರತಿವರ್ಷ ಲಕ್ಷಾಂತರ ಹಿಂದೂಗಳು ಮಾಡಿಕೊಳ್ಳುತ್ತಾರೆ. ಪ್ರತಾಪ್ ಸಿಂಹ ಕಳೆದ ವರ್ಷ ಅಥವಾ ಇದಕ್ಕೆ ಮೊದಲು ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ತೆರಳಿದ್ದರೋ ಇಲ್ಲವೋ ಗೊತ್ತಿಲ್ಲ.

ಬೆಂಗಳೂರು: ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha) ಪರಮ ದೈವಭಕ್ತರು. ಅವರು ಬೇರೆ ಬೇರೆ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವುದನ್ನು ಕನ್ನಡಿಗರು ಮಾಧ್ಯಮಗಳಲ್ಲಿ ಹಲವಾರು ಬಾರಿ ನೋಡಿದ್ದಾರೆ. ಮಾಲೆಧರಿಸಿ ತಲೆಮೇಲೆ ಇರುಮುಡಿ ಹೊತ್ತು ಶಬರಿಮಲೆ (Sabarimala) ಯಾತ್ರೆಗೆ ಹೊರಟ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ (social media) ಇವತ್ತು ಅವರು ಶೇರ್ ಮಾಡಿದ್ದಾರೆ. ಪ್ರತಾಪ್ ಸಿಂಹ ಅವರೊಂದಿಗೆ ಪ್ರಾಯಶಃ ಸ್ನೇಹಿತರು, ಪಕ್ಷದ ಕಾರ್ಯಕರ್ತರು ಅಥವಾ ಬೆಂಬಲಿಗರು ಕೂಡ ಇದ್ದಾರೆ. ಪವಿತ್ರ ಕ್ಷೇತ್ರವಾಗಿರುವ ಶಬರಿಮಲೆಗೆ ಯಾತ್ರೆ ಮಾಡಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುವ ಸಂಕಲ್ಪವನ್ನು ಪ್ರತಿವರ್ಷ ಲಕ್ಷಾಂತರ ಹಿಂದೂಗಳು ಮಾಡಿಕೊಳ್ಳುತ್ತಾರೆ. ಪ್ರತಾಪ್ ಸಿಂಹ ಕಳೆದ ವರ್ಷ ಅಥವಾ ಇದಕ್ಕೆ ಮೊದಲು ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ತೆರಳಿದ್ದರೋ ಇಲ್ಲವೋ ಗೊತ್ತಿಲ್ಲ. ಮಂಗಳವಾರ ರಾತ್ರಿ ಅವರು ತಲಕಾವೇರಿಯಲ್ಲಿ ಜರುಗಿದ ತೀರ್ಥೋದ್ಭವ ಸಂದರ್ಭದಲ್ಲಿ ಅವರು ಹಾಜರಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ