ಮತ್ತೆ ಮುನ್ನೆಲೆಗೆ ಬಂದ ಮಹಿಷ ದಸರಾ ವಿವಾದ: ಅ. 13ರಂದು ಚಾಮುಂಡಿ ಬೆಟ್ಟ ಚಲೋಗೆ ಪ್ರತಾಪ್ ಸಿಂಹ ಕರೆ
ವಿಶ್ವ ವಿಖ್ಯಾತ ಮೈಸೂರು ದಸರಾಗೆ ಸಕಲ ಸಿದ್ಧತೆಗಳು ನಡೆದಿವೆ. ಇದರ ಮಧ್ಯೆ ಮಹಿಷ ದಸರಾ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ಅಕ್ಟೋಬರ್ 13ರಂದು ಮಹಿಷ ದಸರಾ ವಿರೋಧಿಸಿ ಪ್ರತಾಪ್ ಸಿಂಹ ಅವರು ಚಾಮುಂಡಿ ಬೆಟ್ಟ ಚಲೋಗೆ ಕರೆ ನೀಡಿದ್ದಾರೆ.
ಮೈಸೂರು, (ಅಕ್ಟೋಬರ್ 04): ವಿಶ್ವ ವಿಖ್ಯಾತ ಮೈಸೂರು ದಸರಾಗೆ(mysore dasara) ಸಕಲ ಸಿದ್ಧತೆಗಳು ನಡೆದಿವೆ. ಅಕ್ಟೋಬರ್ 24ರಂದು ಜಂಜುಸವಾರಿ ನಡೆಯಲಿದ್ದು. ಅರಮನೆಯಲ್ಲಿ ಇದಕ್ಕೆ ಬೇಕಾದ ತಯಾರಿಗಳು ಸಹ ನಡೆದಿವೆ. ಇದರ ಮಧ್ಯೆ ಇದೀಗ ಮಹಿಷ ದಸರಾ ( mahisha dasara) ವಿವಾದ ಮುನ್ನೆಲೆಗೆ ಬಂದಿದೆ. ಹೌದು…ಈ ಬಾರಿ ಮಹಿಷ ದಸರಾ ಆಚರಣೆ ಕೆಲವರು ಮುಂದಾಗಿದ್ದಾರೆ. ಆದ್ರೆ, ಇದಕ್ಕೆ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರೋಧ ವ್ಯಕ್ತಪಡಿಸಿದ್ದು, ಮಹಿಷ ದಸರಾ ತಡೆಯಲು ಇದೇ ಅಕ್ಟೋಬರ್ 13ರಂದು ಚಾಮುಂಡಿ ಬೆಟ್ಟ ಚಲೋಗೆ ಕರೆ ನೀಡಿದ್ದಾರೆ.
ಮೈಸೂರಿನಲ್ಲಿ ಇಂದು(ಅಕ್ಟೋಬರ್ 04) ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಅಕ್ಟೋಬರ್ 13ರಂದು ಮಹಿಷ ದಸರಾ ಆಚರಣೆಯಂದೇ ಚಲೋ ಚಾಮುಮಡಿ ಬೆಟ್ಟ ಜಾಥ ಹಮ್ಮಿಕೊಳ್ಳಲಾಗಿದೆ. ಮಹಿಷ ದಸರಾ ದಿನವೇ ಚಲೋ ಚಾಮುಂಡಿ ಕಾರ್ಯಕ್ರಮ ನಡೆಯಲಿದ್ದು, ಭಕ್ತರ ಭಾವನೆಗೆ ನೋವಾಗಬಾರದು ಎನ್ನುವ ಕಾರಣಕ್ಕೆ ಈ ಜಾಥ ಮಾಡಲಿದ್ದೇವೆ. ಮಹಿಷಾಸುರ ಬಳಿ ಅನಾಚಾರ ತಡೆದು ಚಾಮುಂಡೇಶ್ವರಿಗೆ ಪೂಜೆ ಮಾಡುತ್ತೇವೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್ ಮನವಿ ಮಾಡಿದ್ದೇವೆ. ಇದು ಬಿಜೆಪಿ ಕಾರ್ಯಕ್ರಮವಲ್ಲ. ಇದು ಎಲ್ಲರೂ ಸೇರಿ ಮಾಡುತ್ತಿರುವ ಜಾಥ. ನಮ್ಮ ನಂಬಿಕೆ ಆಚರಣೆ ಉಳಿಸಿಕೊಳ್ಳಲು ಈ ಜಾಥ ನಡೆಸಲಾಗುತ್ತಿದ್ದು, ಎಲ್ಲರೂ ಭಾಗವಹಿಸಲು ಕರೆ ನೀಡಿದರು.
ಇದನ್ನೂ ಓದಿ: ಮೈಸೂರು ದಸರಾ ಪೋಸ್ಟರ್, ವೆಬ್ಸೈಟ್ ಬಿಡುಗಡೆ ಮಾಡಿದ ಸಚಿವರು
414ನೇ ದಸರಾಗೆ ಮೈಸೂರು ಸಜ್ಜಾಗಿದೆ. ಡಾ ಎಚ್ ಸಿ ಮಹದೇವಪ್ಪ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ದಸರಾ ನಡೆಯಲಿದೆ. ದಸರಾ 414 ವರ್ಷದಿಂದ ನಡೆದುಕೊಂಡು ಬಂದಿದೆ. ಟಿಪ್ಪು ಹೈದರಾಲಿ ಕಾಲದಲ್ಲಿ ಬಿಟ್ಟರೆ ನಿರಂತರವಾಗಿ ಆಚರಣೆ ಮಾಡಿಕೊಂಡು ಬರಲಾಗಿದೆ. ಸ್ವಾತಂತ್ರ್ಯ ನಂತರವೂ ಮುಂದುವರೆದಿದೆ. ಅಧಿಕಾರದಲ್ಲಿ ಯಾರೇ ಇದ್ದರೂ ಸಹ ನಡೆದುಕೊಂಡು ಬಂದಿದೆ. ಮೈಸೂರಿನವರಿಗೆ ದಸರಾ ನವರಾತ್ರಿ ಚಾಮುಂಡಿ ತಾಯಿ ಆಕೆಯ ಮಹಿಮೆ ಗೊತ್ತು. ಆಷಾಢ ಶುಕ್ರವಾರ ವರ್ಧಂತಿ ತೆಪ್ಪೋತ್ಸವ ಸಹ ಗೊತ್ತು. ಆದ್ರೆ, 2015 -2016ರಲ್ಲಿ ಅಸಹ್ಯ ಅಪದ್ದ ಅನಾಚಾರ ಮಹಿಷ ದಸರಾ ಹುಟ್ಟು ಹಾಕಲಾಯಿತು. ದೆವ್ವ ಯಾವಾಗ ದೇವರಾಯಿತು ಗೊತ್ತಿಲ್ಲ. ಅಂದು ದೇವರನ್ನು ದೆವ್ವ ಮಾಡುವ ದೆವ್ವವನ್ನು ದೇವರು ಮಾಡುವ ಕೆಲಸ 2017, 2018ರಲ್ಲೂ ಮುಂದುವರಿಯಿತು ಎಂದು ಕಿಡಿಕಾರಿದರು.
ಯಡಿಯೂರಪ್ಪ ಸಿಎಂ ಆದ ಮೇಲೆ ಇದಕ್ಕೆ ಬ್ರೇಕ್ ಹಾಕಲಾಗಿತ್ತು. ಆಸ್ತಿಕರು ನಂಬಿಕೆ ಇಟ್ಟವರಿಗೆ ನೋವಾಗುತ್ತದೆ. ಆ ಕಾರಣಕ್ಕೆ ಮಹಿಷ ದಸರಾವನ್ನು ರದ್ದುಪಡಿಸಲಾಗಿತ್ತು. 2019, 2020, 2021, 2022 ನಾಲ್ಕು ವರ್ಷ ಮಹಿಷ ದಸರಾವನ್ನು ತಡೆದಿದ್ದೇವೆ. ಶ್ರದ್ದೆಯಿಂದ ಚಾಮುಂಡಿ ಪೂಜೆ ನಡೆಯುತ್ತಿದೆ. ಮತ್ತೆ ಸಿದ್ದರಾಮಯ್ಯ ಸಿಎಂ ಆಗಿ ಬಂದಿದ್ದಾರೆ. ಈಗ ಮತ್ತೆ ಮಹಿಷ ದಸರಾ ಮಾಡುವವರು ತಲೆ ಎತ್ತಿದ್ದಾರೆ. ಇದನ್ನು ತಡೆಯಲು ಅಕ್ಟೋಬರ್ 13ಕ್ಕೆ ಚಲೋ ಚಾಮುಂಡಿ ಬೆಟ್ಟ ಜಾಥ ನಡೆಯಲಿದೆ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ