ರಿಯಲ್ ಎಸ್ಟೇಟ್ ವ್ಯವಹಾರ: ನಿವೃತ್ತ ಡಿವೈಎಸ್​ಪಿ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲು

ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ನಿವೃತ್ತ ಡಿವೈಎಸ್​ಪಿ ಸೇರಿದಂತೆ ನಾಲ್ವರ ವಿರುದ್ಧ ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಗಳೂರಿನ ಸುಂಕದಕಟ್ಟೆ ನಿವಾಸಿ ಗೌತಮ್‌ಕುಮಾರ್‌ರಿಂದ ದೂರು ನೀಡಿದ್ದು, ಜೊತೆಗೆ ನನ್ನ ಮೇಲೆ ನಾಲ್ವರಿಂದ ಹಲ್ಲೆ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ.  

ರಿಯಲ್ ಎಸ್ಟೇಟ್ ವ್ಯವಹಾರ: ನಿವೃತ್ತ ಡಿವೈಎಸ್​ಪಿ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲು
ನಜರ್‌ಬಾದ್ ಪೊಲೀಸ್ ಠಾಣೆ
Follow us
ರಾಮ್​, ಮೈಸೂರು
| Updated By: ಗಂಗಾಧರ​ ಬ. ಸಾಬೋಜಿ

Updated on: Oct 04, 2023 | 9:58 AM

ಮೈಸೂರು, ಅಕ್ಟೋಬರ್​ 04: ರಿಯಲ್ ಎಸ್ಟೇಟ್ (Real estate) ವ್ಯವಹಾರಕ್ಕೆ ಸಂಬಂಧಿಸಿದಂತೆ ನಿವೃತ್ತ ಡಿವೈಎಸ್​ಪಿ ಸೇರಿದಂತೆ ನಾಲ್ವರ ವಿರುದ್ಧ ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೈಸೂರಿನ ಆಲನಹಳ್ಳಿ ನಿವಾಸಿ ನಿವೃತ್ತ ಡಿವೈಎಸ್‌ಪಿ ವಿಜಯಕುಮಾರ್, ವೇಣು, ರಾಜೇಶ್ ಹಾಗೂ ಅಭಿ ಎಂಬುವವರ ವಿರುದ್ಧ ಬೆಂಗಳೂರಿನ ಸುಂಕದಕಟ್ಟೆ ನಿವಾಸಿ ಗೌತಮ್‌ಕುಮಾರ್‌ರಿಂದ ದೂರು ನೀಡಿದ್ದು, ಜೊತೆಗೆ ನಾಲ್ವರಿಂದ ಹಲ್ಲೆ ಆರೋಪ ಮಾಡಿದ್ದಾರೆ.

ಅಧಿಕಾರಿಗಳ ವಿರುದ್ಧ ಕಿರುಕುಳ ಆರೋಪ: ಆತ್ಮಹತ್ಯೆಗೆ ಯತ್ನಿಸಿದ ನೌಕರ

ಆನೇಕಲ್: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಚಂದಾಪುರ ಪುರಸಭೆಯಲ್ಲಿ ಹಿರಿಯ ಅಧಿಕಾರಿಗಳ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದ್ದು, ಡಿ ಗ್ರೂಪ್‌ ನೌಕರ ಕಚೇರಿಯಲ್ಲೇ ಸಿಬ್ಬಂದಿ ಎದುರೇ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ಇತ್ತಿಚೆಗೆ ನಡೆದಿತ್ತು. ವೇಣು ಆತ್ಮಹತ್ಯೆಗೆ ಯತ್ನಿಸಿದ ಡಿ ಗ್ರೂಪ್ ನೌಕರ. ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಲಾಗಿದೆ ಎನ್ನಲಾಗುತ್ತಿದ್ದು, ಅಸ್ವಸ್ಥ ನೌಕರ ವೇಣುಗೆ ಚಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಬಾಲ ಬಿಚ್ಚಿದ ರೌಡಿಗಳು; ಉದ್ಯಮಿ ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ, ಬೆದರಿಕೆ ಆಡಿಯೋ ಇಲ್ಲಿದೆ

ಪುರಸಭೆ ಮುಖ್ಯಾಧಿಕಾರಿ ಶ್ವೇತಾಬಾಯಿ ಟಾರ್ಚರ್ ಕೊಟ್ಟಿದ್ದಾರೆ ಎಂದು ವೇಣು ತಾಯಿ ಗಂಭೀರ ಆರೋಪ ಮಾಡಿದ್ದರು. ಕಿರುಕುಳದ ಬಗ್ಗೆ ಮೂರು ದಿನಗಳಿಂದ ಮನೆಯಲ್ಲಿ ಹೇಳುತ್ತಿದ್ದರು. ತುಂಬಾ ಕಿರುಕುಳ ನೀಡ್ತಿದ್ದಾರೆ ವಿಷ ತೆಗೆದುಕೊಳ್ಳುತ್ತೇನೆ ಎಂದಿದ್ದರು. ಸೆ. 30 ರಂದು ಕಚೇರಿಯಲ್ಲಿ ಕಿರುಕುಳ ನೀಡಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಿದ್ದರು.

ಇಷ್ಟ ಬಂದ ಕಡೆ ಡ್ಯೂಟಿ ಹಾಗೂ ರಜೆ ನೀಡಲು ಲಂಚ ಕೇಳುತ್ತಿರುವ ಆರೋಪ

ಬೆಂಗಳೂರು: ಇಷ್ಟ ಬಂದ ಕಡೆ ಡ್ಯೂಟಿ ಹಾಗೂ ರಜೆ ನೀಡಲು ಲಂಚ ಕೇಳುತ್ತಿರುವ ಆರೋಪ ಕೆಎಸ್‌ಆರ್‌ಪಿ ಹಿರಿಯ ಅಧಿಕಾರಿಗಳ ವಿರುದ್ಧ ಕೇಳಿಬಂದಿತ್ತು. ಕೂಡ್ಲು ಬಳಿಯ 9ನೇ ಬ್ಯಾಚ್‌ನ ಕೆಎಸ್​ಆರ್​ಪಿ ಹಿರಿಯ ಅಧಿಕಾರಿಗಳ ಅಧಿಕಾರ ದುರುಪಯೋಗದ ವಿರುದ್ಧ ಬೇಸತ್ತು ಹೆಡ್‌ಕಾನ್ಸ್‌ಟೇಬಲ್‌ ಓಂಕಾರಪ್ಪ ಅವರು ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್‌ ಅವರಿಗೆ ದೂರು ನೀಡಿದ್ದರು.

ಇದನ್ನೂ ಓದಿ: ಕೋಟಿ ಕೋಟಿ ಹಣ ಅಕ್ರಮ: ಬಿಎಂಟಿಸಿಯ 7 ಅಧಿಕಾರಿಗಳ ವಿರುದ್ಧ ಎಫ್ಐಆರ್, ಓರ್ವ ಆಫೀಸರ್ ಅರೆಸ್ಟ್

ಹಿರಿಯ ಪೊಲೀಸ್ ಅಧಿಕಾರಿಗಳು, ಮೇಲಧಿಕಾರಿಗಳು ನಮ್ಮನ್ನು ಹಫ್ತಾ ವಸೂಲಿ ಮಾಡಲು ಕಳುಹಿಸುತ್ತಾರೆ ಎಂದು ಕಲಬುರಗಿಯ ಪೊಲೀಸ್ ಕಾನ್​ಸ್ಟೇಬಲ್​ಗಳು ಆರೋಪಿಸಿದ್ದರು. ಅಧಿಕಾರಿಗಳ ನಡೆಯಿಂದ ಬೇಸತ್ತು ಕಲಬುರಗಿ ನಗರದ ಸಂಚಾರಿ ಠಾಣೆ 1 ರಲ್ಲಿನ ಸಿಬ್ಬಂದಿ ಚಂದ್ರಕಾಂತ್ ಆತ್ಮಹತ್ಯೆಗೂ ಯತ್ನಿಸಿದ್ದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.