ಬೆಂಗಳೂರಿನಲ್ಲಿ ಮತ್ತೆ ಬಾಲ ಬಿಚ್ಚಿದ ರೌಡಿಗಳು; ಉದ್ಯಮಿ ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ, ಬೆದರಿಕೆ ಆಡಿಯೋ ಇಲ್ಲಿದೆ

ಸಂತೋಷ್ ಅಂಡ್ ಗ್ಯಾಂಗ್ ಹಣಕ್ಕಾಗಿ ಉದ್ಯಮಿ ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ್ದರು. ಬಳಿಕ ಬಿಟ್ಟು ಕಳುಹಿಸಿ ರೌಡಿ ಸಂತೋಷ್ ಆಗಾಗ ಹಣ ಕೊಡು ಎಂದು ಬೆದರಿಕೆ ಹಾಕುತ್ತಿದ್ದನಂತೆ. ಅಲ್ಲದೆ ಸಂಬಂಧಿಕನೇ ಸುಪಾರಿ ಕೊಟ್ಟಿದ್ದಾನೆ ಎಂದು ಹೇಳಿ ಬೆದರಿಸುತ್ತಿದ್ದನಂತೆ. ಉದ್ಯಮಿ ಕಣ್ಣೀರು ಹಾಕಿದ್ರು ಬಿಡದೆ ಟಾರ್ಚರ್ ನೀಡಿದ್ದ ಎಂದು ಕಿಡ್ನಾಪ್ ಆಗಿದ್ದ ಉದ್ಯಮಿ ಸಿಸಿಬಿಗೆ ದೂರು ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿ ಮತ್ತೆ ಬಾಲ ಬಿಚ್ಚಿದ ರೌಡಿಗಳು; ಉದ್ಯಮಿ ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ, ಬೆದರಿಕೆ ಆಡಿಯೋ ಇಲ್ಲಿದೆ
ರೌಡಿ ಸಂತೋಷ್ ಅಂಡ್ ಗ್ಯಾಂಗ್
Follow us
Jagadisha B
| Updated By: ಆಯೇಷಾ ಬಾನು

Updated on: Oct 04, 2023 | 9:23 AM

ಬೆಂಗಳೂರು, ಅ.04: ಸಿಲಿಕಾನ್ ಸಿಟಿಯಲ್ಲಿ ರೌಡಿಗಳು ಮತ್ತೆ ಬಾಲ ಬಿಚ್ಚಿದ್ದಾರೆ. ಕುಳ್ಳು ರಿಜ್ವಾನ್ ಸಹಚರ ಸಂತೋಷ್​ನಿಂದ ನಡೆದ ಕಿಡ್ನಾಪ್ ಕಹಾನಿಗೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಮಾಫಿಯಾ ಲೀಡರ್​ಗಳ ರೀತಿ ಕುಖ್ಯಾತ ರೌಡಿ ಸಹಚರರು ಕಾಲ್ ಮಾಡಿ ಉದ್ಯಮಿಗೆ ಬೆದರಿಕೆ ಹಾಕಿದ ಘಟನೆ ನಡೆದಿದೆ. ರೌಡಿಗಳ ಕಿರುಕುಳಕ್ಕೆ ಬೇಸತ್ತ ಉದ್ಯಮಿ ತಾನು ಆತ್ಮಹತ್ಯೆ ಮಾಡಿಕೊಳ್ತೀನಿ ಎಂದರೂ ಬಿಡದೆ ರೌಡಿಗಳು ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಬೆಂಗಳೂರಿನಲ್ಲೀಗ ಹಳೆ ರೌಡಿಸಂ ಆ್ಯಕ್ಟೀವ್ ಆಯ್ತಾ ಎಂಬ ಭಯ ಹುಟ್ಟುಕೊಂಡಿದೆ. ಸಿಸಿಬಿಗೆ ಉದ್ಯಮಿ ದೂರು ನೀಡಿದ ಬಳಿಕ ಸಂತೋಷ್ @ ಸ್ಕ್ರೂ ಅಂಡ್ ಗ್ಯಾಂಗ್ ನ ಅಸಲಿ ಕಹಾನಿ ರಿವೈಲ್ ಆಗಿದೆ.

ಸಂತೋಷ್ ಅಂಡ್ ಗ್ಯಾಂಗ್ ಹಣಕ್ಕಾಗಿ ಉದ್ಯಮಿ ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ್ದರು. ಬಳಿಕ ಬಿಟ್ಟು ಕಳುಹಿಸಿ ರೌಡಿ ಸಂತೋಷ್ ಆಗಾಗ ಹಣ ಕೊಡು ಎಂದು ಬೆದರಿಕೆ ಹಾಕುತ್ತಿದ್ದನಂತೆ. ಅಲ್ಲದೆ ಸಂಬಂಧಿಕನೇ ಸುಪಾರಿ ಕೊಟ್ಟಿದ್ದಾನೆ ಎಂದು ಹೇಳಿ ಬೆದರಿಸುತ್ತಿದ್ದನಂತೆ. ಉದ್ಯಮಿ ಕಣ್ಣೀರು ಹಾಕಿದ್ರು ಬಿಡದೆ ಟಾರ್ಚರ್ ನೀಡಿದ್ದ ಎಂದು ಕಿಡ್ನಾಪ್ ಆಗಿದ್ದ ಉದ್ಯಮಿ ಸಿಸಿಬಿಗೆ ದೂರು ಸಲ್ಲಿಸಿದ್ದಾರೆ. ಸಂತೋಷ್ ಹಾಗೂ ಕಿಡ್ನಾಪ್ ಆಗಿದ್ದ ಉದ್ಯಮಿ ರಂಜಿತ್ ನಡುವಿನ ಸಂಭಷಣೆ ಟಿವಿ9ಗೆ ಲಭ್ಯವಾಗಿದೆ.

ರೌಡಿ ಸಂತೋಷ್ ಬೆದರಿಕೆ ಹಾಕೋ ಸ್ಟೈಲ್ ಹೇಗಿದೆ ಗೊತ್ತಾ?

ಸಂತೋಷ್: ಎಷ್ಟೋ ಸಲ ಹೇಳೊದು ನಿನಗೆ ನಾನು? ಏನ್ ಆಟಗಳಾಡ್ತಿಯಾ? ರಂಜಿತ್: ಅಮೌಂಟ್ ಅಡ್ಜೆಸ್ಟ್ ಆಗ್ತಾಯಿಲ್ಲ. ಆರು ಲಕ್ಷ ಆಗಿದೆ ಗುರು ಸಂತೋಷ್: ಆಟ ಆಡ್ತಾಯಿದಿಯಾ ನೀನು? ನೆಲಮಂಗಲದಲ್ಲಿದಿನಿ, ನಾಗಮಂಗಲದಲ್ಲಿದಿನಿ ಅನ್ಕೊಂಡು.. ರಂಜಿತ್: ಆರಷ್ಟೇ ಅರೆಂಜ್ ಆಗಿರೊದು ಗುರು, ಇನ್ನು ನಾಲ್ಕು ರೆಡಿ ಮಾಡ್ತಾಯಿದೀನಿ. ಸಂತೋಷ್: ಏನಾದ್ರು ಮಾಡ್ಕೊ ನಂಗಂತು ಗೊತ್ತಿಲ್ಲ. ಒನ್ ಅವರ್ ಟೈಂ ಕೊಡ್ತಿನಿ. 8 ಗಂಟೆ ಒಳೆಗೆ ಬಂದ್ರೆ ನಾನು ಮಾತಾಡ್ತಿನಿ. ನೀನು ಬಂದಿಲ್ಲ ಅಂದ್ರೇ ನಾನೇನು ಮಾತಾಡಲ್ಲ. ಇಷ್ಟ ಬಂದಂಗ್ ಅದೇನ್ ಮಾಡ್ಕೊತಿಯೋ ಮಾಡ್ಕೊ. ರಂಜಿತ್: ಗುರು.. ಏನ್ ಗುರು.. ನೀವೆ ಹೀಗಂದ್ರೆ ನಾನು ಸತ್ತೊಗ್ಬಿಡ್ತಿನಿ ಗುರು.. ಸಂತೋಷ್: ಲೋ ಅದನ್ನು ಇಲ್ಲೆ ಮಾಡ್ಸ್ತಿದ್ನಲ್ಲೋ.. ಅಲ್ಯಾಕೋ ಹೊದೆ.. ಬಾರೋ ಇಲ್ಲೇ ಮಾಡುಸ್ತಿನಿ.. ಇಷ್ಟಕ್ಕೆ ನಿನೇನಕ್ಕೆ ಅಷ್ಟು ದೂರು ಹೊಗಿದಿಯಾ. ರಂಜಿತ್: ಅವರು ಹೊಡೆದು ಏನೊ ಮಾಡೊ ಬದ್ಲು ನಾನೇ ಯಾವುದಾದ್ರೂ ಟ್ರೈನೋ ಏನಾದ್ರು ನೋಡ್ಕೊಂಡ್ಬಿಡ್ತಿನಿ.. ಸಂತೋಷ್: ಹು ಹೊಗ್ಬುಡು.. ಈಗ ನೆಲಮಂಗಲದಲ್ಲಿದಿಯಾ? ರಂಜಿತ್: ಹು ಗುರು.. ಸಂತೋಷ್: ಹಾಗಾದ್ರೆ ಅಲ್ಲೇ ಮೆಟ್ರೋ ಸ್ಟೇಷನ್ ಇದೆ ನೋಡು. ಅಲ್ಲೇ ಮೆಟ್ರೋಗೆ ತಲೆ ಕೊಟ್ಬಿಡು. ರಂಜಿತ್: ಆಯ್ತು ಬಿಡಿ ಗುರು ಸಾಯ್ತಿನಿ. ಸಂತೋಷ್: ಹು ಕಟ್ ಮಾಡು ಫೋನು.

ಇದನ್ನೂ ಓದಿ: ಕೋಟಿ ಕೋಟಿ ಹಣ ಅಕ್ರಮ: ಬಿಎಂಟಿಸಿಯ 7 ಅಧಿಕಾರಿಗಳ ವಿರುದ್ಧ ಎಫ್ಐಆರ್, ಓರ್ವ ಆಫೀಸರ್ ಅರೆಸ್ಟ್

Audio-2

ಸಂತೋಷ್: ಅವನ*** ನಿನ್ನ ಜೊತೆ ಮಾತಾಡಬೇಕು ಅಂದ್ರೂ ಭಯ ಬೀಳಬೇಕು. ಹಾಗೆ ಮಾಡುಸ್ತಿನಿ. ಯೋಚನೆ ಮಾಡಬೇಕು ರಂಜಿತ್: ಇವಗಲೂ ನಂಗೊಂದೆ ಡೌಟು ಗುರು. ಕೀರ್ತನ್ ಹತ್ರಾನೆ ಅಷ್ಟೋಂದು ಕೋಟಿ ಆಸ್ತಿ ಇದೆ ಗುರು. ನನಗೇನುಕ್ಕೆ ಸಾಯುಸ್ಬೇಕು ಅಂತಿದಾನೆ. ಸಂತೋಷ್: ನಂಗೊತಿಲ್ಲಪ್ಪ.. ನನಗೇನು ಅದರ ಬಗ್ಗೆ ಗೊತ್ತಿಲ್ಲ. ರಂಜಿತ್: ಈಗ ಮತ್ತೆ ಅವನು ಬೇರೆಯವರಿಗೆ ಕೊಟ್ರೆ ಗುರು. ಸಂತೋಷ್: ಯಾರು? ರಂಜಿತ್: ಕೀರ್ತನ್ ಬೇರೆಯವರಿಗೆ ಸುಪಾರಿ ಕೊಟ್ರೆ ಗುರು. ಸಂತೋಷ್: ನಾನು ನಿನಗೆ ಹೇಳ್ತಾಯಿದೀನಿ.. ನಿನಗೆ ಗೊತ್ತಾಯ್ತಾ. ನಿನ್ನತ್ರ ಯಾರೇ ಮಾತನಾಡ್ಬೇಕು ಅಂದ್ರು ಯೋಚನೆ ಮಾಡಬೇಕು. ರಂಜಿತ್: ಹಾ ಗುರು. ಸಂತೋಷ್: ನನಗೆ ಈ ಡಂಗು ಡ್ರಾಮಾ ಎಲ್ಲಾ ಮಾಡ್ಬೇಡ ರಂಜು. ನಂಗೆ ತಿ* ಉರ್ದೋಗುತ್ತೆ. ದೇವ್ರಣೆ ಹೀಗೆಲ್ಲ ಮಾಡುದ್ರೆ. ರಂಜಿತ್: ಇಲ್ಲ ಗುರು ನಿಂಗು ತೊರ್ಸಿದನಲ್ಲ ಗುರು. ಸಂತೋಷ್: ಒಂದು ಕೆಲ್ಸ ಮಾಡು ನನಗೇನು ಕೊಡಬೇಡ. ಸುಮ್ನೆ ಆರಾಮಾಗಿದ್ಬಿಡು.. ರಂಜಿತ್: ಗುರು ಅವರೆಲ್ಲ ಹೇಗೊಡುದ್ರು ಅಂತ ನೀನು ನೊಡ್ದಲ್ಲ ಗುರು. ಸಂತೋಷ್: ನೀನು ಆರಾಮಾಗಿದ್ಬಿಡು. ಯಾಕ್ ತಲೆ ಕೆಡುಸ್ಕೊಂತೊಯಾ.. ರಂಜಿತ್: ಹೊಡ್ದಾಕ್ಬಿಡ್ತಾರೇ ಗುರು ನನ್ನ. ಸಂತೋಷ್: ಮಾತಾಡೊದಂದು.. ಮಾಡೊದೊಂದು.. ಅದೆಲ್ಲಾ ನನ್ ಹತ್ರ ಇರಬಾರದು. ರಂಜಿತ್: ಇಲ್ಲ ಗುರು.. ಸೋಮವಾರ ನಾನು ದುಡ್ಡು ರೆಡಿ ಮಾಡ್ಕೊಂಡು ಕೊಡ್ತಿನಿ ಗುರು. ಸಂತೋಷ: ತಗೊಂಡ್ ಬಾ ನಾನ್ ಮಾತಾಡ್ತಿನಿ ಆಮೇಲೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ