ಕೊಡಗಿನಲ್ಲಿ ಆನೆ-ಮಾನವನ ನಡುವಿನ ಸಂಘರ್ಷ: ರೈಲ್ವೆ ಬ್ಯಾರಿಕೇಡ್ ಮುರಿದ ಕಾಡಾನೆ
ಕೊಡಗಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದ್ದು, ರಾತ್ರಿ ಮಾತ್ರ ಓಡಾಡುತ್ತಿದ್ದ ಆನೆಗಳು ಈಗ ಹಗಲಿನಲ್ಲೂ ಕಾಣಿಸಿಕೊಳ್ಳುತ್ತಿವೆ. ಮಾನವ-ಆನೆ ಸಂಘರ್ಷ ಮತ್ತೆ ತೀವ್ರಗೊಂಡಿದೆ. ಕುಶಾಲನಗರದ ಅತ್ತೂರು ಗ್ರಾಮದಲ್ಲಿ ಕಾಡಾನೆಯೊಂದು ರೈಲ್ವೆ ಬ್ಯಾರಿಕೇಡ್ ಮುರಿದು ಊರಿಗೆ ನುಗ್ಗಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಈ ಬೆಳವಣಿಗೆ ವಿಡಿಯೋ ಮೂಲಕ ಹೊರಬಿದ್ದಿದೆ.
ಕೊಡಗು, ಡಿ.4: ಕೊಡಗಿನಲ್ಲಿ ಕಾಡಾನೆಗಳ ಹಾವಳಿ ಸಹಜವಾಗಿದೆ. ಕೊಡಗಿನಲ್ಲಿ ಆನೆಗಳ ಪಡೆ ರಾತ್ರಿ ಹೊತ್ತಿನಲ್ಲಿ ಓಡುತ್ತಿತ್ತು. ಆದರೆ ಇದೀಗ ಇದರ ಓಡಾಟ ಹಗಲಿನಲ್ಲೂ ಶುರುವಾಗಿದೆ. ಕೊಡಗಿನಲ್ಲಿ ಆನೆ ಮತ್ತು ಮಾನವ ನಡುವೆ ಸಂಘರ್ಷ ಸ್ವಲ್ಪ ದಿನಗಳಿಂದ ಕಡಿಮೆ ಆಗಿತ್ತು. ಇದೀಗ ಮತ್ತೆ ಶುರುವಾಗಿದೆ. ಕುಶಾಲನಗರ ತಾಲ್ಲೂಕಿನ ಅತ್ತೂರು ಗ್ರಾಮದಲ್ಲಿ ರೈಲ್ವೆ ಬ್ಯಾರಿಕೇಡ್ ಮುರಿದ ಊರಿನ ಒಳಗೆ ಬಂದಿದೆ. ಕಾಡಾನೆ ಅರಣ್ಯ ದಾಟದಂತೆ ಅಳವಡಿಸಲಾಗಿದ್ದ ರೈಲ್ವೆ ಕಂಬಿಯನ್ನೇ ಆನೆ ಮುರಿದು ಹಾಕಿದೆ. ಇದೀಗ ಈ ಬಗ್ಗೆ ವಿಡಿಯೋವೊಂದು ಇಲ್ಲಿದೆ ನೋಡಿ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ