6,6,6,6,6,6,6,6: RCB ಯಿಂದ ಹೊರಬಿದ್ದ ಬೆನ್ನಲ್ಲೇ ಲಿವಿಂಗ್ಸ್ಟೋನ್ ಅಬ್ಬರ ಶುರು
Sharjah Warriorz vs Abu Dhabi Knight Riders: ಮೊದಲು ಬ್ಯಾಟ್ ಮಾಡಿದ ಅಬುಧಾಬಿ ನೈಟ್ ರೈಡರ್ಸ್ ಪರ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಲಿವಿಂಗ್ಸ್ಟೋನ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಆಕ್ರಮಣಕಾರಿ ಬ್ಯಾಟಿಂಗ್ಗೆ ಒತ್ತು ನೀಡಿದ ಲಿವಿಂಗ್ಸ್ಟೋನ್ ಮೈದಾನದ ಮೂಲೆ ಮೂಲೆಗೂ ಸಿಕ್ಸರ್ಗಳ ಸುರಿಮಳೆಗೈದರು.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದ ಲಿಯಾಮ್ ಲಿವಿಂಗ್ಸ್ಟೋನ್ 10 ಪಂದ್ಯಗಳಿಂದ ಕೇವಲ 112 ರನ್ ಮಾತ್ರ ಕಲೆಹಾಕಿದ್ದರು. ಹೀಗಾಗಿ ಈ ಬಾರಿಯ ಐಪಿಎಲ್ಗೂ ಮುನ್ನ ಅವರನ್ನು ಆರ್ಸಿಬಿ ರಿಲೀಸ್ ಮಾಡಿದೆ. ಈ ರಿಲೀಸ್ ಬೆನ್ನಲ್ಲೇ ಲಿವಿಂಗ್ಸ್ಟೋನ್ ಸಿಡಿಲಬ್ಬರ ಶುರುವಾಗಿದೆ.
ಯುಎಇನಲ್ಲಿ ನಡೆಯುತ್ತಿರುವ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಅಬುಧಾಬಿ ನೈಟ್ ರೈಡರ್ಸ್ ಪರ ಕಣಕ್ಕಿಳಿದ ಲಿಯಾಮ್ ಲಿವಿಂಗ್ಸ್ಟೋನ್ ಅಜೇಯ 82 ರನ್ ಸಿಡಿಸಿದ್ದಾರೆ. ಅದು ಕೂಡ ಕೇವಲ 38 ಎಸೆತಗಳಲ್ಲಿ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶಾರ್ಜಾ ವಾರಿಯರ್ಸ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಅಬುಧಾಬಿ ನೈಟ್ ರೈಡರ್ಸ್ ಪರ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಲಿವಿಂಗ್ಸ್ಟೋನ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಆಕ್ರಮಣಕಾರಿ ಬ್ಯಾಟಿಂಗ್ಗೆ ಒತ್ತು ನೀಡಿದ ಲಿವಿಂಗ್ಸ್ಟೋನ್ ಮೈದಾನದ ಮೂಲೆ ಮೂಲೆಗೂ ಸಿಕ್ಸರ್ಗಳ ಸುರಿಮಳೆಗೈದರು.
ಪರಿಣಾಮ ಲಿವಿಂಗ್ಸ್ಟೋನ್ ಬ್ಯಾಟ್ನಿಂದ ಕೇವಲ 38 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 2 ಫೋರ್ ಒಳಗೊಂಡಂತೆ 82 ರನ್ಗಳು ಮೂಡಿಬಂದವು. ಈ ಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ಅಬುಧಾಬಿ ನೈಟ್ ರೈಡರ್ಸ್ ತಂಡವು 20 ಓವರ್ಗಳಲ್ಲಿ 233 ರನ್ ಕಲೆಹಾಕಿತು.
ಈ ಕಠಿಣ ಗುರಿ ಬೆನ್ನತ್ತಿದ ಶಾರ್ಜಾ ವಾರಿಯರ್ಸ್ ತಂಡದ ಪರ ಟಿಮ್ ಡೇವಿಡ್ 24 ಎಸೆತಗಳಲ್ಲಿ 7 ಸಿಕ್ಸರ್ನೊಂದಿಗೆ 60 ರನ್ ಬಾರಿಸಿದರು. ಇದಾಗ್ಯೂ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 194 ರನ್ಗಳಿಸಿ ಶಾರ್ಜಾ ವಾರಿಯರ್ಸ್ ತಂಡವು 39 ರನ್ಗಳಿಂದ ಸೋಲೊಪ್ಪಿಕೊಂಡಿದೆ.

