Kodi Mutt Seer: ಸಿದ್ದರಾಮಯ್ಯ ಸರ್ಕಾರ 5 ವರ್ಷ ಬಾಳುತ್ತಾ ಅಂತ ಕೇಳಿದ ಪ್ರಶ್ನೆಗೆ ಕೋಡಿಮಠದ ಶ್ರೀಗಳು ಒಗಟಿನಲ್ಲಿ ಉತ್ತರಿಸಿದರು!
ಭವಿಷ್ಯವಾಣಿ ಮಾಡುವ ಸ್ವಾಮೀಜಿಗಳ ಸ್ವಭಾವವೇ ಹಾಗೆ, ಕೆಲ ಮಾತುಗಳನ್ನು ಸೂಚ್ಯವಾಗಿ ಹೇಳುತ್ತಾರೆ ಕೆಲವನ್ನು ಅರ್ಥವಾಗುವ ಹಾಗೆ ಬಿಡಿಸಿ ಹೇಳುತ್ತಾರೆ.
ಹುಬ್ಬಳ್ಳಿ: ನಗರದಲ್ಲಿಂದು ಭಯಾನಕ ಭವಿಷ್ಯವಾಣಿಗಳನ್ನು ನುಡಿದ ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿಯವರು (Shivanand Shivayogi Swamiji) ಸಿದ್ದರಾಮಯ್ಯ ಸರ್ಕಾರ (Siddaramaiah Government) ಅವಧಿ ಪೂರೈಸುತ್ತಾ ಅಂತ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಒಗಟಿನಲ್ಲಿ (riddle) ಉತ್ತರ ನೀಡಿದರು. ಪ್ರಶ್ನೆ ಕೇಳಿದ ಪತ್ರಕರ್ತನನ್ನು ಉದ್ದೇಶಿಸಿ ಅವರು ನಿನ್ನ ಬಾಯಿಗೂ ಮೂಗಿಗೂ ಎಷ್ಟು ದೂರ ಅಂತ ಕೇಳಿ, ಅವೆರಡರ ನಡುವೆ ಕೇವಲ ಒಂದಿಂಚು ಮಾತ್ರ ಅಂತರವಿದ್ದರೂ ಬಾಯಲ್ಲಿರುವ ವಾಸನೆ ಮೂಗಿಗೆ ಅಡರುವುದಿಲ್ಲ, ಆದರೆ ಎಷ್ಟೋ ದೂರದಲ್ಲಿ ಮಾಡುತ್ತಿರುವ ಬೋಂಡಾದ ವಾಸನೆಯನ್ನು ಮೂಗು ಕೂಡಲೇ ಆಘ್ರಾಣಿಸುತ್ತದೆ ಎಂದರು. ಜಗತ್ತಿನ ಹೊಲಸೆಲ್ಲ ಬಾಯಲ್ಲೇ ಇರೋದು ಆದರೂ ಮೂಗಿಗೆ ಅದರ ಜಾಡು ಹತ್ತುವುದಿಲ್ಲ ಅವರು ಹೇಳಿದ ಮಾತಿನ ಅರ್ಥ ಅಲ್ಲಿದ್ದವರಿಗೆ ಅಗಲಿಲ್ಲ. ಭವಿಷ್ಯವಾಣಿ ಮಾಡುವ ಸ್ವಾಮೀಜಿಗಳ ಸ್ವಭಾವವೇ ಹಾಗೆ, ಕೆಲ ಮಾತುಗಳನ್ನು ಸೂಚ್ಯವಾಗಿ ಹೇಳುತ್ತಾರೆ ಕೆಲವನ್ನು ಅರ್ಥವಾಗುವ ಹಾಗೆ ಬಿಡಿಸಿ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ