ಕೋಗಿಲು ಲೇಔಟ್​ನಲ್ಲಿದ್ದಿದ್ದು ಬಾಂಗ್ಲಾ ಅಕ್ರಮ ವಲಸಿಗರೇ? ಮುಸ್ಲಿಂ ದಂಪತಿ ಆಧಾರ್ ಕಾರ್ಡ್ ನೋಡಿ ಬಿಜೆಪಿ ನಾಯಕರಿಗೆ ಶಾಕ್!

Updated on: Dec 31, 2025 | 1:08 PM

ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದವರು ಬಾಂಗ್ಲಾದೇಶದ ಅಕ್ರಮ ವಲಸಿಗರೇ ಎಂಬ ಪ್ರಶ್ನೆ ಈಗ ಬಲವಾಗಿದೆ. ಸ್ಥಳಕ್ಕೆ ಬಿಜೆಪಿ ನಿಯೋಗ ಬುಧವಾರ ಭೇಟಿ ನೀಡಿದ್ದು, ಮುಸ್ಲಿಂ ಮಹಿಳೆಯರ ಜತೆ ಮಾತುಕತೆ ನಡೆಸಿದೆ. ಈ ವೇಳೆ ಹಲವು ಆಘಾತಕಾರಿ ವಿಚಾರ ಬಹಿರಂಗವಾಗಿದ್ದು, ಅನುಮಾನಗಳಿಗೆ ಕಾರಣವಾಗಿದೆ.

ಬೆಂಗಳೂರು, ಡಿಸೆಂಬರ್ 31: ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿದ ಜಾಗಕ್ಕೆ ಬಿಜೆಪಿ ನಿಯೋಗ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪ್ರತಿಪಕ್ಷ ನಾಯಕ ಆರ್ ಅಶೋಕ್, ಛಲವಾದಿ ನಾರಾಯಣ ಸ್ವಾಮಿ, ಅಶ್ವಥ್ ನಾರಾಯಣ ಒಳಗೊಂಡ ಬಿಜೆಪಿ ನಿಯೋಗ ಕೋಗಿಲು ಪ್ರದೇಶದಲ್ಲಿ ವಾಸವಿದ್ದ ನಿರಾಶ್ರಿತರ ಬಳಿ ಮಾತುಕತೆ ನಡೆಸಿದಾಗ ಆಘಾತಕಾರಿ ಮಾಹಿತಿ ತಿಳಿದುಬಂದಿದೆ.

ಸ್ಥಳದಲ್ಲಿದ್ದ ಮುಸ್ಲಿಂ ಮಹಿಳೆಯರ ಜೊತೆ ಬಿಜೆಪಿ ನಿಯೋಗ ಮಾತುಕತೆ ನಡೆಸಿದಾಗ, ಅವರು ಅಸಲಿಗೆ ಸ್ಥಳೀಯ ನಿವಾಸಿಗಳೇ ಎಂಬ ಪ್ರಶ್ನೆ ಮೂಡುವಂತಾಯಿತು. ತಾವು ಸುಮಾರು 25 ವರ್ಷಗಳಿಂದ ಇಲ್ಲಿ ವಾಸವಿದ್ದೇವೆ ಎಂದು ಮುಸ್ಲಿಂ ಮಹಿಳೆ ಒಬ್ಬರು ಹೇಳಿದ್ದಾರೆ. ಆದರೆ ಅವರಿಗೆ ಕನ್ನಡ ಮಾತನಾಡಲು ಬಂದಿಲ್ಲ. ಇಷ್ಟು ವರ್ಷಗಳಿಂದ ಇಲ್ಲಿ ವಾಸವಾಗಿದ್ದರೂ ಕನ್ನಡ ಬರುವುದಿಲ್ಲವೇ ಎಂದು ಅಶೋಕ್ ಪ್ರಶ್ನಿಸಿದರು. ಎಲ್ಲಿಂದ ಬಂದವರು ಎಂಬ ಪ್ರಶ್ನೆಗೆ, ಆಂಧ್ರದಿಂದ ಬಂದವರು ಎಂದು ಮಹಿಳೆ ಉತ್ತರಿಸಿದ್ದಾರೆ. ಆದರೆ ಆಕೆಗೆ ತೆಲುಗು ಭಾಷೆ ಕೂಡ ಬಾರದೆ ಇರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಇನ್ನು ಸ್ಥಳದಲ್ಲಿದ್ದ ಮುಸ್ಲಿಂ ದಂಪತಿಯ ಆಧಾರ್ ಕಾರ್ಡ್ ನೋಡಿದ ಬಿಜೆಪಿ ನಾಯಕರು ಶಾಕ್‌ಗೆ ಒಳಗಾಗಿದ್ದಾರೆ. ಆಧಾರ್ ಕಾರ್ಡ್ ಮಾಡಿಕೊಡುವಲ್ಲಿ ಅಕ್ರಮ ನಡೆದಿದೆಯಾ ಎಂಬ ಅನುಮಾನವೇ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ