ಆಟೋ-ಕೆಎಸ್‌ಆರ್‌ಟಿಸಿ ಬಸ್‌ ನಡುವೆ ಭೀಕರ ಅಪಘಾತ; ಬೆಚ್ಚಿ ಬೀಳಿಸುವಂತಿದೆ ಸಿಸಿಟಿವಿ ದೃಶ್ಯ

Updated on: Sep 16, 2025 | 5:29 PM

ಚಲಿಸುತ್ತಿರುವ ಆಟೋಗೆ ಹಿಂಬದಿಯಿಂದ ಬಂದು ಕೆಎಸ್‌ಆರ್‌ಟಿಸಿ ಬಸ್ಸೊಂದು ಡಿಕ್ಕಿ ಹೊಡೆದ ಆಘಾಕಾರಿ ಘಟನೆ ಕೋಲಾರದ ಕೆಜಿಎಫ್‌ ತಾಲೂಕಿನ ಮಲೆಯಾಳಿ ಲೈನ್‌ ಬಳಿ ನಡೆದಿದೆ. ಬಸ್‌ ಡಿಕ್ಕಿ ಹೊಡೆದ ಪರಿಣಾಮ ಆಟೋ ಪಲ್ಟಿಯಾಗಿದ್ದು, ಈ ಭೀಕರ ಅಪಘಾತದ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕೋಲಾರ, ಸೆಪ್ಟೆಂಬರ್‌ 16: ವೇಗವಾಗಿ ಬಂದಂತಹ  ಕೆಎಸ್‌ಆರ್‌ಟಿಸಿ ಬಸ್ ಮುಂಬದಿಯಲ್ಲಿದ್ದ ಆಟೋಗೆ ಡಿಕ್ಕಿ ಹೊಡೆದಂತಹ (terrible accident) ಆಘಾತಕಾರಿ ಘಟನೆ ಕೋಲಾರದ ಕೆಜಿಎಫ್‌ ತಾಲೂಕಿನ ಮಲೆಯಾಳಿ ಲೈನ್‌ ಬಳಿ ನಡೆದಿದೆ. ಬಸ್‌ ಗುದ್ದಿದ ಏಟಿಗೆ ಆಟೋ ಪಲ್ಟಿಯಾಗಿದ್ದು, ಆಟೋ ಡ್ರೈವರ್‌ ಮತ್ತು ಆಟೋದಲ್ಲಿದ್ದ ಓರ್ವ ಪ್ರಯಾಣಿಕನಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಈ ಭೀಕರ ಅಪಘಾತದ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾದ್ದು, ಅಪಘಾತದ ದೃಶ್ಯ ಬೆಚ್ಚಿ ಬೀಳಿಸುವಂತಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ