AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ಟಿಕೆಟ್ ದರ ಇಳಿಕೆಗೆ ಹೊಂಬಾಳೆ ಆಕ್ಷೇಪ, ಖಂಡಿಸಿದ ಫಿಲಂ ಚೇಂಬರ್

ಸಿನಿಮಾ ಟಿಕೆಟ್ ದರ ಇಳಿಕೆಗೆ ಹೊಂಬಾಳೆ ಆಕ್ಷೇಪ, ಖಂಡಿಸಿದ ಫಿಲಂ ಚೇಂಬರ್

ಮಂಜುನಾಥ ಸಿ.
|

Updated on: Sep 16, 2025 | 5:50 PM

Share

Movie Ticket Price: ಸಿನಿಮಾ ಟಿಕೆಟ್ ದರ ಇಳಿಕೆಗೆ ಸಂಬಂಧಿಸಿದ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್​​ ಮೊರೆ ಹೋಗಿದ್ದು, ಇಂದು ವಾದ-ಪ್ರತಿವಾದ ಸಹ ನಡೆದಿದೆ. ಈ ಬಗ್ಗೆ ಫಿಲಂ ಚೇಂಬರ್​​​ನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ್ದ ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು ಅವರು ನಿರ್ಮಾಣ ಸಂಸ್ಥೆಗಳ ಈ ನಡೆಯನ್ನು ಖಂಡಿಸಿದ್ದಾರೆ. ಹೊಂಬಾಳೆ ಫಿಲಮ್ಸ್​ಗೆ ಕೆಲ ಪ್ರಶ್ನೆಗಳನ್ನು ಸಹ ಕೇಳಿದ್ದಾರೆ.

ಫಿಲಂ ಚೇಂಬರ್ (Film Chamber) ಮನವಿ ಮೇರೆಗೆ ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಏಕರೂಪ ಸಿನಿಮಾ ಟಿಕೆಟ್ ದರಕ್ಕೆ ಆದೇಶ ಹೊರಡಿಸಿ, ರಾಜ್ಯದಾದ್ಯಂತ ಸಿನಿಮಾ ಟಿಕೆಟ್ ದರಗಳನ್ನು ತಗ್ಗಿಸಿತ್ತು. ಆದರೆ ಇದೀಗ ಮಲ್ಟಿಪ್ಲೆಕ್ಸ್​ಗಳು, ಹೊಂಬಾಳೆ ಫಿಲಮ್ಸ್ ಮತ್ತು ಇನ್ನೂ ಕೆಲ ನಿರ್ಮಾಣ ಸಂಸ್ಥೆಗಳು ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್​​ ಮೊರೆ ಹೋಗಿದ್ದು, ಇಂದು ವಾದ-ಪ್ರತಿವಾದ ಸಹ ನಡೆದಿದೆ. ಈ ಬಗ್ಗೆ ಫಿಲಂ ಚೇಂಬರ್​​​ನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ್ದ ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು ಅವರು ನಿರ್ಮಾಣ ಸಂಸ್ಥೆಗಳ ಈ ನಡೆಯನ್ನು ಖಂಡಿಸಿದ್ದಾರೆ. ಹೊಂಬಾಳೆ ಫಿಲಮ್ಸ್​ಗೆ ಕೆಲ ಪ್ರಶ್ನೆಗಳನ್ನು ಸಹ ಕೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ