ಮನೆಗೆ ನುಗ್ಗಿ ಕೊಲ್ಕತ್ತಾದ ಕಸ್ಟಮ್ಸ್ ಅಧಿಕಾರಿ ದಂಪತಿಗೆ ಮಗುವಿನೆದುರೇ ಹಲ್ಲೆ

Updated on: Oct 27, 2025 | 9:24 PM

ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ರಸ್ತೆ ಹಿಂಸಾಚಾರದ ನಂತರ ಸೋನಾರ್‌ಪುರದ ಫ್ಲಾಟ್‌ಗೆ ನುಗ್ಗಿದ ಆಟೋ-ರಿಕ್ಷಾ ಚಾಲಕನ ನೇತೃತ್ವದಲ್ಲಿ ಗುಂಪೊಂದು ಕಸ್ಟಮ್ಸ್ ಇನ್ಸ್‌ಪೆಕ್ಟರ್ ಮತ್ತು ಪತ್ನಿ ಮೇಲೆ ಹಲ್ಲೆ ಮಾಡಿದೆ. ಇದರ ವಿಡಿಯೋ ವೈರಲ್ ಆಗಿದೆ. ಆಟೋ ಚಾಲಕನ ನೇತೃತ್ವದಲ್ಲಿ 50 ಜನರ ಗುಂಪೊಂದು ಗುರುವಾರ ರಾತ್ರಿ ಸೋನಾರ್‌ಪುರದ ಕಸ್ಟಮ್ಸ್ ಅಧಿಕಾರಿ ಪ್ರದೀಪ್ ಕುಮಾರ್ ಅವರ ನಾಲ್ಕನೇ ಮಹಡಿಯ ಫ್ಲಾಟ್‌ಗೆ ನುಗ್ಗಿ ಅವರ 4 ವರ್ಷದ ಮಗಳ ಮುಂದೆ ಅವರ ಮತ್ತು ಅವರ ಪತ್ನಿಯ ಮೇಲೆ ಪದೇ ಪದೇ ಹಲ್ಲೆ ನಡೆಸಿದೆ.

ಕೊಲ್ಕತ್ತಾ, ಅಕ್ಟೋಬರ್ 27: ರಸ್ತೆಯಲ್ಲಿ ನಡೆದ ಸಣ್ಣ ವಾಗ್ವಾದದ ನಂತರ ಆಟೋ ಚಾಲಕನ ನೇತೃತ್ವದಲ್ಲಿ 50 ಜನರ ಗುಂಪೊಂದು ಕಸ್ಟಮ್ಸ್ ಅಧಿಕಾರಿ ಮತ್ತು ಅವರ ಪತ್ನಿ ವಾಸವಾಗಿರುವ ಫ್ಲಾಟ್​ಗೆ ನುಗ್ಗಿ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದೆ. ಅವರ 4 ವರ್ಷದ ಮಗಳ ಮುಂದೆಯೇ ಮುಖದಲ್ಲಿ ರಕ್ತ ಬರುವ ರೀತಿ ಹೊಡೆದು ಹಲ್ಲೆ ಮಾಡಲಾಗಿದೆ. ಕಾಳಿ ಪೂಜೆ ನಿಮಜ್ಜನ ಕರ್ತವ್ಯದಲ್ಲಿದ್ದ ಪೊಲೀಸರು ತಡವಾಗಿ ಸ್ಥಳಕ್ಕೆ ಆಗಮಿಸಿದ್ದಾರೆ. ಹೆಚ್ಚಿನ ದಾಳಿಕೋರರು ಸ್ಥಳದಿಂದ ಪರಾರಿಯಾದರು. ಬಂಧಿತ ವ್ಯಕ್ತಿಗಳಿಗೆ ಕೂಡಲೆ ಜಾಮೀನು ನೀಡಲಾಯಿತು.

ಗುರುವಾರ ಆಟೋ ಚಾಲಕನ ನೇತೃತ್ವದಲ್ಲಿ ಕನಿಷ್ಠ 50 ಜನರ ಗುಂಪೊಂದು ಸೋನಾರ್‌ಪುರದ ಕಾಂಡೋಮಿನಿಯಂ ಒಂದಕ್ಕೆ ನುಗ್ಗಿ, ಕಸ್ಟಮ್ಸ್ ಅಧಿಕಾರಿ ಪ್ರದೀಪ್ ಕುಮಾರ್ ಅವರ ನಾಲ್ಕನೇ ಮಹಡಿಯ ಫ್ಲಾಟ್‌ಗೆ ಬಲವಂತವಾಗಿ ನುಗ್ಗಿ, ಅವರ 4 ವರ್ಷದ ಮಗಳ ಮುಂದೆಯೇ ಅವರ ಮತ್ತು ಅವರ ಪತ್ನಿಯ ಮೇಲೆ ಹಲ್ಲೆ ನಡೆಸಿತು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ