ಕೊಪ್ಪಳ ಗವಿಸಿದ್ದಪ್ಪ ಕೊಲೆಗೆ ಮತ್ತೊಂದು ಟ್ವಿಸ್ಟ್: ಸ್ಫೋಟಕ ಅಂಶ ಬಿಚ್ಚಿಟ್ಟ ತಾಯಿ!

Edited By: ವಿವೇಕ ಬಿರಾದಾರ

Updated on: Aug 18, 2025 | 10:01 PM

ಗವಿಸಿದ್ದಪ್ಪ ನಾಯಕನ ಕೊಲೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಪ್ರೀತಿ ವಿಚಾರದಿಂದ ಉಂಟಾದ ಕೊಲೆಯಲ್ಲಿ, ಮೃತ ಗವಿಸಿದ್ದಪ್ಪ ಸೇರಿದಂತೆ ಅವರ ತಂದೆ, ತಾಯಿ ಮತ್ತು ಸಹೋದರಿ ವಿರುದ್ಧ ಕೊಪ್ಪಳ ಪೊಲೀಸರು ಪೋಕ್ಸೋ ಕೇಸ್ ದಾಖಲಾಗಿದೆ. ಈ ನಿರ್ಧಾರಕ್ಕೆ ಗವಿಸಿದ್ದಪ್ಪನ ತಾಯಿ ಆಕ್ಷೇಪಿಸಿದ್ದು, ರಾಜಿ ಪಂಚಾಯಿತಿ ನಂತರವೂ ಈ ಕೇಸ್ ದಾಖಲಿಸಿದ್ದಕ್ಕೆ ಅವರು ಪ್ರಶ್ನಿಸಿದ್ದಾರೆ.

ಕೊಪ್ಪಳ, ಆಗಸ್ಟ್​ 18: ಪ್ರೀತಿ ವಿಚಾರವಾಗಿ ನಡೆದ ಗವಿಸಿದ್ದಪ್ಪ ನಾಯಕ ಕೊಲೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಕೊಲೆಯಾದ ಗವಿಸಿದ್ದಪ್ಪ ಸೇರಿದಂತೆ ನಾಲ್ವರ ವಿರುದ್ಧ ಕೊಪ್ಪಳ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ. ಹತ್ಯೆಯಾದ ಗವಿಸಿದ್ದಪ್ಪ, ಗವಿಸಿದ್ದಪ್ಪ ತಂದೆ ನಿಂಗಜ್ಜ ನಾಯಕ, ತಾಯಿ ದೇವಮ್ಮ, ಸಹೋದರಿ ಅನ್ನಪೂರ್ಣ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ತಮ್ಮ ಕುಟುಂಬದ ವಿರುದ್ಧ ಫೋಕ್ಸೋ ಕೇಸ್​ ದಾಖಲಾಗಿರುವ ಬಗ್ಗೆ ಗವಿಸಿದ್ದಪ್ಪ ತಾಯಿ ದೇವಮ್ಮ ಮಾತನಾಡಿ, ರಾಜಿ ಪಂಚಾಯಿತಿ ಬಳಿಕವೂ ಕೇಸ್​ ದಾಖಲಿಸಿದ್ದು ಏಕೆ? ನನ್ನ ಮತ್ತು ನನ್ನ ಮಗನ ಮೇಲೆ ಕೇಸ್​ ಹಾಕಲಿ, ನನ್ನ ಪತಿ ಮತ್ತು ಮಗಳ ಮೇಲೆ ಕೇಸ್​ ದಾಖಲಿಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.

Follow Us
Shivakumar Pattar

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More