ಕೊಪ್ಪಳ: ಆತ್ಮಾವಲೋಕನ ಸಭೆಯಲ್ಲಿ ಕಣ್ಣೀರಿಡುತ್ತ ಶಪಥ ಮಾಡಿದ ಮಂಜುಳಾ ಕರಡಿ

|

Updated on: May 17, 2023 | 8:01 AM

ಕೊಪ್ಪಳ ಕ್ಷೇತ್ರದ ಹೀನಾಯ ಸೋಲು ಬಿಜೆಪಿಗೆ ಇನ್ನಿಲ್ಲದಂತೆ ಕಾಡ್ತಿದೆ. ಯಾಕೆಂದ್ರೆ ಹೈಕಮಾಂಡ್ ಜೊತೆ ಪಟ್ಟು ಹಿಡಿದು ತಮ್ಮ ಸೊಸೆ ಮಂಜುಳಾ ಕರಡಿಗೆ ಟಿಕೆಟ್ ಕೊಡಿಸಿದ್ದ ಸಂಸದ ಸಂಗಣ್ಣ ಕರಡಿ ಏಲೆಕ್ಷನ್ ಗೆಲ್ಲಿಸೋಕೆ ಫೇಲ್ ಆಗಿದ್ದಾರೆ.

ಕೊಪ್ಪಳ: ರಾಜ್ಯ ವಿಧಾನಸಭೆ ಚುನಾವಣೆಯ ರಿಸಲ್ಟ್ ಬಂದಾಗಿದೆ.‌ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರೋ ಬಿಜೆಪಿ ತನ್ನ ಸೋಲಿಗೆ ನಾನಾ ಕಾರಣ ಹುಡುಕುತ್ತಿದೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳದಲ್ಲಿಯೂ ಬಿಜೆಪಿ ಐದು ಕ್ಷೇತ್ರಗಳ‌ ಪೈಕಿ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಪ್ರಯಾಸದ ಗೆಲುವು ಸಾಧಿಸಿದೆ. ಹೀಗಾಗೇ ಜಿಲ್ಲೆಯ ಬಿಜೆಪಿಯಲ್ಲಿನ ಒಂದು ಕಡೆಯಾದ್ರೆ, ಇತ್ತ‌ ಕೊಪ್ಪಳ ಕ್ಷೇತ್ರದ ಹೀನಾಯ ಸೋಲು ಬಿಜೆಪಿಗೆ ಇನ್ನಿಲ್ಲದಂತೆ ಕಾಡ್ತಿದೆ. ಯಾಕೆಂದ್ರೆ ಹೈಕಮಾಂಡ್ ಜೊತೆ ಪಟ್ಟು ಹಿಡಿದು ತಮ್ಮ ಸೊಸೆ ಮಂಜುಳಾ ಕರಡಿಗೆ ಟಿಕೆಟ್ ಕೊಡಿಸಿದ್ದ ಸಂಸದ ಸಂಗಣ್ಣ ಕರಡಿ ಏಲೆಕ್ಷನ್ ಗೆಲ್ಲಿಸೋಕೆ ಫೇಲ್ ಆಗಿದ್ದಾರೆ. ಅದೇ ವಿಷಯ ಸದ್ಯ ಸಂಸದ ಸಂಗಣ್ಣ ಕರಡಿಯವರಿಗೆ ಸುತ್ತಿಕೊಂಡಿದೆ.

ಯಾಕೇಂದ್ರೆ ಈ ಭಾರಿ ತಾವೇ ಖುದ್ದು ಅಸೆಂಬ್ಲಿ ಅಕಾಡಕ್ಕಿಳಿಯಬೇಕೆಂದು ಸಜ್ಜಾಗಿದ್ದರು. ಆದ್ರೆ ಹೈಕಮಾಂಡ್ ಮಾತ್ರ‌ ಯಾವುದೇ ಕಾರಣಕ್ಕೂ ಒಪ್ಪಿರಲಿಲ್ಲ.ಕೊನೆಗೆ ಬಿಜೆಪಿ ಇನ್ನೊರ್ವ ಮುಖಂಡ ಸಿ.ವಿ ಚಂದ್ರಶೇಖರ್​ಗೆ ಟಿಕೆಟ್ ನೀಡಬೇಕೆಂದುಕೊಂಡಿತ್ತು. ಆದ್ರೆ ರಾಜೀನಾಮೆ ಬೇದರಿಕಯೊಡ್ಡಿ ತಮ್ಮ ಸೊಸೆಗೆ ಟಿಕೆಟ್ ಕೊಡಿಸಿದ್ದರು. ಅದೇ ಕಾರಣವೇ ಅವರ ಸೋಲಿಗೆ ಮುಳುವಾಗಿದೆ ಎನ್ನಲಾಗುತ್ತಿದೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಇವರ ನಿರ್ಧಾರಕ್ಕೆ ಬೇಸತ್ತಿದ್ದ ಬಿಜೆಪಿ ನಾಯಕರೇ ಮತ ಚಲಾಯಿಸಿಲ್ಲ ಎನ್ನೋ ಅನುಮಾನ ಸೃಷ್ಟಿಯಾಗಿದೆ. ಹೀಗಾಗೇ ಕಣ್ಣೀರಾಕುತ್ತಲೇ ನಾನು ಅಭ್ಯರ್ಥಿ ಆಗಬೇಕು ಎಂದುಕೊಂಡಿರಲಿಲ್ಲ.ಶೋಭಾ ಕರಂದ್ಲಾಜೆ ಅವರೇ ಮಹಿಳಾ ಖೋಟಾದಡಿ ಟಿಕೆಟ್ ಸಿಕ್ಕಿದೆ ರೆಡಿಯಾಗು ಎಂದಿದ್ದರು. ಯಾಕೆಂದ್ರೆ ಒಂದೊಮ್ಮೆ ಟಿಕೆಟ್ ಸಿಗೊದಿಲ್ಲ ಎನ್ನೋದನ್ನ ಅರಿತಿದ್ದ ಸಂಗಣ್ಣ ಸ್ವತಃ ಸಂಸದ ಹುದ್ದೆಗೆ ರಾಜೀನಾಮೆ‌ ನೀಡಿ ಜೆಡಿಎಸ್ ಹೋಗೋ ಚಿಂತನೆ ನಡೆಸಿದ್ದರು. ಅದನ್ನೆ ಬಂಡವಾಳ‌ ಮಾಡಿಕೊಂಡೇ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಅದೇ ಕಾರಣವೇ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿತ್ತು.‌

ಕಳೆದ ಭಾರಿಯೂ ತಮ್ಮ ಪುತ್ರನಿಗೆ ಟಿಕಟ್ ಕೊಡಿಸಿದ್ದ ಸಂಗಣ್ಣ ಈ ಭಾರಿ ಸೊಸೆ ಟಿಕಟ್ ಕೊಡಿಸಿದ್ದರು.ಕುಟುಂಬ ರಾಜಕಾರಣ ಬೇಸತ್ತ ಸಿ.ವಿ.ಚಂದ್ರಶೇಖರ್ ಬಿಜೆಪಿಗೆ ಗುಡ್ ಬೈ ಹೇಳಿ ಜೆಡಿಎಸ್ ನಿಂದ ಕಣಕ್ಕಿಳಿದಿದ್ದರು. ಅಲ್ಲದೇ ಸುಮಾರು 40 ಸಾವಿರ ಮತ ತೆಗೆದುಕೊಂಡು ಬಿಜೆಪಿ ಸೋಲಿಗೆ ಕಾರಣವಾಗಿದ್ದಾರೆ. ಅದರಲ್ಲಿ ಹೆಚ್ಚಿನ ಮತಗಳು ಬಿಜೆಪಿ ಮತಗಳೇ ಜೆಡಿಎಸ್ ಕಡೆಗೆ ವಾಲಿದ್ದವು. ಅಲ್ಲದೇ ಖುದ್ದು ಬಿಜೆಪಿ ಕಾರ್ಯಕರ್ತರೇ ಇಂದಿನ ಸಭೆಯಲ್ಲಿ ಪಕ್ಷ ತೆಗೆದುಕೊಂಡ ಕೆಲ ನಿರ್ಧಾರಗಳ ವಿರುದ್ದ ಕಿಡಿಕಾರಿದ್ರು.ಬಿಎಸ್ ವೈ, ಶೆಟ್ಟರ್, ಸವದಿಯಂತ ನಾಯಕರನ್ನ ಕಡೆಗಣಿಸದ್ದೆ ಹೀನಾಯ ಸೋಲಿಗೆ ಕಾರಣ, ಮತ್ತು ಸ್ಥಳೀಯ ಮಟ್ಟದಲ್ಲಿಯೂ ಆ ಕೊರತೆ ಎದುರಾಯಿತು ಎನ್ನಲಾಗಿದೆ.