ಕೊಪ್ಪಳದಲ್ಲಿ ವಾಯು ಮತ್ತು ಜಲ ಕಾಯ್ದೆ ಉಲ್ಲಂಘಿಸಿದ 8 ಕಾರ್ಖಾನೆಗಳು ಬಂದ್

Edited By:

Updated on: Nov 19, 2026 | 6:39 AM

ಬೆನ್ನಲ್ಲೇ ಕೊಪ್ಪಳ ತಾಲೂಕಿನಲ್ಲಿ ವಾಯು ಮತ್ತು ಜಲ ಕಾಯ್ದೆಗಳನ್ನು ಉಲ್ಲಂಘಿಸಿದ್ದ 8 ಕಾರ್ಖಾನೆಗಳನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮುಚ್ಚುವಂತೆ ಆದೇಶಿಸಿದೆ. ಐಎಲ್‌ಸಿ ಐರನ್, ಪಿಬಿಎಸ್ ಸ್ಟೀಲ್ ಸೇರಿದಂತೆ ಹಲವು ಕಾರ್ಖಾನೆಗಳು ರೈತರಿಗೆ ಹೊಗೆಯ ಸಮಸ್ಯೆಯನ್ನು ಉಂಟುಮಾಡುತ್ತಿದ್ದವು. ಇದು ‘ಟಿವಿ9’ ವರದಿಯ ನೇರ ಫಲಶ್ರುತಿಯಾಗಿದೆ.

ಕೊಪ್ಪಳ, ನವೆಂಬರ್ 19: ಕೊಪ್ಪಳ ತಾಲೂಕಿನಲ್ಲಿ ವಾಯು ಕಾಯ್ದೆ ಹಾಗೂ ಜಲ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ್ದ ಎಂಟು ಕಾರ್ಖಾನೆಗಳನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದಂತೆ ಬಂದ್ ಮಾಡಲಾಗಿದೆ. ಪರಿಸರ ನಿಯಮಗಳನ್ನು ಗಾಳಿಗೆ ತೂರಿ ಮಾಲಿನ್ಯ ಉಂಟುಮಾಡುತ್ತಿದ್ದ ಈ ಕಾರ್ಖಾನೆಗಳ ವಿರುದ್ಧ ರೈತರು ನಿರಂತರವಾಗಿ ದೂರು ನೀಡಿದ್ದರು. ‘ಟಿವಿ9’ ಈ ಬಗ್ಗೆ ವಿಸ್ತೃತ ವರ ಪ್ರಸಾರ ಮಾಡಿದ ಬೆನ್ನಲ್ಲೇ ಮಂಡಳಿ ಕ್ರಮ ಕೈಗೊಂಡಿದೆ.

ಕಾರ್ಖಾನೆಗಳಿಂದ ಹೊರಬರುತ್ತಿದ್ದ ಹೊಗೆಯಿಂದ ಸುತ್ತಮುತ್ತಲಿನ ರೈತರು ರೋಸಿ ಹೋಗಿದ್ದರು. ಪರಿಸರದ ಮೇಲೆ ಮತ್ತು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದ ಈ ನಿಯಮ ಉಲ್ಲಂಘನೆಗಳ ಬಗ್ಗೆ ‘ಟಿವಿ9’ ಬೆಳಕು ಚೆಲ್ಲಿತ್ತು. ಬಂದ್ ಮಾಡಲಾಗಿರುವ ಕಾರ್ಖಾನೆಗಳಲ್ಲಿ ಐಎಲ್‌ಸಿ ಐರನ್ ಪ್ರೈವೇಟ್ ಲಿಮಿಟೆಡ್, ಪಿಬಿಎಸ್ ಸ್ಟೀಲ್ ಯೂನಿಟ್, ಎಎಸ್‌ಕೆ ಸ್ಟೀಲ್ ಫ್ಯಾಕ್ಟರಿ, ತನುಷ್ ಇಸ್ಪಾತ್ ಪ್ರೈವೇಟ್ ಲಿಮಿಟೆಡ್ ಯೂನಿಟ್ 1 ಮತ್ತು ಯೂನಿಟ್ 2, ಬಾಬಾ ಅಖಿಲಾ, ಭದ್ರಾ ಶ್ರೀ ಸ್ಟೀಲ್ ಮತ್ತು ಧ್ರುವ ದೇಶಾ ಮೆಟಾ ಸ್ಟೀಲ್ ಕಾರ್ಖಾನೆಗಳು ಸೇರಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಶಿವಕುಮಾರ್ ಪತ್ತಾರ್

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More