Assembly Polls: ಯೋಗ್ಯ ಅಭ್ಯರ್ಥಿಯನ್ನು ಹುಡುಕುವ ಕೆಲಸ ಶುರುಮಾಡಿದ ಕೆಪಿಸಿಸಿ, ದೇವನಹಳ್ಳಿಯಲ್ಲಿ ಸೇರಿದ ನಾಯಕರು

|

Updated on: Feb 02, 2023 | 3:11 PM

ಟಿಕೆಟ್ ಸಿಗದವನು ಬಂಡಾಯವೇಳುವ ಸಾಧ್ಯತೆಯೂ ಇರುತ್ತದೆ, ಬೇರೆ ಪಕ್ಷಕ್ಕೆ ಪಲಾಯನ ಮಾಡುವುದಂತೂ ಈಗ ಸಾಮಾನ್ಯವಾಗಿಬಿಟ್ಟಿದೆ.

ಬೆಂಗಳೂರು ಗ್ರಾಮಾಂತರ:  ಪಕ್ಷಗಳು ರಾಷ್ಟ್ರೀಯವಾಗಿರಲಿ (National) ಅಥವಾ ಪ್ರಾದೇಶಿಕ (regional)-ಚುನಾವಣೆ ಸಮಯದಲ್ಲಿ ಟಿಕೆಟ್ ಹಂಚುವುದು ಬಹಳ ಕಷ್ಟ ಮತ್ತು ಗೋಜಿನ ಕೆಲಸ ಮಾರಾಯ್ರೇ. ಯಾಕೆಂದರೆ, ಪ್ರತಿಯೊಂದು ಕ್ಷೇತ್ರಕ್ಕೆ 2-3 ಅಥವಾ ಅದಕ್ಕಿಂತ ಜಾಸ್ತಿ ಆಕಾಂಕ್ಷಿಗಳಿರುತ್ತಾರೆ. ಎಲ್ಲರನ್ನೂ ತೃಪ್ತಿಪಡಿಸುವುದು ಸಾಧ್ಯವಿಲ್ಲ. ಟಿಕೆಟ್ ಸಿಗದವನು ಬಂಡಾಯವೇಳುವ ಸಾಧ್ಯತೆಯೂ ಇರುತ್ತದೆ, ಬೇರೆ ಪಕ್ಷಕ್ಕೆ ಪಲಾಯನ ಮಾಡುವುದಂತೂ ಈಗ ಸಾಮಾನ್ಯವಾಗಿಬಿಟ್ಟಿದೆ. ರಾಜ್ಯ ಕಾಂಗ್ರೆಸ್ ಪಕ್ಷವು; ಎಐಸಿಸಿ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ (Randeep Singh Surjewala), ಹಿರಿಯ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಡಿಕೆ ಶಿವಕುಮಾರ್ ಮತ್ತು ಇತರ ಹಲವಾರು ಪ್ರಮುಖ ನಾಯಕರ ನೇತೃತ್ವದಲ್ಲಿ ಟಿಕೆಟ್ ನೀಡಲು ಯೋಗ್ಯ ಅಭ್ಯರ್ಥಿಗಳನ್ನು ಗುರುತಿಸುವ ಕಸರತ್ತನ್ನು ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಆರಂಭಿಸಿತು.

ಮತ್ತಷ್ಟು ವಿಡಿಯೋ ಸುದ್ದಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Feb 02, 2023 03:10 PM