ತನ್ನೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ತೆಲಂಗಾಣ ಸಿಎಮ್ ಕೆಸಿಅರ್ ಗೆ ಗಿಫ್ಟ್ ಮಾಡಲು ಶೂಸ್ ಖರೀದಿಸಿದ ವೈಎಸ್ ಆರ್ ಶರ್ಮಿಳಾ
ಒಂದು ಪಕ್ಷ ಶೂಗಳು ಅವರ ಪಾದದ ಅಳತೆಗೆ ಸರಿಹೊಂದದಿದ್ದರೆ ಬಿಲ್ ಮತ್ತು ರಸೀತಿ ಕೂಡ ಕಳಿಸುತ್ತಿದ್ದೇವೆ, ಶೋ ರೂಮಿಗೆ ಹೋಗಿ ವಿನಿಮಯ ಮಾಡಿಕೊಳ್ಳುವಂತೆ ಶರ್ಮಿಳಾ ಹೇಳಿದರು.
ತೆಲಂಗಾಣ ರಾಜ್ಯ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (K Chandrashekar Rao) ಅವರು ರಾಷ್ಟ್ರಮಟ್ಟದಲ್ಲಿ ಮಿಂಚಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರೆ ಅವರ ರಾಜ್ಯದಲ್ಲೇ ಸರ್ಕಾರದ ವೈಫಲ್ಯಗಳ ವಿರುದ್ಧ ವೈಎಸ್ ಆರ್ ತೆಲಂಗಾಣ ಪಕ್ಷದ (YSRTP) ಸಂಸ್ಥಾಪಕಿ ವೈಎಸ್ ಆರ್ ಶರ್ಮಿಳಾ (YSR Sharmila) ಅವರು ಪಾದಯಾತ್ರೆಯ ಮೂಲಕ ಆಂದೋಲನ ನಡೆಸಿದ್ದಾರೆ. ಮುಖ್ಯಮಂತ್ರಿಯವರು ತಲೆಗೆ ಟೋಪಿ ಧರಿಸಿ ವಿಮಾನಗಳಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹಾರಿದರೆ ಜನಸಾಮಾನ್ಯರ ಕಷ್ಟಗಳು ಅವರಿಗೆ ಅರ್ಥವಾಗಲಾರವು, ಅದಕ್ಕಾಗಿ ಅವರು ನಮ್ಮ ಜೊತೆ ಕನಿಷ್ಟ ಒಂದು ದಿನ ಪಾದಯಾತ್ರೆಯಲ್ಲಿ ಭಾಗಿಯಾಗಬೇಕಾಗುತ್ತದೆ. ನಮ್ಮೊಂದಿಗೆ ಹೆಜ್ಜೆ ಹಾಕುವಾಗ ಅವರಿಗೆ ತೊಂದರೆಯಾಗದಿರಲು ಬೂಟುಗಳನ್ನು ಗಿಫ್ಟ್ ಮಾಡುತ್ತಿದ್ದೇವೆ ಅಂತ ಹೇಳಿದ ಅವರು ಶೂಗಳನ್ನು ಬಿಚ್ಚಿ ತೋರಿಸಿದರು. ಒಂದು ಪಕ್ಷ ಶೂಗಳು ಅವರ ಪಾದದ ಅಳತೆಗೆ ಸರಿಹೊಂದದಿದ್ದರೆ ಬಿಲ್ ಮತ್ತು ರಸೀತಿ ಕೂಡ ಕಳಿಸುತ್ತಿದ್ದೇವೆ, ಶೋ ರೂಮಿಗೆ ಹೋಗಿ ವಿನಿಮಯ ಮಾಡಿಕೊಳ್ಳುವಂತೆ ಶರ್ಮಿಳಾ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ