ಯತೀಂದ್ರ-ಸಿದ್ದರಾಮಯ್ಯ ಸಂಭಾಷಣೆ; ಮುಖ್ಯಮಂತ್ರಿ ಹೇಳಿಕೆ ಮತ್ತು ಎಂ ಲಕ್ಷ್ಮಣ್ ನೀಡುವ ಸ್ಪಷ್ಟನೆ ತಾಳೆಯಾಗುತ್ತವೆ!

|

Updated on: Nov 16, 2023 | 6:14 PM

ಸಿದ್ದರಾಮಯ್ಯ ಶಾಲೆಗಳ ದುರಸ್ತಿಗಾಗಿ ಸಿಎಸ್ ಆರ್ ಫಂಡ್ ಬಗ್ಗೆ ಹೇಳಿದ್ದರು. ಲಕ್ಷ್ಮಣ್ ಆ 5 ಶಾಲೆಗಳು ಯಾವವು ಅನ್ನೋದನ್ನು ಓದಿ ಹೇಳಿದರಲ್ಲದೆ, ಮಹಾದೇವು ಹೆಸರಿನ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಮತ್ತೊಂದು ಲಿಸ್ಟ್ ತೆಗೆದುಕೊಂಡ ಸಿಎಂ ಬಳಿ ಹೋದಾಗ, ಯತೀಂದ್ರ ತಾನು ಕಳಿಸಿದ ಪಟ್ಟಿಯನ್ನೇ ಪರಿಗಣಿಸುವಂತೆ ಮುಖ್ಯಮಂತ್ರಿಗಳಿಗೆ ಹೇಳುತ್ತಾರೆ ಎಂದು ಹೇಳಿದರು.

ಮೈಸೂರು: ಸಿದ್ದರಾಮಯ್ಯ, ಯತೀಂದ್ರ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅಥವಾ ಕಾಂಗ್ರೆಸ್ ಪಕ್ಷದ ಯಾವುದಾದರೂ ನಾಯಕನ ವಿರುದ್ಧ ಆರೋಪ ಕೇಳಿಬಂದಾಗ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ (M Laxman) ಕೂಡಲೇ ಅವರ ನೆರವಿಗೆ ಧಾವಿಸಿ ಒಂದು ಪತ್ರಿಕಾ ಗೋಷ್ಟಿ ನಡೆಸುತ್ತಾರೆ ಮತ್ತು ಅರೋಪಗಳನ್ನು ಸುಳ್ಳು ಅಂತ ಪ್ರೂವ್ ಮಾಡುವ ಪ್ರಯತ್ನ ಮಾಡುತ್ತಾರೆ. ಸಿದ್ದರಾಮಯ್ಯ (Siddaramaiah) ಮತ್ತು ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ನಡುವೆ ನಡೆದ ಸಂಭಾಷಣೆಯ ಒಂದು ವಿಡಿಯೋ ವೈರಲ್ ಆಗಿದ್ದು ಅದಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕರು ಹಲವಾರು ಆರೋಪಗಳನ್ನು ಮಾಡುತ್ತ್ತಿದ್ದಾರೆ. ಅವರಿಬ್ಬರ ನಡುವೆ ಅಸಲಿಗೆ ಯಾವ ವಿಷಯದ ಬಗ್ಗೆ ಚರ್ಚೆ ನಡೆಯಿತು ಅನ್ನೋದನ್ನು ಲಕ್ಷ್ಮಣ್ ಮಾಧ್ಯಮಗಳಿಗೆ ಹೇಳಿದರು. ವಿಷಯಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ಸಿದ್ದರಾಮಯ್ಯ ನೀಡಿದ ಹೇಳಿಕೆ ಮತ್ತು ಲಕ್ಷ್ಮಣ್ ನೀಡುವ ಸ್ಪಷ್ಟನೆಗೆ ತಾಳೆಯಾಗುತ್ತಿದೆ ಮಾರಾಯ್ರೇ.

ಸಿದ್ದರಾಮಯ್ಯ ಶಾಲೆಗಳ ದುರಸ್ತಿಗಾಗಿ ಸಿಎಸ್ ಆರ್ ಫಂಡ್ ಬಗ್ಗೆ ಹೇಳಿದ್ದರು. ಲಕ್ಷ್ಮಣ್ ಆ 5 ಶಾಲೆಗಳು ಯಾವವು ಅನ್ನೋದನ್ನು ಓದಿ ಹೇಳಿದರಲ್ಲದೆ, ಮಹಾದೇವು ಹೆಸರಿನ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಮತ್ತೊಂದು ಲಿಸ್ಟ್ ತೆಗೆದುಕೊಂಡ ಸಿಎಂ ಬಳಿ ಹೋದಾಗ, ಯತೀಂದ್ರ ತಾನು ಕಳಿಸಿದ ಪಟ್ಟಿಯನ್ನೇ ಪರಿಗಣಿಸುವಂತೆ ಮುಖ್ಯಮಂತ್ರಿಗಳಿಗೆ ಹೇಳುತ್ತಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಅವರ ಒಎಸ್​ಡಿ (ಆಫೀಸರ್ ಆನ್ ಸ್ಪೆಶಲ್ ಡ್ಯೂಟಿ) ಮಹಾದೇವ್ ಮತ್ತು ಈ ಮಹಾದೇವು ಬೇರೆ ಬೇರೆ ವ್ಯಕ್ತಿಗಳು ಎಂದು ಹೇಳಿದ ಅವರು ವಿಷಯವನ್ನೇ ಅರ್ಥಮಾಡಿಕೊಳ್ಳದೆ, ಸಿಎನ್ ಅಶ್ವಥ್ ನಾರಾಯಣ ಮತ್ತು ಹೆಚ್ ಡಿ ಕುಮಾರಸ್ವಾಮಿ ಬಾಯಿಗೆ ಬಂದಂತೆ ಅರೋಪ ಮಾಡುತ್ತಿದ್ದಾರೆ ಎಂದರು. ಒಂದು ಕಾಮನ್ ಸೆನ್ಸ್ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. ವರ್ಗಾವಣೆ ಧಂದೆಯಾಗಿದ್ದರೆ, ಯತೀಂದ್ರ ಹಾಗೆ ಸಾರ್ವಜನಿಕೆ ನಡುವೆ ನಿಂತು ಎಲ್ಲರಿಗೂ ಕೇಳುವಂತೆ ಮಾತಾಡುತ್ತಿದ್ದರೆ? ಕುಮಾರಸ್ವಾಮಿ ಮತ್ತು ಅಶ್ವಥ್ ನಾರಾಯಣ ಇಬ್ಬರೂ ವಿದ್ಯಾವಂತರೇ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ