ಚಿಕ್ಕಮಗಳೂರು: ಕಬ್ಬಿನ ಗದ್ದೆಯಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು; ನಗರಕ್ಕೆ ಬರದಂತೆ ಓಡಿಸಲು ಹರಸಾಹಸ
ನಲ್ಲೂರಿನಲ್ಲಿ 6 ಕಾಡಾನೆಗಳನ್ನು ಮತ್ತೆ ಕಾಡಿಗಟ್ಟುವ ಕಾರ್ಯಾಚರಣೆ ಮುಂದುವರೆದಿದೆ. ಕಬ್ಬಿನ ಗದ್ದೆಯಲ್ಲಿ ಬೀಡುಬಿಟ್ಟಿರುವ ಭುವನೇಶ್ವರಿ ಗ್ಯಾಂಗ್‌ನ ಆರು ಕಾಡಾನೆ(Elephant)ಗಳನ್ನು ಮತ್ತೆ ಅರಣ್ಯಕ್ಕೆ ಓಡಿಸಲು 3 ಸಾಕಾನೆಗಳನ್ನು ಬಳಸಿ ಅರಣ್ಯ ಇಲಾಖೆಯ ನೂರಾರು ಸಿಬ್ಬಂದಿಯಿಂದ ಕಾರ್ಯಾಚರಣೆ ಶುರುವಾಗಿದೆ.
ಚಿಕ್ಕಮಗಳೂರು, ನ.16: ನಲ್ಲೂರಿನಲ್ಲಿ 6 ಕಾಡಾನೆಗಳನ್ನು ಮತ್ತೆ ಕಾಡಿಗಟ್ಟುವ ಕಾರ್ಯಾಚರಣೆ ಮುಂದುವರೆದಿದೆ. ಕಬ್ಬಿನ ಗದ್ದೆಯಲ್ಲಿ ಬೀಡುಬಿಟ್ಟಿರುವ ಭುವನೇಶ್ವರಿ ಗ್ಯಾಂಗ್‌ನ ಆರು ಕಾಡಾನೆ(Elephant)ಗಳನ್ನು ಮತ್ತೆ ಅರಣ್ಯಕ್ಕೆ ಓಡಿಸಲು 3 ಸಾಕಾನೆಗಳನ್ನು ಬಳಸಿ ಅರಣ್ಯ ಇಲಾಖೆಯ ನೂರಾರು ಸಿಬ್ಬಂದಿಯಿಂದ ಕಾರ್ಯಾಚರಣೆ ಶುರುವಾಗಿದೆ. ಚಿಕ್ಕಮಗಳೂರು(Chikkamagaluru) ನಗರದಿಂದ ಕೇವಲ ಒಂದು ಕಿ.ಮೀ ದೂರದಲ್ಲಿ ಕಾಡಾನೆಗಳ ಹಿಂಡಿದೆ. ಅವು ನಗರ ಪ್ರವೇಶಿಸದಂತೆ ಓಡಿಸಲಾಗುತ್ತಿದೆ. ಮುನ್ನೆಚ್ಚರಿಕೆಯಿಂದ ಕಾರ್ಯಾಚರಣೆ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಕೂಡ ಅಳವಡಿಸಲಾಗಿದೆ. ಭುವನೇಶ್ವರಿ ಗ್ಯಾಂಗ್‌ನ ಕಾಡಾನೆಗಳ ಉಪಟಳಕ್ಕೆ ಬೇಸತ್ತಿದ್ದ ಗ್ರಾಮಸ್ಥರ ಆಕ್ರೋಶ ಹಿನ್ನೆಲೆ ಅರಣ್ಯ ಸಿಬ್ಬಂದಿಯಿಂದ ಈ ಕಾರ್ಯಾಚರಣೆ ನಡೆಸಲಾಗಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Latest Videos