ಈ ವರ್ಷವೂ ಗಂಗಾವತಿಯ ಪಂಪಾ ಸರೋವರ ಬಳಿ ಹನುಮ ಮಾಲೆ ಧರಿಸಿದ ಕೆಆರ್ಪಿಪಿ ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕೆಲ ಕ್ಷೇತ್ರಗಳಲ್ಲಿ ಮಾತ್ರ ಕಣಕ್ಕಿಳಿಸುವುದಾಗಿ ಕೆಆರ್ ಪಿಪಿ ಸಂಸ್ಥಾಪಕ ಮತ್ತು ಅಧ್ಯಕ್ಷ ಜನಾರ್ಧನ ರೆಡ್ಡಿ ಹೇಳಿದರು. ಪಕ್ಷದ ಕ್ಯಾಂಟಿಡೇಟ್ ಗೆಲ್ಲುವ ಅವಕಾಶವಿರುವ ಕ್ಷೇತ್ರಗಳಲ್ಲಿ ಮಾತ್ರ ತಮ್ಮ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.
ಕೊಪ್ಪಳ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) ಅವರು ಹಿಂದೆ ಬಿ ಎಸ್ ಯಡಿಯೂರಪ್ಪ (BS Yediyurappa) ಮಂತ್ರಿಮಂಡಲದಲ್ಲಿ ಸಚಿವರಾಗಿದ್ದಾಗ ಭಾಗಿಯಾಗಿದ್ದ ಹಗರಣಗಳು ಏನೇ ಆಗಿರಲಿ, ಅವರೊಬ್ಬ ದೈವಭಕ್ತ (god-fearing person) ಅನ್ನೋದು ನಿರ್ವಿವಾದಿತ. ಅವರು ಕಳೆದ ವರ್ಷವೂ ಹನುಮ ಮಾಲೆ ಧರಿಸಿದ್ದನ್ನು ನಾವು ವರದಿ ಮಾಡಿದ್ದೇವೆ. ಬೆಳಗಾವಿಯಲ್ಲಿ ನಡೆದ ಚಳಿಗಾಲದ ವಿಧಾನ ಸಭಾ ಅಧಿವೇಶನದಲ್ಲಿ ಭಾಗಿಯಾಗಿ ಸ್ವಕ್ಷೇತ್ರಕ್ಕೆ ವಾಪಸ್ಸಾಗಿರುವ ಅವರು ಇಂದು ಬೆಳಗ್ಗೆ ಗಂಗಾವತಿಗೆ ಹತ್ತಿರದಲ್ಲಿರುವ ಪಂಪಾ ಸರೋವರದ ದಡದಲ್ಲಿ ಕುಳಿತು ಅರ್ಚಕರಿಂದ ಪೂಜಾ ವಿಧಿಗಳು ಪೂರ್ಣಗೊಂಡ ಬಳಿಕ ಹನುಮ ಮಾಲೆ ಧರಿಸಿದರು. ಮಾಲೆಧಾರಿ ರೆಡ್ಡಿ ಸರೋವರದಿಂದ ಆಚೆ ಬರಿಗಾಲಲ್ಲಿ ನಡೆದು ಬರುವುದನ್ನು ದೃಶ್ಯಗಳಲ್ಲಿ ನೋಡಹುದು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜನಾರ್ಧನ ರೆಡ್ಡಿ, ಸರಿಯಾಗಿ ಒಂದು ವರ್ಷದ ನಂತರ ಹನುಮ ಮಾಲೆ ಧರಿಸಿರುವುದಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ