ಡಿಕೆಶಿ ಜೈಲಿಗೆ ಹೋಗೋದನ್ನ ಸಿದ್ದರಾಮಯ್ಯ ಬಯಸ್ತಾರೆ ಎಂದ ಕೆಎಸ್​ ಈಶ್ವರಪ್ಪ; ಇಲ್ಲಿದೆ ವಿಡಿಯೋ

Edited By: ಕಿರಣ್ ಹನುಮಂತ್​ ಮಾದಾರ್

Updated on: Oct 20, 2023 | 3:18 PM

ಡಿಕೆ ಶಿವಕುಮಾರ್​ ಅವರು ನೈತಿಕತೆ ಹೊತ್ತು ರಾಜೀನಾಮೆ ಕೊಡಬೇಕೆಂಬ ಎಂದು ಹೇಳಿದರು. ಈ ಕುರಿತು ಸಿಎಂ ಗೆ ಹೇಳುತ್ತೇನೆ, ಡಿಕೆಶಿ ಅವರಿಗೆ ಸಾಕಷ್ಟು ಭಂಡತನ ಇದೆ. ಅವರು ರಾಜೀನಾಮೆ ಕೊಡಲ್ಲ. ನಿಮಗೇನಾದರೂ ನೈತಿಕತೆ ಇದ್ದರೆ ನಿಮ್ಮ ಸರಕಾರದ ಡಿಸಿಎಮ್​ನ್ನು ಕಿತ್ತು ಬಿಸಾಕಿ ಎಂದು ಕೆಎಸ್​ ಈಶ್ವರಪ್ಪ ಹೇಳಿದರು.

ಬಾಗಲಕೋಟೆ, ಅ.20: ಡಿಸಿಎಂ ಡಿಕೆ ಶಿವಕುಮಾರ್ ​ ಮೇಲಿನ ತನಿಖೆಗೆ ಹೈಕೋರ್ಟ್​ ಅಸ್ತು ಎಂದಿದೆ. ಈ ಕುರಿತು ಜಿಲ್ಲೆಯ ಬಾದಾಮಿಯ ಬನಶಂಕರಿಯಲ್ಲಿ ಮಾತನಾಡಿದ ಬಿಜೆಪಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ(KS Eshwarappa)  ಅವರು ‘ಡಿಕೆ ಶಿವಕುಮಾರ್​ ಅವರು ನೈತಿಕತೆ ಹೊತ್ತು ರಾಜೀನಾಮೆ ಕೊಡಬೇಕೆಂಬ ಎಂದು ಹೇಳಿದರು. ಈ ಕುರಿತು ಸಿಎಂ ಗೆ ಹೇಳುತ್ತೇನೆ, ಡಿಕೆಶಿ ಅವರಿಗೆ ಸಾಕಷ್ಟು ಭಂಡತನ ಇದೆ. ಅವರು ರಾಜೀನಾಮೆ ಕೊಡಲ್ಲ. ನಿಮಗೇನಾದರೂ ನೈತಿಕತೆ ಇದ್ದರೆ ನಿಮ್ಮ ಸರಕಾರದ ಡಿಸಿಎಮ್​ನ್ನು ಕಿತ್ತು ಬಿಸಾಕಿ. ಸಿಬಿಐ ಕೋರ್ಟ್ ಅವರು, ಡಿಕೆಶಿಯವರದ್ದು ತಪ್ಪೇನಿಲ್ಲ ಎಂದು ಆದೇಶ ಕೊಟ್ಟರೆ, ಮಾರನೇ ದಿನವೇ ಅವರನ್ನು ಉಪಮುಖ್ಯಮಂತ್ರಿನೋ ಅಥವಾ ಮುಖ್ಯಮಂತ್ರಿ ಮಾಡುತ್ತಿರೋ ನಿಮ್ಮ ಪಕ್ಷಕ್ಕೆ ಸೇರಿದ್ದು ಎಂದರು. ಇನ್ನು ಇದೇ ವೇಳೆ ಡಿಸಿಎಂ ಅವರ ಅಕ್ರಮ ಕುರಿತು ಸಿಎಂ ಮೌನವಹಿಸಿದ ವಿಷಯ ‘ಹೌದು, ಸಿಎಂ ಸಿದ್ದರಾಮಯ್ಯ ಅವರಿಗೆ ಡಿಕೆಶಿ ಅವರ ಅಕ್ರಮದ ಬಗ್ಗೆ ಗೊತ್ತಿದೆ. ಈ ಹಿನ್ನಲೆ ಅವರು ಮಾತನಾಡುತ್ತಿಲ್ಲ ಎಂದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ರವಿ ಹೆಚ್ ಮೂಕಿ, ಕಲಘಟಗಿ

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More