ಬೆಂಗಳೂರಲ್ಲಿ 250 ಮೀಟರ್​ ಎತ್ತರದ ‘ಸ್ಕೈ ಡೆಸ್ಕ್’ ನಿರ್ಮಾಣಕ್ಕೆ ಡಿಕೆ ಶಿವಕುಮಾರ್​​​ ಪ್ರಸ್ತಾಪ: ಇಲ್ಲಿದೆ ಮಾಹಿತಿ

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸರ್ಕಾರ ಇತ್ತೀಚೆಗೆ ಸುರಂಗ ಮಾರ್ಗದ ಪರಿಕಲ್ಪನೆಯನ್ನು ತೆರೆದಿಟ್ಟಿತ್ತು. ಇದೀಗ ಅದೇ ರೀತಿಯಾಗಿ ಮತ್ತೊಂದು ಯೋಜನೆಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ನಗರದಲ್ಲಿ 250 ಮೀಟರ್​ ಎತ್ತರದ ಸ್ಕೈ ಡೆಸ್ಕ್ ನಿರ್ಮಾಣಕ್ಕೆ ಡಿಸಿಎಂ ಡಿಕೆ ಶಿವಕುಮಾರ್​ ಪ್ರಸ್ತಾಪ ಮಾಡಿದ್ದಾರೆ.

ಬೆಂಗಳೂರಲ್ಲಿ 250 ಮೀಟರ್​ ಎತ್ತರದ ‘ಸ್ಕೈ ಡೆಸ್ಕ್’ ನಿರ್ಮಾಣಕ್ಕೆ ಡಿಕೆ ಶಿವಕುಮಾರ್​​​ ಪ್ರಸ್ತಾಪ: ಇಲ್ಲಿದೆ ಮಾಹಿತಿ
ಸ್ಕೈ ಡೆಸ್ಕ್ ಯೋಜನೆ
Follow us
|

Updated on:Oct 19, 2023 | 4:40 PM

ಬೆಂಗಳೂರು, ಅಕ್ಟೋಬರ್​​ 19: ನಗರದಲ್ಲಿ ಸಂಚಾರ ದಟ್ಟಣೆ ಒಂದು ಸವಾಲಾಗಿ ಪರಿಣಮಿಸಿದೆ. ಈ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸರ್ಕಾರ ಇತ್ತೀಚೆಗೆ ಸುರಂಗ ಮಾರ್ಗದ ಪರಿಕಲ್ಪನೆಯನ್ನು ತೆರೆದಿಟ್ಟಿತ್ತು. ಇದೀಗ ಅದೇ ರೀತಿಯಾಗಿ ಮತ್ತೊಂದು ಯೋಜನೆಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಹಾಗಾದರೆ ಆ ಯೋಜನೆ ಏನು ಅಂದರೆ, ಬೆಂಗಳೂರಿನಲ್ಲಿ 250 ಮೀಟರ್​ ಎತ್ತರದ ಸ್ಕೈ ಡೆಸ್ಕ್ (Skydeck) ನಿರ್ಮಾಣಕ್ಕೆ ಮಂಗಳವಾರ ಡಿಸಿಎಂ ಡಿಕೆ ಶಿವಕುಮಾರ್ (DK Shivakumar)​ ಪ್ರಸ್ತಾಪ ಮಾಡಿದ್ದಾರೆ. ಒಂದು ವೇಳೆ ಈ ಸ್ಕೈ ಡೆಸ್ಕ್ ನಿರ್ಮಾಣವಾದರೆ ದೇಶದ ಅತಿ ಎತ್ತರದ ವೀಕ್ಷಣಾ ಗೋಪುರ ಎಂಬ ಹೆಗ್ಗಳಿಕೆ ಪಡೆಯಲಿದೆ.

ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಕೆ ಶಿವಕುಮಾರ್​​, ಯೋಜನೆಗೆ ತಗುಲುವ ವೆಚ್ಚ ಮತ್ತು ಅದರ ನಿರ್ಮಾಣಕ್ಕೆ ಬೇಕಾದ 8-10 ಎಕರೆ ಭೂಮಿಯನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸ್ಕೈ ಡೆಸ್ಕ್ ಯೋಜನೆಯು ಆಲದ ಮರದ ರಚನೆಯಲ್ಲಿರಲಿದ್ದು, 250 ಮೀಟರ್ ಎತ್ತರವಿರಲಿದೆ.

ಸ್ಕೈ ಡೆಸ್ಕ್ ​​ ಯೋಜನೆಯನ್ನು ವಿಶ್ವ ವಿನ್ಯಾಸ ಸಂಸ್ಥೆ (ಡಬ್ಲ್ಯುಡಿಒ) ಸಹಯೋಗದೊಂದಿಗೆ ಆಸ್ಟ್ರೀಯ ಮೂಲದ ವಿನ್ಯಾಸ ಮತ್ತು ವಾಸ್ತುಶಿಲ್ಪ ಸಂಸ್ಥೆಯಾಗಿರುವ ಕೋಪ್ ಹಿಮ್ಮೆಲ್ಬ್ (ಎಲ್) ಎಯು ಈ ಯೋಜನೆಯನ್ನು ವಿನ್ಯಾಸಗೊಳಿಸಲಿದೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಡಿಕೆ ಶಿವಕುಮಾರ್​​, ಆಸ್ಟ್ರೀಯಾ ಮೂಲದ COOP HIMMELB(L)AU ಸಂಸ್ಥೆಯು ವರ್ಲ್ಡ್‌ ಡಿಸೈನ್ ಆರ್ಗನೈಸೇಶನ್ ಸಹಕಾರದೊಂದಿಗೆ ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಕೈ ಡೆಸ್ಕ್ ಯೋಜನೆಯನ್ನು ಪರಿಶೀಲಿಸಿದೆ. ಇದು ನಿರ್ಮಾಣವಾದ ನಂತರ ದೇಶದಲ್ಲೇ ಅತಿ ಎತ್ತರದ ವೀಕ್ಷಣಾ ಗೋಪುರ ಎನ್ನುವ ಕೀರ್ತಿಗೆ ಪಾತ್ರವಾಗಲಿದೆ. ಯೋಜನೆಯ ಅನುಷ್ಠಾನಕ್ಕೆ ಸೂಕ್ತವಾದ 8-10 ಎಕರೆ ಭೂಮಿಯನ್ನು ಗುರುತಿಸುವುದರ ಜೊತೆಗೆ ಆರ್ಥಿಕ ಕಾರ್ಯಸಾಧ್ಯತೆಯನ್ನು ನಿರ್ಣಯಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ ಎಂದು ಮಾಹಿತಿ ನೀಡಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್​ ಟ್ವೀಟ್​​ 

ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಈ ಹಿಂದೆ ಡಿಕೆ ಶಿವಕುಮಾರ್​​​ ಪ್ರಸ್ತಾಪಿಸಿದ್ದ ಸುರಂಗ ಮಾರ್ಗ ಯೋಜನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ಮತ್ತು ಸಾಮೂಹಿಕ ಸಾರಿಗೆ ವ್ಯವಸ್ಥೆಗಳ ಅಭಿವೃದ್ಧಿಯು ಸಂಚಾರ ದಟ್ಟಣೆಯನ್ನು ನಿವಾರಿಸಲು ಸುಸ್ಥಿರವಾಗಿರುತ್ತದೆ ಎಂದು ತಜ್ಞರು ಹೇಳಿದ್ದರು.

ಈ ಯೋಜನೆ ನಿರ್ಮಾಣವಾದರೆ, ಮೊದಲ ಹಂತಕ್ಕೆ ಮಾತ್ರ 22,000 ಕೋಟಿ ರೂ.ಗಳ ಆರಂಭಿಕ ಹೂಡಿಕೆಯ ಅಗತ್ಯವಿದೆ. ಸಿಂಗಾಪುರದ ಸುರಂಗ ಮಾರ್ಗಗಳ ಸ್ಫೂರ್ತಿ ಪಡೆದಿದ್ದು, ಇದು 99 ಕಿಲೋಮೀಟರ್ ಉದ್ದದ ಯೋಜನೆಯಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:40 pm, Thu, 19 October 23